ಬೆಂಗಳೂರು : ಪೇಸಿಎಂ ಹೋಲುವ ಸೇಸಿಎಂ ಕರ್ನಾಟಕ ಕಾಂಗ್ರೆಸ್ QR ಕೋಡ್ ಅನ್ನು ಪ್ರಾರಂಭಿಸಿರುವ ಹಿನ್ನಲೆಯಲ್ಲಿ ಒಂದು ಕಾಲದಲ್ಲಿ ಸಿದ್ದರಾಮಯ್ಯನವರ ಕೈಯಲ್ಲಿದ್ದ ವಾಚಿನ ಬಗ್ಗೆ ಬಿಜೆಪಿ ರಾಜ್ಯ ಘಟಕ ಪ್ರಶ್ನೆ ಮಾಡಿದೆ.
ಕರ್ನಾಟಕ ಕಾಂಗ್ರೆಸ್ ಇಂದು SayCM.com ಅನ್ನು ಪ್ರಾರಂಭಿಸಿದೆ, SayCM QR ಕೋಡ್ ಅಡಿಯಲ್ಲಿ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ಸರ್ಕಾರವು 2018 ರಲ್ಲಿ ನೀಡಿದ್ದ 600 ಪ್ರಣಾಳಿಕೆಗಳಲ್ಲಿ 90% ಭರವಸೆಗಳನ್ನು ಈಡೇರಿಸಲು ವಿಫಲವಾಗಿದೆ.
ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಕಾಂಗ್ರೆಸ್ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಅವರು ಆಡಳಿತಾರೂಢ ಬಿಜೆಪಿಗೆ ಎಚ್ಚರಿಕೆ ನೀಡಿದ್ದರು, “PayCM ಮಾತ್ರ ನಿಮ್ಮನ್ನು ಮಾತನಾಡುವಂತೆ ಮಾಡಿದರೆ, ನಿಮ್ಮ ವೈಫಲ್ಯಗಳಿಗೆ ಉತ್ತರಿಸಲು ನಾವು SayCM ಅನ್ನು ಪ್ರಾರಂಭಿಸುತ್ತೇವೆ.”ಎಂದು ಹೇಳಿದ್ದರು.
ಇಂದು ,ಕರ್ನಾಟಕ ಕಾಂಗ್ರೆಸ್ PayCm ಅನ್ನು ಹೋಲುವ QR ಕೋಡ್ ಅನ್ನು ಪ್ರಾರಂಭಿಸಿದ್ದಾರೆ, ಅದರೆ ಬಳಕೆದಾರರನ್ನು SayCm.com ಗೆ ಕರೆದೊಯ್ಯುತ್ತದೆ.
ಕರ್ನಾಟಕ ಕಾಂಗ್ರೆಸ್ ಈಗಾಗಲೇ PayCM ನೊಂದಿಗೆ ಪೋಸ್ಟರ್ ಪ್ರಚಾರವನ್ನು ಮಾಡಿದೆ, ಈಗ ಮತ್ತೆ ‘SayCM’ ಮೂಲಕ ಪ್ರಚಾರ ಮಾಡುತ್ತಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯ ಘಟಕ, ʼ ಸೇ ಸಿಎಂ ಎಂದು ಪ್ರಶ್ನಿಸುವ ಮುನ್ನ ಕಾಂಗ್ರೆಸಿಗರು ಒಂದು ಪ್ರಶ್ನೆಗೆ ಉತ್ತರಿಸಲಿ. ಸಿದ್ದರಾಮಯ್ಯ ಅವರ ಕೈಯಲ್ಲಿ ಒಂದು ಕಾಲದಲ್ಲಿ ಮಿಂಚಿದ್ದ ವಾಚು ಕೊಂಡು ತಂದಿದ್ದೋ, ಕದ್ದು ತಂದಿದ್ದೋ ? ಎಂದು ಕೇಳಿದ್ದುಸಿದ್ದರಾಮಯ್ಯ ನಿಮಲ್ಲಿ ಉತ್ತರವಿದೆಯೇ? ಎಂದು ಸಿದ್ದರಾಮಯ್ಯನವರಿಗೆ ಪ್ರಶ್ನೆ ಮಾಡಿದೆ.