Home ಬೆಂಗಳೂರು ಸಾವರ್ಕರ್ ಜನ್ಮದಿನದಂದೇ ಅವರ ಹೆಸರಿನ ಫ್ಲೈ ಓವರ್‌ ಹೆಸರು ಬದಲಾಯಿಸಿದ ಕಾಂಗ್ರೆಸ್‌ ವಿದ್ಯಾರ್ಥಿ ವಿಭಾಗ

ಸಾವರ್ಕರ್ ಜನ್ಮದಿನದಂದೇ ಅವರ ಹೆಸರಿನ ಫ್ಲೈ ಓವರ್‌ ಹೆಸರು ಬದಲಾಯಿಸಿದ ಕಾಂಗ್ರೆಸ್‌ ವಿದ್ಯಾರ್ಥಿ ವಿಭಾಗ

0

ಯಲಹಂಕದಲ್ಲಿ ಹಿಂದುತ್ವವಾದಿ ಸಾವರ್ಕರ್ ಅವರ ಹೆಸರಿನ ಮೇಲ್ಸೇತುವೆಗೆ ಮಂಗಳವಾರ ಕಪ್ಪು ಮಸಿ ಬಳಿಯಲಾಗಿದೆ. ಕಾಂಗ್ರೆಸ್‌ ಪಕ್ಷದ ವಿದ್ಯಾರ್ಥಿ ವಿಭಾಗವಾದ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾದ ಸದಸ್ಯರು ಸೈನ್‌ಬೋರ್ಡನ್ನು ವಿರೂಪಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಸಾವರ್ಕರ್ ಅವರ ಜನ್ಮದಿನವಾದ ಮೇ 28ರ ಮಂಗಳವಾರ ಈ ಘಟನೆ ನಡೆದಿದೆ.

ಆಂಗ್ಲ ಮತ್ತು ಕನ್ನಡದಲ್ಲಿ ವೀರ್ ಸಾವರ್ಕರ್ ಅವರ ಹೆಸರನ್ನು ಹೊಂದಿರುವ ನೀಲಿ ಫಲಕದ ಮೇಲೆ ವ್ಯಕ್ತಿಯೊಬ್ಬ ಕಪ್ಪು ಶಾಯಿ ಎರಚುತ್ತಿರುವ ದೃಶ್ಯಗಳು ಸ್ಥಳದಲ್ಲಿ ಕಂಡುಬಂದವು.

ಮತ್ತೊಬ್ಬ ವ್ಯಕ್ತಿ ಅವನೊಂದಿಗೆ ಕೆಂಪು ಬಣ್ಣದಲ್ಲಿ ಬರೆಯಲಾದ “ಭಗತ್ ಸಿಂಗ್ ಫ್ಲೈಓವರ್” ಎಂದು ಬರೆದಿರುವ ಬಿಳಿ ಬ್ಯಾನರ್ ಅನ್ನು ಬಿಚ್ಚುತ್ತಿರುವುನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಕಾರ್ಯಕರ್ತರು ಸಾವರ್ಕರ್ ಹೆಸರನ್ನು ಮುಚ್ಚಲು ಬಿಳಿ ಬ್ಯಾನರ್ ಬಳಸಿದ್ದಾರೆ.

ಈ ಮೇಲ್ಸೇತುವೆಗೆ ಭಗತ್ ಸಿಂಗ್ ಅವರಂತಹ ನಿಜವಾದ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಮರುನಾಮಕರಣ ಮಾಡಬೇಕು ಎಂದು ಎನ್ ಎಸ್ ಯುಐ ಆಗ್ರಹಿಸಿದೆ.

400 ಮೀಟರ್ ಉದ್ದದ ಮೇಲ್ಸೇತುವೆಯನ್ನು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು 2020ರಲ್ಲಿ ಉದ್ಘಾಟಿಸಿದರು.

ಈ ಹಿಂದೆ ಮೇಲ್ಸೇತುವೆಗೆ ಸಾವರ್ಕರ್ ಅವರ ಹೆಸರನ್ನು ಇಡುವ ಕ್ರಮವನ್ನು ರಾಜ್ಯದ ಪ್ರತಿಪಕ್ಷಗಳು ವಿರೋಧಿಸಿದ್ದವು ಮತ್ತು ಈ ಕ್ರಮವನ್ನು “ರಾಜ್ಯದ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನ” ಎಂದು ಬಣ್ಣಿಸಿದ್ದವು.

You cannot copy content of this page

Exit mobile version