Home ಬೆಂಗಳೂರು ಸಭಾಧ್ಯಕ್ಷರೇ ಬಿಗ್ ಬಾಸ್ ವಿನ್ನರ್ ಗಿಲ್ಲಿ ಅಲ್ಲ, ನಿರ್ಮಲಾ ಸೀತಾರಾಮನ್ – ಪ್ರದೀಪ್ ಈಶ್ವರ್

ಸಭಾಧ್ಯಕ್ಷರೇ ಬಿಗ್ ಬಾಸ್ ವಿನ್ನರ್ ಗಿಲ್ಲಿ ಅಲ್ಲ, ನಿರ್ಮಲಾ ಸೀತಾರಾಮನ್ – ಪ್ರದೀಪ್ ಈಶ್ವರ್

ಬೆಂಗಳೂರು : ಇಂದು (ಜ.27) ಸದನದಲ್ಲಿ ಶಾಸಕ ಪ್ರದೀಪ್ ಈಶ್ವರ್ (Pradeep eshwar) ಅಬ್ಬರದ ಭಾಷಣ ಮಾಡಿದ್ದಾರೆ. ಈ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala sitharaman) ವಿರುದ್ಧ ಕಿಡಿಕಾರಿದ ಪ್ರದೀಪ್ ಈಶ್ವರ್, ಬಿಗ್ ಬಾಸ್ ವಿನ್ನರ್ ಗಿಲ್ಲಿ (Gilli nata) ಅಲ್ಲ, ಅಸಲಿಯಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಿಗ್ ಬಾಸ್ ವಿನ್ನರ್ ಎಂದಿದ್ದಾರೆ. ಹೌದು, ಬಿಗ್ ಬಾಸ್‌ನಲ್ಲಿ ಗಿಲ್ಲಿ ಗೆದ್ದ ಬಹುಮಾನದ ನಗದು ಮೊತ್ತದ ಶೇ. 50ರಷ್ಟು ಹಣ ನಿರ್ಮಲಾ ಸೀತಾರಾಮನ್ ಅವರ ಪಾಲಾಗುತ್ತಿದೆ. ಇನ್ನು ಕೇವಲ ಶೇ. 48ರಷ್ಟು ಮಾತ್ರ ವಿಜೇತ ಗಿಲ್ಲಿಗೆ ಸಿಗುತ್ತದೆ. ಹೀಗಾಗಿ ತೆರಿಗೆ ಮೋಸ ನಡೆಯುತ್ತಿದೆ ಎಂದು ಆರೋಪಿಸಿ ಕೇಂದ್ರದ ಹಣಕಾಸು ನೀತಿಯನ್ನು ಅಣಕಿಸಿದ್ದಾರೆ.

ಇದೇ ವೇಳೆ ರಾಜ್ಯದ ಬಡ ಜನರ ಹೊಟ್ಟೆ ತುಂಬಿಸೋ ಸಿದ್ದರಾಮಯ್ಯ ನನ್ನ ಪಾಲಿನ ಶ್ರೀರಾಮಚಂದ್ರ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ನನ್ನ ಪಾಲಿನ ಶ್ರೀರಾಮಚಂದ್ರ. ರಾಮಮಂದಿರ ನಿರ್ಮಾಣ ಮಾತ್ರ ದೇಶಪ್ರೇಮ ಅಲ್ಲ, ಬಡವರ ಹೊಟ್ಟೆ ತುಂಬಿಸುವುದು ಕೂಡಾ ದೇಶಪ್ರೇಮ. ಆ ಕೆಲಸವನ್ನು ನಮ್ಮ ಮುಖ್ಯಮಂತ್ರಿಗಳು ಮಾಡುತ್ತಿದ್ದಾರೆ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ.

You cannot copy content of this page

Exit mobile version