ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ನುಡಿ ನಮನ | ʼಸಿರಿʼ ಸಂಧಿಯ ಮಹಾನ್‌ ಕಲಾವಿದ ಮಾಚಾರು ಗೋಪಾಲ ನಾಯ್ಕ

CCharan Aivarnad

Charan Aivarnad ವಿಶೇಷ

• 2 ನಿಮಿಷದ ಓದು

ನುಡಿ ನಮನ | ʼಸಿರಿʼ ಸಂಧಿಯ ಮಹಾನ್‌ ಕಲಾವಿದ ಮಾಚಾರು ಗೋಪಾಲ ನಾಯ್ಕ

ಜನಪದ ಕಲಾವಿದ, ತುಳು ಸಿರಿ ಕಾವ್ಯದ ಕಣಜ ಎಂದೇ  ಖ್ಯಾತರಾಗಿದ್ದ ಉಜಿರೆ ಗ್ರಾಮದ ಬೆಳಾಲಿನ ಮಾಚಾರು ಗೋಪಾಲ ನಾಯ್ಕರವರು  ಇಂದು ನಿಧನ ಹೊಂದಿದ್ದಾರೆ. ಅಗಲಿದ ಚೇತನಕ್ಕೆ ಪೀಪಲ್‌ ಮೀಡಿಯಾವು ಗೌರವದ ಅಂತಿಮ ನಮನಗಳನ್ನು ಸಲ್ಲಿಸುತ್ತದೆ.

ತುಳು ಜಾನಪದ ಕಾವ್ಯಗಳಲ್ಲಿ ಕಿರೀಟಪ್ರಾಯವಾದ ಕಾವ್ಯ – ಸಿರಿ ಮಹಾಕಾವ್ಯ. ಈ ಕಂಠಸ್ಥ ಕಾವ್ಯವನ್ನು ಹಾಡುವ ಕೋಗಿಲೆಯೊಂದು ಇಂದು ವಿಧಿವಶವಾಗಿದೆ. ಅವರು ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಬೆಳಾಲಿನ ಮಾಚಾರು ಗೋಪಾಲ ನಾಯ್ಕ. ಅಕ್ಕೆರಸು ಸಿರಿಯ ಕಾವ್ಯವನ್ನು ಬರೋಬ್ಬರಿ 15,683 ಸಾಲುಗಳಲ್ಲಿ ಹಾಡಿದ ಇವರ ಪ್ರತಿಭೆಯನ್ನು ತುಳುನಾಡು ಎಂದಿಗೂ ಮರೆಯಲು ಸಾಧ್ಯವಿಲ್ಲ. 

ಮಹಿಳೆಯೊಬ್ಬಳು ಮಾತೃ ಪ್ರಧಾನ ಕುಟುಂಬ ವ್ಯವಸ್ಥೆಯ ಒಳಗೆ ಪರುಷನ ದಬ್ಬಾಳಿಕೆಯನ್ನು ದಿಟ್ಟವಾಗಿ ಪ್ರತಿಭಟಿಸಿ ತನಗೆ ಮೋಸ ಮಾಡಿದ ಪತಿಗೆ ವಿಚ್ಛೇದನ ನೀಡಿ ಮತ್ತೊಂದು ಮದುವೆಯಾಗುವ ಸಿರಿ ನ್ಯಾಯಕ್ಕಾಗಿ ವ್ಯವಸ್ಥೆಯ ವಿರುದ್ಧ ಪ್ರತಿರೋಧ ಒಡ್ಡುವ ದೊಡ್ಡ ಶಕ್ತಿಯಾಗಿ ಈ ಕಾವ್ಯದಲ್ಲಿ ಕಾಣಿಸಿ ಕೊಳ್ಳುತ್ತಾಳೆ.

ಸಾಮಾನ್ಯವಾಗಿ ಸಿರಿ ಜಾತ್ರೆಗಳಲ್ಲಿ, ಮನೆ ಮತ್ತು ಆಲಡೆಗಳಲ್ಲಿ ನಡೆಯುವ ದಲ್ಯ, ಮದುವೆ, ಮದ್ದು ನೀಡುವಾಗ ಹಾಡುವ ಈ ಕಾವ್ಯವನ್ನು ಕರ್ಗಿ ಶೆಡ್ತಿ, ರಾಮಕ್ಕ ಮುಗ್ಗೇರ್ತಿ, ಲೀಲಾ ಶೆಡ್ತಿ ಮೊದಲಾದವರು ಹಾಡಿದ್ದಾರೆ. ಇದನ್ನು ಸಿರಿ ಸಂಧಿಯ ಸಂಪುಟದಲ್ಲಿ ದಾಖಲಿಸಲಾಗಿದೆ. ತುಳುನಾಡಿನಲ್ಲಿ ನೂರಾರು ಜಾನಪದ ಹಾಡುಗಾರರು ಈ ಸಂಧಿಯನ್ನು ಹಾಡುತ್ತಾರೆ. ಆದರೆ ಬಹಳ ದೀರ್ಘವಾಗಿ ಈ ಹಾಡನ್ನು ಕಟ್ಟಿ ಹಾಡಿದ್ದು ಮಚಾರು ಗೋಪಾಲ ನಾಯ್ಕರವರು.

ಫಿನ್‌ ಲ್ಯಾಂಡಿನ ಜಾನಪದ ವಿದ್ವಾಂಸ ಲೌರಿ ಹೋಂಕೋ ಉಡುಪಿಯಲ್ಲಿ ನಡೆದ ಫಿನ್‌ ಲ್ಯಾಂಡಿನ ಕಾಲೇವಾಲ ಕಾವ್ಯದ 150 ನೇ ವರ್ಷಾಚರಣೆಗೆ ಬಂದಿದ್ದಾಗ ಅವರು ಫಿನ್ನಿಷ್‌ ಇಂಡಿಯಾ ಜಾನಪದ ದಾಖಲಾತಿಯಲ್ಲಿ ಕೈಗೆತ್ತಿಕೊಂಡ ಯೋಜನೆಗಳಲ್ಲಿ ಸಿರಿ ಮಹಾಕಾವ್ಯದ ಪಠ್ಯೀಕರಣ ಒಂದು. ಬಿ ವಿವೇಕ್‌ ರೈ, ಚಿನ್ನಪ್ಪ ಗೌಡ, ಅನ್ನೇಲಿ ಹೋಂಕೋ ಅವರು ಲೌರಿ ಹೋಂಕೋ ಜೊತೆಗೆ ಸೇರಿಕೊಂಡು ಏಳು ವರ್ಷಗಳ ಈ ಕಾವ್ಯದ ದಾಖಲಾತಿ, ಸಂಪಾದನೆ, ಪ್ರಕಟಣೆಯನ್ನು ಮಾಡಿದರು. 

ಈ ಸಂದರ್ಭದಲ್ಲಿ ಮಾಚಾರು ಗೋಪಾಲ ನಾಯ್ಕರ ಜಗತ್ತಿನಲ್ಲಿ ಅತ್ಯಂತ ದೀರ್ಘವಾದ ಪಠ್ಯಗಳಲ್ಲಿ ಒಂದಾದ ಸಿರಿ ಸಂಧಿ ಬೆಳಕಿಗೆ ಬಂತು. 1990 ಡಿಸೆಂಬರ್‌ 20 ರಂದು ಈ ಸಂಧಿಯನ್ನು ದಾಖಲಿಸಲು ಆರಂಭ ಮಾಡಲಾಯಿತು. ಈ ಕಾವ್ಯವನ್ನು ಗೋಪಾಲ ನಾಯ್ಕರು ಬರೊಬ್ಬರಿ ಒಂಬತ್ತು ದಿನಗಳ ಕಾಲ ಹಾಡಿದರು. ಸರಿ ಸುಮಾರು 25 ಗಂಟೆ!

ಇದಲ್ಲದೆ ಇವರು ಹಾಡಿದ 7,000 ಸಾಲುಗಳ ಕೋಟಿ ಚೆನ್ನಯ ಬೈದ್ಯರ ಸಂಧಿ, 1,800 ಸಾಲುಗಳ ಏಕಸಾಲ್ಯೆರೆ ಸಂಧಿ, 1,150 ಸಾಲುಗಳ ಮೈಸಂದಾಯ ಸಂಧಿ, 2,080 ಸಾಲುಗಳ ಈಶ್ವರ ಸಂಧಿ, 3,000 ಸಾಲುಗಳು ಕೋಡ್ದಬ್ಬು ಸಂಧಿ ದಾಖಲಾಗಿವೆ. ಸಿರಿ ಜಾತ್ರೆ ಹಾಗೂ ದಲ್ಯದಲ್ಲಿ ಕುಮಾರನಾಗಿ ಸಿರಿ ಬಳಗವನ್ನು ಸಂತೈಸುವ ಇವರು ಕಬಿತೆ, ಅಜ್ಜಿಕತೆ ಮೊದಲಾದ ಜಾನಪದ ಸಂಪತ್ತಿನ ಗಣಿಯಾಗಿದ್ದರು.

ಸಿರಿ ಯೋಜನೆಯ ಈ ಸಮಗ್ರ ಮಾಹಿತಿಗಳನ್ನು ಫಿನ್ನೆಂಡ್‌ನ ನಾರ್ಡಿಕ್ ಇನ್‌ಸ್ಟಿಟ್ಯೂಟ್ ಆಫ್ ಫೋಕ್‌ಲೋರ್ ನ ಸಿರಿ ಆರ್ಕೈವ್ ನಲ್ಲಿ ಇಡಲಾಗಿದೆ. ಉಡುಪಿಯ ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರದಲ್ಲಿ ಇದೆ. ಈ ಸಂಗ್ರಹದಲ್ಲಿ 350 ಗಂಟೆಗಳ ಅಡಿಯೊ, 250 ಗಂಟೆಗಳ ವಿಡಿಯೊ, ಸುಮಾರು 5,000 ಫೋಟೊಗಳು ಇವೆ. 

ಗೋಪಾಲ ನಾಯ್ಕರು ಹಾಡಿದ ಈ ಸಂಧಿಯನ್ನು  THE SIRI EPIC as performed by Gopala Naika ಎಂದು ಸಂಪುಟವಾಗಿ ಪ್ರಕಟಿಸಲಾಗಿದೆ.

ಇಂದು ನಮ್ಮನ್ನಗಲಿದ ಮಾಚಾರು ಗೋಪಾಲ ನಾಯ್ಕರಿಗೆ ಗೌರವದ ಅಂತಿಮ ನಮನಗಳು

ಚರಣ್‌ ಐವರ್ನಾಡು

ವಿಷಯಗಳು: #india #kannada #karnataka #peepal #peepalmedia
CCharan Aivarnad

Charan Aivarnad

Peepal Media · ವಿಶೇಷ ವಿಭಾಗ

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದವರು. ಜಾನಪದ, ಇತಿಹಾಸ, ರಾಜಕೀಯ, ಸಾಂಸ್ಕೃತಿಕ ಅಧ್ಯಯನ, ಸಬಾಲ್ಟರ್ನ್‌ ಸ್ಟಡೀಸ್, ಭಾಷೆ, ಸಾಂಸ್ಕೃತಿಕ ರಾಜಕಾರಣ ಇವರ‌ ಆಸಕ್ತಿಯ ಕ್ಷೇತ್ರಗಳು.

ಸಂಬಂಧಿತ ಸುದ್ದಿಗಳು