Home ಬೆಂಗಳೂರು ಫೆ.14ರಿಂದ ಮಹಿಳೆಯರಿಗಾಗಿಯೇ ಇರುವ ವಿಶೇಷ ʼಸಖಿ ಆಟೋ ಪ್ರಾರಂಭ

ಫೆ.14ರಿಂದ ಮಹಿಳೆಯರಿಗಾಗಿಯೇ ಇರುವ ವಿಶೇಷ ʼಸಖಿ ಆಟೋ ಪ್ರಾರಂಭ

ಬೆಂಗಳೂರು: ಮಹಿಳಾ ಪ್ರಯಾಣಿಕರು ಕೆಲವೊಮ್ಮೆ ಟ್ಯಾಕ್ಸಿ, ಆಟೋ ಇಂತಹ ರೈಡಿಂಗ್‌ ಫ್ಲಾಟ್ ಫಾರ್ಮ್ ಗಳ ಮೂಲಕ ಸಂಚಾರ ಮಾಡುವಾಗ ಹಲವು ಅಹಿತಕರ ಘಟನೆಗಳು ನಡೆದಿರುವ ಸಾಧ್ಯತೆಗಳಿವೆ. ಇದಕ್ಕೆ ಪರಿಹಾರವಾಗಿ ಸದ್ಯ, ಬೆಂಗಳೂರಿನಲ್ಲಿ ಸಖಿ ಎಂಬ ರೈಡಿಂಗ್ ಫ್ಲಾಟ್‌ ಫಾರ್ಮ್‌ ಫೆ.14ರಿಂದ ಮಹಿಳೆಯರಿಗಾಗಿಯೇ ಮಹಿಳಾ ಆಟೋ ಚಾಲಕರನ್ನು ಒಳಗೊಂಡ ವಿಶೇಷ ಆಟೋ ಸರ್ವೀಸ್‌ ಆರಂಭಿಸಲಿದೆ. ಮಹಿಳಾ ಚಾಲಕರು ಹಾಗೂ ಪ್ರಯಾಣಿಕರಿಗಾಗಿಯೇ ವಿಶೇಷವಾಗಿ ರೂಪಿಸಿರುವ ಈ ಸಖಿ ಎಂಬ ಫ್ಲಾಟ್‌ ಫಾರ್ಮ್‌ ರೈಡ್-ಹೇಲಿಂಗ್ ಮಾದರಿಯನ್ನು ಅನುಸರಿಸುತ್ತದೆ. ಜನವರಿಯಲ್ಲಿ ಪ್ರಾಯೋಗಿಕ ನಡೆದ ಚಾಲನೆಯಲ್ಲಿ ಈ ಸೇವೆಯು 1 ವಾರದಲ್ಲಿ ಸುಮಾರು 17 ಟ್ರಿಪ್‌ಗಳನ್ನು ಪೂರ್ಣಗೊಳಿಸಿದೆ.

ಏನಿದು ಸಖಿ? ಈ ಆಲೋಚನೆ ಬಂದಿದ್ದೇಗೆ?

ಸಖಿ ಎಂಬುದು ಈಗಾಗಲೇ ಹೇಳಿದಂತೆ ಮಹಿಳಾ ಪ್ರಮಾಣಿಕರಿಗಾಗಿ ಮಹಿಳಾ ಚಾಲಕರೇ ನಡೆಸುವ ಸಾರಿಗೆ ವ್ಯವಸ್ಥೆ. ಇದು ಬಹುತೇಕ ಓಲಾ, ಉಬರ್‌ ಟ್ಯಾಕ್ಸಿಗಳಂತೆ ಕೆಲಸ ನಿರ್ವಹಿಸುತ್ತೆಯಾದರೂ ಇದರಲ್ಲಿ ಮಹಿಳೆಯರೇ ಇರುವುದು ವಿಶೇಷ. ಸಂಸ್ಥಾಪಕಿ ಕೃಷ್ಣವಿ ಪರೇಖ್ ಮುಂಬೈನಲ್ಲಿ ಅಧ್ಯಯನ ಮಾಡುತ್ತಿದ್ದಾಗ ಮತ್ತು ನಂತರ ಅಲ್ಲಿ ಕೆಲಸ ಮಾಡುತ್ತಿದ್ದಾಗ ಅವರ ಸ್ವಂತ ಪ್ರಯಾಣದ ಅನುಭವಗಳಿಂದ ಈ ಕಲ್ಪನೆ ಹುಟ್ಟಿಕೊಂಡಿದ್ದು, ದ್ವಿಚಕ್ರ ವಾಹನದಲ್ಲಿ ಪುರುಷನ ಹಿಂದೆ ಕುಳಿತುಕೊಳ್ಳುವುದು ನನಗೆ ಎಂದಿಗೂ ಆರಾಮದಾಯಕವಾಗಿರಲಿಲ್ಲ. ತಡರಾತ್ರಿಯಲ್ಲಿ ಕ್ಯಾಬ್ ತೆಗೆದುಕೊಳ್ಳಬೇಕಾದಾಗ, ಕ್ಯಾಬ್ ಚಾಲಕರು ನಿಗದಿಪಡಿಸಿದ ಪಿಕ್-ಅಪ್ ಪಾಯಿಂಟ್ ಹೊರತುಪಡಿಸಿ ಬೇರೆ ಸ್ಥಳಗಳಿಗೆ ಬರಲು ಕೇಳಿದಾಗ ನನಗೆ ಅಸುರಕ್ಷಿತ ಭಾವನೆ ಮೂಡಿತಿತ್ತು.

ಅದರಂತಯೇ ಹಲವು ಮಹಿಳೆಯರಿಗೆ ಸಾಂಪ್ರದಾಯಿಕ ಸಾರಿಗೆ ವ್ಯವಸ್ಥೆಗಳನ್ನು ಬಳಸುವಾಗ ಅದರಲ್ಲೂ ಪ್ರಮುಖವಾಗಿ ರಾತ್ರಿಯ ಸಮಯಗಳಲ್ಲಿ ಮಹಿಳಾ ಪ್ರಯಾಣಿಕರು ಒಂಟಿಯಾಗಿ ಪ್ರಯಾಣಿಸುವಾಗ ಅವರು ಹಲವಾರು ಸಮಸ್ಯೆಗಳನ್ನು ಎದುರಿಸುವ ಪರಿಸ್ಥಿತಿಗಳು ಬಂದೊದಗಬಹುದು. ಇದಕ್ಕೆಲ್ಲಾ ಪರಿಹಾರ ಕಂಡುಕೊಳ್ಳುವ ಪ್ರಯತ್ನವಾಗಿ ಹೆಣ್ಣು ಮಕ್ಕಳಿಗಾಗಿ ಅವರೇ ನಡೆಸುವ ಸಾರಿಗೆ ವ್ಯವಸ್ಥೆಯಿದ್ದರೆ ಉತ್ತಮ ಎಂದು ಖಿ ರೈಡಿಂಗ್‌ ಫ್ಲಾಟ್‌ ಫಾರ್ಮ್‌ ನ ಸಂಸ್ಥಾಪಕಿ ಕೃಷ್ಣವಿ ಪರೇಖ್ ತಿಳಿಸಿದ್ದಾರೆ.

ಸಖಿ ರೈಡಿಂಗ್‌ನ ದರವೆಷ್ಟು? ಬುಕ್‌ ಮಾಡೊದು ಹೇಗೆ?

ಇನ್ನು, ಫೆ.4ರಂದು ಪ್ರಾರಂಭವಾದ ಬಳಿಕ ಆರಂಭಿಕವಾಗಿ ಬೆಳಿಗ್ಗೆ 6 ರಿಂದ ಮಧ್ಯರಾತ್ರಿಯವರೆಗೆ ಕಾರ್ಯನಿರ್ವಹಿಸಲಿದೆ. ಒಂದು ವೇಳೆ ಬೇಡಿಕೆ ಹೆಚ್ಚಾದಲ್ಲಿ ಈ ಸೇವೆಯನ್ನು 24 ಗಂಟೆಗಳ ಕಾಲ ವಿಸ್ತರಿಸಲಿದ್ದು, ಈ ರೈಡಿಂಗ್‌ ಫ್ಲಾಟ್‌ ಫಾರ್ಮ್‌ ಬೇರೆ ವೇದಿಕೆಗಳಂತೆ ಬೆಲೆ ನಿಗದಿ ಹೆಚ್ಚಳ ಮಾದರಿಯನ್ನು ಅನುಸರಿಸುವುದಿಲ್ಲ. ಅಂದರೆ ಮೊದಲ ಎರಡು ಕಿಲೋಮೀಟರ್‌ಗಳಿಗೆ ಕನಿಷ್ಠ ದರ 50 ರೂ., ನಂತರ ಪ್ರತಿ ಹೆಚ್ಚುವರಿ ಕಿಲೋಮೀಟರ್‌ಗೆ 20 ರೂ ನಿಗದಿಯಾಗಿರಲಿದೆ ಎಂದು ಸಂಸ್ಥಾಪಕರಾದ ಕೃಷ್ಣವಿ ಪರೇಖ್ ಮಾಹಿತಿ ನೀಡಿದ್ದಾರೆ.

You cannot copy content of this page

Exit mobile version