Home ರಾಜ್ಯ ಬೆಳಗಾವಿ ಗೃಹಲಕ್ಷ್ಮಿ ಬಾಕಿ ಉಳಿದ 2 ಕಂತುಗಳ ಹಣ ಬಿಡುಗಡೆ ಬಗ್ಗೆ ಸಚಿವೆ ಮಾಹಿತಿ 

ಗೃಹಲಕ್ಷ್ಮಿ ಬಾಕಿ ಉಳಿದ 2 ಕಂತುಗಳ ಹಣ ಬಿಡುಗಡೆ ಬಗ್ಗೆ ಸಚಿವೆ ಮಾಹಿತಿ 

ಬೆಳಗಾವಿ : ರಾಜ್ಯದ ಗೃಹಲಕ್ಷ್ಮಿ (Gruhalakshmi) ಫಲಾನುಭವಿಗಳಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar)​ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಬಾಕಿ ಉಳಿದ 2 ಕಂತುಗಳ ಹಣ (Money) ಬಿಡುಗಡೆ ಬಗ್ಗೆ ಸಚಿವೆ ಮಹತ್ವದ ಮಾಹಿತಿ ನೀಡಿದ್ದಾರೆ.

ಇಂದು ಬೆಳಗಾವಿಯ ಬಾಕ್ಸ್ ಕ್ರಿಕೆಟ್ ಮೈದಾನ ಉದ್ಘಾಟನೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹಲಕ್ಷ್ಮಿಯ ಎರಡು ತಿಂಗಳ ಹಣವನ್ನು ಬಿಡುಗಡೆ ಮಾಡಲಾಗಿದೆ. 26 ಕಂತು ಮನೆ ಯಜಮಾನಿಗೆ ಬಿಡುಗಡೆ ಆಗಿದ್ದು, 52 ಸಾವಿರ ರೂಪಾಯಿಗಳು ಈವರೆಗೆ ಹಣ ಬಿಡುಗಡೆಯಾಗಿವೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಕ್ರಿಕೆಟ್‌ ಮೈದಾನದ ಬಗ್ಗೆ ಮಾತನಾಡಿ, ನಮ್ಮ ಇಲಾಖೆಯಿಂದ 20 ಲಕ್ಷ ಹಾಗೂ ಜಿಲ್ಲಾ ಪಂಚಾಯತ್​​ನಿಂದ 20 ಲಕ್ಷ ಅನುದಾನದಲ್ಲಿ ಮೈದಾನ ಮಾಡಲಾಗಿದೆ. ಈ ಭಾಗದ ನಮ್ಮ‌ ಮಕ್ಕಳಿಗೆ ಅತ್ಯುತ್ತಮವಾದ ಮೈದಾನ ಇದಾಗಿದೆ. ನಮ್ಮ ಸ್ಥಳೀಯ ಶಾಸಕರು 20 ಲಕ್ಷ ಅನುದಾನ ಒದಗಿಸಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಉಚಿತವಾಗಿ ಇಲ್ಲಿ ತರಬೇತಿ ಪಡೆಯಬಹುದು ಎಂದಿದ್ದಾರೆ. ಇದೇ ವೇಳೆ ಗ್ರಾಮೀಣ ಕ್ಷೇತ್ರದಲ್ಲಿ ಮರಗಳ ಮಾರಣಹೋಮ ವಿಚಾರವಾಗಿ ಮಾತಾಡಿದ ಸಚಿವೆಪ್ರಧಾನ ಮಂತ್ರಿಗಳ ಯೋಜನೆಯಲ್ಲಿ 600 ಎಕರೆ ಗುರುತಿಸಿದ್ದಾರೆ. 2021ಕ್ಕೆ ಈ ಸ್ಕೀಂ ಬಂದಿತ್ತು ಎನ್ನಲಾಗಿದೆ. ಆದ್ರೆ ಜಾಗವನ್ನು ಕೊಟ್ಟಿರುವುದು ನನಗೆ ಗೊತ್ತಿರಲಿಲ್ಲ. ಮಾಧ್ಯಮಗಳಲ್ಲಿ ಸುದ್ದಿ ಬಂದಾಗ ನಾನು ಜಿಲ್ಲಾಧಿಕಾರಿಗಳ ಜೊತೆ ಮಾತಾಡದೆ. ಅಲ್ಲಿ ಯಾವುದೇ ಶ್ರೀಗಂಧ ಆಗಲಿ ಸಾಗವಾನಿ ಗಿಡಗಳು ಇಲ್ಲ ಎನ್ನುವ ಮಾಹಿತಿ ಇದೆ.

ಎಫ್ ಐ ಆರ್ ಕಾಫಿಯಲ್ಲಿ ಎಂಟು ಶ್ರೀಗಂಧದ ಮರಗಳು ಇವೆ ಎನ್ನುವ ಮಾಹಿತಿ ಇದೆ ಎಂಬ ಪ್ರಶ್ನೆಗೆ ಉತ್ತರಿಸಿದ ಹೆಬ್ಬಾಳ್ಕರ್​, ವಿಚಾರಣೆ ಬಳಿಕ ತಪ್ಪಿತಸ್ಥರ ಮೇಲೆ ಕ್ರಮ ಆಗುತ್ತದೆ ಎಂದಿದ್ದಾರೆ.

You cannot copy content of this page

Exit mobile version