Home ಬ್ರೇಕಿಂಗ್ ಸುದ್ದಿ ನಿಯಮ ಉಲ್ಲಂಘಿಸಿ ಸಿಎಲ್-7 ಮದ್ಯದಂಗಡಿಗೆ ಅವಕಾಶ ಪರವಾನಿಗೆ ರದ್ದು ಮಾಡದಿದ್ರೆ ಹೋರಾಟ

ನಿಯಮ ಉಲ್ಲಂಘಿಸಿ ಸಿಎಲ್-7 ಮದ್ಯದಂಗಡಿಗೆ ಅವಕಾಶ ಪರವಾನಿಗೆ ರದ್ದು ಮಾಡದಿದ್ರೆ ಹೋರಾಟ

ಹಾಸನ: ಅಬಕಾರಿ ಇಲಾಖೆಯ ಅಧಿಕಾರಿಗಳು ನಿಯಮಗಳನ್ನು ಉಲ್ಲಂಘಿಸಿ ಕಾಮತಿಕೂಡಿಗೆಯಲ್ಲಿ ಸಿಎಲ್-೭ ಮದ್ಯದಂಗಡಿ ತೆರೆಯಲು ಅವಕಾಶ ಕಲ್ಪಿಸಿದ್ದು, ಕೂಡಲೇ ಪರವಾನಿಗೆ ರದ್ದು ಮಾಡಬೇಕು ಇಲ್ಲವಾದರೇ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುವುದಾಗಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

   ಗ್ರಾಮದ ರಾಮಚಂದ್ರ ಮಾಧ್ಯಮದೊಂದಿಗೆ ಮಾತನಾಡಿ, ಆಲೂರು ತಾಲ್ಲೂಕಿನ ಕಾಮತಿಕೂಡಿಗೆಯಲ್ಲಿ ಮದ್ಯದಂಗಡಿಗೆ ಪರವಾನಿಗೆಯನ್ನು ನೀಡಿದ್ದು, ಅಬಕಾರಿ ನಿರೀಕ್ಷಕರು ಕಾನೂನು ಉಲ್ಲಂಘಿಸಿ ಕರ್ತವ್ಯ ನಿರ್ವಹಿಸುವ ಮೂಲಕ ಸಮಾಜದಲ್ಲಿ ಸ್ವಾಸ್ತ್ಯವನ್ನು ಹಾಳು ಮಾಡುತ್ತಿದ್ದಾರೆ ಎಂದು ದೂರಿದರು. ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್.ರಾಜಣ್ಣ ಹಾಗೂ ಜಿಲ್ಲಾಧಿಕಾರಿಗಳಾದ ಸತ್ಯಭಾಮರವರಲ್ಲಿ ಈ ಮೂಲಕ ತಿಳಿಯಪಡಿಸುವುದೇನೆಂದರೆ,  ನಿಮ್ಮ ಗಮನಕ್ಕೆ ಬಾರದ ರೀತಿಯಲ್ಲಿ ಹಾಸನ ಅಬಕಾರಿ ವಲಯ-೨ ರಲ್ಲಿ ಅಬಕಾರಿ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮೋಹನ್ ಕುಮಾರ್ ಎಂಬುವವರು ಹಣದ ಆಮಿಷಕ್ಕೆ ಒಳಗಾಗಿ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸರ್ಕಾರದ ಅಬಕಾರಿ ಇಲಾಖೆಯ ಸುತ್ತೋಲೆ ನಿಯಮಗಳನ್ನು ಗಾಳಿಗೆ ತೂರಿ ಮನಸೋಇಚ್ಚಾ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.  ಇದಕ್ಕೆ ಉದಾಹರಣೆಯಾಗಿ ಅಬಕಾರಿ ರೂಲ್-೫ ನಿಯಮಕ್ಕೆ ಒಳಪಡುವಂತಹ ಆಲೂರು ತಾಲ್ಲೂಕಿನ ಕಾಮತಿಕೂಡಿಗೆಯಲ್ಲಿ ಪರಿಶಿಷ್ಟ ಜಾತಿ ಜನಾಂಗಕ್ಕೆ ಸೇರಿದ ಸುಮಾರು ೪೦ ಕುಟುಂಬಗಳು ವಾಸವಾಗಿರುವ ಎ.ಡಿ. ಕಾಲೋನಿಯಿಂದ ಕೇವಲ ೧೩೦ ಅಡಿ ಅಂತರದಲ್ಲಿ ಬಾಲಾಜಿ ಗ್ರೂಪ್ಸ್ರವರು ಸಲ್ಲಿಸಿರುವ ಸಿಎಲ್-೭ ಸನ್ನದನ್ನು ತೆರೆಯಲು ಪ್ರಸ್ತಾವನೆಯನ್ನು ಆಯುಕ್ತರು, ಬೆಂಗಳೂರು ಇವರಿಗೆ ಸಲ್ಲಿಸಿರುತ್ತಾರೆ. ಈ ಬಗ್ಗೆ ನಾವುಗಳು  ರೂಲ್ಸ್ ೫ರ ನಿಯಮ ಉಲ್ಲಂಫಿಸಿರುವುದರಿಂದ ಬಾಲಾಜಿ ಗ್ರೂಪ್ಸ್ ಎಂಬುವವರು ಸಿಎಲ್-೭ ತೆರೆಯಲು ಅವಕಾಶ ನೀಡದಂತೆ ಇದನ್ನು ತಡೆ ಹಿಡಿಯಬೇಕೆಂದು ಹಲವಾರು ಬಾರಿ ತಕರಾರು ಅರ್ಜಿಯನ್ನು ಸಲ್ಲಿಸಿದ್ದರೂ ಸಹ ಇದನ್ನು ಲೆಕ್ಕಿಸದೆ ಅವರಿಗೆ ವಲಯಾಧಿಕಾರಿ ಮೋಹನ್‌ಕುಮಾರ್‌ರವರು ಕುಮ್ಮಕ್ಕು ನೀಡಿ ನಿಯಮಗಳನ್ನು ಉಲ್ಲಂಫಿಸಿ ತಮ್ಮ ಕರ್ತವ್ಯ ಲೋಪ ಎಸಗಿರುತ್ತಾರೆ ಎಂದರು. ಪ್ರಸ್ತುತ ಸನ್ನದು ಪ್ರಾರಂಭಿಸಲು ಉದ್ದೇಶಿರುವ ಸ್ಥಳವು ಆಲೂರು ತಾಲ್ಲೂಕಿನ ತಾಳೂರು ಗ್ರಾಮಪಂಚಾಯಿತಿಗೆ ಒಳಪಟ್ಟಿರುತ್ತದೆ ಎಂದು ದೃಢೀಕರಣ ನೀಡಿರುತ್ತಾರೆ. ಆದರೆ ಈ ಕಟ್ಟಡದಿಂದ ೮೦ ಮೀಟರ್ ಅಂತರದಲ್ಲಿ ಎಸ್.ಸಿ. ಎಸ್.ಟಿ.

ಕಾಲೋನಿ ಇರುತ್ತದೆ. ಇದು ಮಡಬಲು ಪಂಚಾಯಿತಿಗೆ ಸೇರುತ್ತದೆ. ರಾಜ್ಯ ಹೆದ್ದಾರಿಯಿಂದ ೪೦ ಮೀಟರ್ ಅಂತರ, ಜಿಲ್ಲಾ ಮುಖ್ಯರಸ್ತೆಯಿಂದ ೨೫ ಮೀಟರ್ ಈ ರೀತಿ ಸರ್ಕಾರದ ನಿಯಮ (ಅಬಕಾರಿ ನಿಯಮ ೫ರ ಪ್ರಕಾರ) ಇದ್ದರೂ ಎಲ್ಲವೂ ಉಲ್ಲಂಘನೆಯಾಗಿರುತ್ತದೆ. ಆದ್ದರಿಂದ ಇಂತಹ ಭ್ರಷ್ಟ ಅಧಿಕಾರಿಗಳ ವಿರುದ್ಧ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಿ ಇಲಾಖೆಯ ಬೇರೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿ ಮರು ಸ್ಥಳ ಪರಿಶೀಲನೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇವೆ ಎಂದು ಹೇಳಿದರು.

  ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಚಂದ್ರೇಗೌಡ, ಮಂಜುನಾಥ್, ಮಾದೇಶ್, ಲಕ್ಷ್ಮಿಕಾಂತ್ , ಕೆ ಕೆ ರಾಜು ಸೇರಿದಂತೆ ಇತರರು ಹಾಜರಿದ್ದರು.

You cannot copy content of this page

Exit mobile version