Home ಬ್ರೇಕಿಂಗ್ ಸುದ್ದಿ ಶಿಕ್ಷಕರ ತಕ್ಷಣದ ವರ್ಗಾವಣೆಗೆ ವಿದ್ಯಾರ್ಥಿಗಳ ವಿರೋಧ

ಶಿಕ್ಷಕರ ತಕ್ಷಣದ ವರ್ಗಾವಣೆಗೆ ವಿದ್ಯಾರ್ಥಿಗಳ ವಿರೋಧ

0

ಪಶ್ಚಿಮ ಬಂಗಾಳ: ಶಾಲೆಯಿಂದ ಶಿಕ್ಷಕರ ಹಠಾತ್ (ತಕ್ಷಣದ)ವರ್ಗಾವಣೆಯನ್ನು ವಿರೋಧಿಸಿ ಕ್ಯಾನಿಂಗ್‌ ನಗರದಲ್ಲಿನ ಗೌರ್ದಾಹಾ ಹಾಲ್ಟ್ ರೈಲು ನಿಲ್ದಾಣದಲ್ಲಿ ಶಾಲಾ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಶಾಲಾ ವಿದ್ಯಾರ್ಥಿಗಳು, ನಮ್ಮ ಶಾಲೆಯ ಶಿಕ್ಷಕರನ್ನು ಯಾವುದೇ ಸೂಚನೆ ಇಲ್ಲದೆ ವರ್ಗಾವಣೆ ಮಾಡಲಾಗುತ್ತಿದೆ. ಯಾವ ಕಾರಣಕ್ಕೆ ಈ ತಕ್ಷಣದ ವರ್ಗಾವಣೆ ಎಂದು ನಮಗೆ ತಿಳಿದಿಲ್ಲ, ಹೀಗಾಗಿ ನಮ್ಮ ಸಂದೇಶ ಶಿಕ್ಷಕರಿಗೆ ತಲುಪಬೇಕು ಮತ್ತು ಈ ವರ್ಗಾವಣೆಗೆ ಕಾರಣ ಏನೆಂದು ಉನ್ನತ ಅಧಿಕಾರಿಗಳಿಂದ ಸೂಚನೆ ಬರುವವರೆಗೆ ನಾವು ರೈಲು ಹಳಿಗಳ ಮೇಲೆ ನಿಂತು ಪ್ರತಿಭಟನೆ ಮಾಡುತ್ತವೆ ಹಾಗೂ ಯಾವುದೇ ಕಾರಣಕ್ಕೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿನ್ನಲೆ ಕ್ಯಾನಿಂಗ್‌ ನಗರದ ಗೌರ್ದಾಹಾ ಹಾಲ್ಟ್ ರೈಲು ನಿಲ್ದಾಣದಲ್ಲಿ ರೈಲುಗಳ ಸಂಚಾರಕ್ಕೆ ತೊಂದರೆಯಾಗಿದೆ.

You cannot copy content of this page

Exit mobile version