ಇಂಗ್ಲಿಷ್ ಭಾಷೆಯಲ್ಲಿ ಪ್ರಖರವಾಗಿ ಬರೆಯುವ ಸ್ತ್ರೀವಾದಿ ಭಾರತೀಯ ಕವಿ ಮತ್ತು ಲೇಖಕರಾದ ಮೀನಾ ಕಂದಸಾಮಿ ಪೆನ್ (PEN) ಇಂಟರ್‌ನ್ಯಾಶನಲ್ ರೈಟರ್ಸ್ ಅಸೋಸಿಯೇಷನ್‌ನ ಜರ್ಮನ್ ಅಧ್ಯಾಯದ ಹರ್ಮನ್ ಕೆಸ್ಟನ್ ಬಹುಮಾನವನ್ನು ಸ್ವೀಕರಿಸಲಿದ್ದಾರೆ
ಜರ್ಮನಿಯ ಡಾರ್ಮ್‌ಸ್ಟಾಡ್ಟ್‌ನಲ್ಲಿರುವ ಪೆನ್(PEN) ಕೇಂದ್ರವು ಸೋಮವಾರ, ಸೆಪ್ಟೆಂಬರ್ 19ರಂದು ಹರ್ಮನ್ ಕೆಸ್ಟನ್ ಪ್ರಶಸ್ತಿಯ ವಿಜೇತರನ್ನು ಘೋಷಿಸಿದೆ. ಈ ವರ್ಷದ ಪ್ರಶಸ್ತಿಯು ಭಾರತೀಯ ಲೇಖಕಿ ಮತ್ತು ಕವಿ ಮೀನಾ ಕಂದಸಾಮಿ ಅವರಿಗೆ ಸಂದಿದೆ, “ದಿ ಜಿಪ್ಸಿ ಗಾಡೆಸ್,” (2014) ಮತ್ತು “ವೆನ್ ಐ ಹಿಟ್ ಯು: ಅಥವಾ, ಎ ಪೋರ್ಟ್ರೇಟ್ ಆಫ್ ದಿ ರೈಟರ್ ಆಸ್ ಎ ಯಂಗ್ ವೈಫ್” (2017) ಅವರ ಕೆಲವು ಪುಸ್ತಕಗಳು. ಅವರು ತಮ್ಮ ಕವಿತೆಗಳ ಸಂಕಲನಗಳನ್ನು ಸಹ ಪ್ರಕಟಿಸಿದ್ದಾರೆ, ಅದರಲ್ಲಿ ಮುಖ್ಯವಾಗಿ “Ms Militancy” (2010) ಮತ್ತು “#ThisPoemWillProvokeYou and Other Poems” (2015) ಮುಖ್ಯವಾದವು.
ಈ ಕುರಿತು ಪ್ರತಿಕ್ರಿಯಿಸಿದ ಮೀನಾ ಕಂದಸಾಮಿಯವರು, “ಪ್ರಶಸ್ತಿ ಸಂದಿರುವುದಕ್ಕೆ ಹೇಗೆ ಪ್ರತಿಕ್ರಿಯಿಸುವುದೆಂದು ತಿಳಿಯುತ್ತಿಲ್ಲ,” ಎಂದು ಹೇಳಿದ್ದಾರೆ. ಉಳಿದ ವಿವರಗಳನ್ನು ಈ ಕೆಳಗಿನ ಕೊಂಡಿಯನ್ನು ಬಳಸಿ ಓದಬಹುದು
https://www.dw.com/en/indian-author-meena-kandasamy-to-receive-pen-germany-prize/a-63171611