ಮುಂಬೈ: ದರೋಡೆಕೋರ ಛೋಟಾ ಶಕೀಲ್‌ನ ಆಪ್ತ ಸಹಾಯಕ ಸಲೀಂ ಫ್ರೂಟ್‌ನನ್ನು ಎನ್‌ಐಎ ತನಿಖೆಯಿಂದ ರಕ್ಷಿಸುವುದಾಗಿ ಸುಳ್ಳು ಹೇಳಿ 50 ಲಕ್ಷ ರೂಪಾಯಿ ವಂಚಿಸಿದ ಮೂವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ ಎಂದು ಎಎನ್‌ಐ ವರದಿ ತಿಳಿಸಿದೆ.
ಬಂಧಿತ ಆರೋಪಿಗಳನ್ನು ವಿಶಾಲ್ ದೇವರಾಜ್ ಸಿಂಗ್, ಜಾಫರ್ ಉಸ್ಮಾನಿ ಮತ್ತು ಪವನ್ ದುರಿಜೆಜಾ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.