ಹಾಸನ : ಎರಡನೇ ದಿನ ಶುಕ್ರವಾರದಂದು ನಗರ ಸಂಚಾರದಲ್ಲಿ ತಾಲೂಕಿನ ಅಗಿಲೆ ಗ್ರಾಮದ ಬಳಿ ಇರುವ ಕಸ ವಿಲೇವಾರಿ ಘಟಕಕ್ಕೆ ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಭೇಟಿ ನೀಡಿದಾಗ ಇಲ್ಲಿ ಅವ್ಯವಸ್ಥೆ ನೋಡಿ ಆಕ್ರೋಶವ್ಯಕ್ತಪಡಿಸಿದಲ್ಲದೇ ನಗರಸಭೆ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಸುಮುಟೋ ಕೇಸು ದಾಖಲಿಸಲು ಸೂಚಿಸಿದರು.
ಕಸವನ್ನು ವೈಜ್ನಾನಿಕವಾಗಿ ನಿರ್ವಹಣೆ ಮಾಡಲು ವಿಜ್ಞಾನಿಗಳ ಸಲಹೆ ಪಡೆಯಿರಿ, ಪ್ಲಾಸ್ಟಿಕ್ ಜೊತೆ ಸೇರಿ ಗೊಬ್ಬರವಾದರೇ ಅದನ್ನು ಗಿಡ ಮರಗಳಿಗೆ ಹಾಕಿದರೇ ಯಾವ ಪ್ರಯೋಜನವಿಲ್ಲ. ಈ ರೀತಿ ಕಸ ಹಾಕಿದರೇ ಗಾಳಿಗೆ ನುಗ್ಗಿ ಇಲ್ಲಿನ ಸುತ್ತಮುತ್ತಲಿನ ಜನರಿಗೆ ಸಮಸ್ಯೆ ಆಗುತ್ತದೆ. ಈ ಬಗ್ಗೆ ಸಂಬಂಧ ಪಟ್ಟವರ ಮೇಲೆ ಕೇಸು ಹಾಕಲಾಗುವುದು ಎಚ್ಚರಿಕೆ ಕೊಟ್ಟರು. ಕಸ ವಿಲೆವಾರಿ ಎಂಬುದು ಸೈಂಟಿಪಿಕ್ ಪ್ರಾಜೆಕ್ಟ್ ಆಗಬೇಕು. ಇಲ್ಲಿ ಪ್ಲಾಸ್ಟಿಕ್ ಇತರೆ ತ್ಯಾಜ್ಯ ಎಲ್ಲಾ ಸೇರಿ ಗೊಬ್ಬರ ಮಾಡಿದರೇ ಯಾವ ಪ್ರಯೋಜನವಿಲ್ಲ. ಇರುವ ಗಿಡಗಳು ಹಾಳಾಗುತ್ತದೆ ಎಂದು ಸಲಹೆ ನೀಡಿದರು. ಈ ವೇಳೆ ಕಸ ವಿಲೇವಾರಿ ಘಟಕದ ಸುತ್ತ ವಾಸಿಸುತ್ತಿರುವ ಕೆಲಸ ರೈತರು ಸ್ಥಳಕ್ಕೆ ಬಂದಾಗ ಉಪಲೋಕಾಯುಕ್ತರನ್ನು ಪ್ರಶ್ನೆ ಮಾಡಿದರು. ಇಲ್ಲಿ ಕಸ ವಿಲೇವಾರಿಯನ್ನು ವೈಜ್ಞಾನಿಕವಾಗಿ ಮಾಡಲಾಗುತ್ತಿಲ್ಲ. ಸತ್ತಿ ಹೋಗಿರುವ ಪ್ರಾಣಿಗಳ ಕೊಳೆತ ದೇಹ ಕಸದ ಜೊತೆ ಬರುವುದರಿಂದ ನಾಯಿಗಳ ಹಾವಳಿ ಹೆಚ್ಚಾಗಿದೆ. ಸುಮಾರು ಐನೂರರಿಂದ ಆರನೂರು ನಾಯಿಗಳು ಇದ್ದು, ನಮ್ಮ ಮಕ್ಕಳುಗಳಿಗೆ ಮತ್ತು ಗೋವು, ಕುರಿಗಳಿ ಕಚ್ಚಿ ಹಾಕಿದೆ. ಈ ಬಗ್ಗೆ ಪ್ರಶ್ನೆ ಮಾಡಿ ಇಲ್ಲಿ ಪ್ರತಿಭಟನೆ ಮಾಡಲು ಮುಂದಾದರೇ ನಮ್ಮ ಮೇಲೆ ಕೇಸು ಹಾಕುತ್ತಿದ್ದಾರೆ. ಇಸ್ರೇಲ್ ಮಾಧರಿಯಲ್ಲಿ ಕಸ ವಿಲೇವಾರಿ ಆಗಬೇಕು. ಇನ್ನು ಮಳೆ ಬಂದರೇ ಸಾಕು ಇಲ್ಲಿನ ಕಸದ ತ್ಯಾಜ್ಯದ ಕೊಳಚೆ ನೀರು ಗ್ರಾಮಕ್ಕೆ ಹರಿಯುತ್ತಿದೆ. ಕೆರೆಕಟ್ಟೆಗಳೆಲ್ಲಾ ಕಲುಷಿತವಾಗಿದೆ. ಕೂಡಲೇ ಸರಿಪಡಿಸುವಂತೆ ಲೋಕಾಯುಕ್ತರಲ್ಲಿ ಮನವಿ ಮಾಡಿದರು. ಇನ್ನು ನಾಯಿಗಳ ಹಾವಳಿಯಿಂದ ಇಲ್ಲಿ ಚಿರತೆಗಳು ಹೆಚ್ಚಾಗಿದೆ. ಈ ರೀತಿ ವಿವಿಧ ದೂರುಗಳು ಸ್ಥಳದಲ್ಲೆ ಕೇಳಿ ಬಂದಿತು. ಈ ವೇಳೆ ಲೋಕಾಯಕ್ತರು ನಗರಸಭೆ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದರು. ಇನ್ನು ಹೊಸ ಬಸ್ ನಿಲ್ದಾಣ, ಶೌಚಾಲಯ ಸ್ವಚ್ಚತೆ ಇಲ್ಲ, ಒಬ್ಬರು ಸಿಸಿ ಟಿವಿ ವೀಕ್ಷಣೆ ಮಾಡಿ, ಕಳ್ಳತನವಾದಗ ಬೇಗ ಕಂಡು ಹಿಡಿಯಬಹುದು. ಇನ್ನು ಇಲ್ಲಿನ ಅಂಗಡಿಗಳಲ್ಲಿ ವಿವಿಧ ವಸ್ತುಗಳನ್ನು ಹೆಚ್ಚು ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಹಾಗೂ ಸ್ವಚ್ಛತೆ ಇಲ್ಲದಿರುವುದರ ಬಗ್ಗೆ ಗಮನಕ್ಕೆ ಬಂದಿತು. ಲೋಕಾಯುಕ್ತರು ಬರುವ ವೇಳೆ ಬಸ್ ನಿಲ್ದಾಣದ ವಿವಿಧ ಕಡೆ ಸ್ವಚ್ಛತೆ ಕಾರ್ಯ ನೋಡಿ ಲೋಕಾಯುಕ್ತರು ಗರಂ ಆದರು.
ಕಸವಿಲೇವಾರಿ ಘಟಕಕ್ಕೆ ಭೇಟಿ ನೀಡಿದಾಗ ಅಲ್ಲಿಯೂ ಕೂಡ ಸಾಕಷ್ಟು ಸಮಸ್ಯೆಗಳು ಕಂಡು ಬಂದಿದೆ. ಸುತ್ತಮುತ್ತ ಜನರಿಗೆ ಸೊಳ್ಳೆ, ನೊಣದ ಕಾಟ ಹೆಚ್ಚಾಗಿದೆ. ನಾಯಿಗಳ ಹಾವಳಿ ತುಂಬ ಜಾಸ್ತಿಯಾಗಿದೆ. ಇಲ್ಲಿನ ಸುತ್ತಮುತ್ತಲ ಸ್ಥಳದಲ್ಲಿ ಮಕ್ಕಳು ಓಡಾಡಲು ಕಷ್ಟವಾಗಿದೆ. ಇಲ್ಲಿನ ಕಲುಷಿತ ನೀರು ಸುತ್ತ ಮುತ್ತಲ ಕೆರೆಗಳಿಗೆ ಹರಿಯುತ್ತಿರುವುದರಿಂದ ಧನ ಕರುಗಳು ನೀರು ಕುಡಿಯುವುದಕ್ಕೆ ಯೋಗ್ಯವಾಗಿರುವುದಿಲ್ಲ ಎಂದರು. ಇನ್ನು ಕಸ ವಿಲೇವಾರಿ ಘಟಕದಲ್ಲಿ ತಯಾರಾದ ಗೊಬ್ಬರ ಇಲ್ಲಿನ ಸ್ಥಳಿಯರಿಗೆ ಲಭ್ಯವಾಗದೇ ಇತರೆ ಜಿಲ್ಲೆಗಳಿಗೆ ರವಾನೆ ಆಗುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದು, ಅವರಿಗೆ ಸರಿಯಾದ ನಿರ್ದೇಶಕ ಕೊಟ್ಟು ಸಂಸ್ಕರಣೆ ಸರಿಯಾಗಿ ಆಗಬೇಕು, ಡ್ರೈ ವೇಸ್ಟ್ ಮತ್ತು ವಿಟ್ರೇಸ್ಟ್ ಸರಿಯಾಗಿ ಬೇರೆ ಬೇರೆ ಸಂಸ್ಕರಣೆ ಆಗುವ ಬೇರೆ ಬೇರೆ ಯಂತ್ರಗಳನ್ನು ಕಂಟ್ರಿಗಳು ತಯಾರು ಮಾಡಿದೆ. ನಮ್ಮ ಕಂಟ್ರಿಯಲ್ಲೆ ತಯಾರು ಮಾಡಬಹುದು, ತರಿಸಿಕೊಳ್ಳಬಹುದು, ಮಂಗಳೂರು, ಬೆಂಗಳೂರಿನಲ್ಲಿ ಎರಡು ಕಡೆ ಇನಸ್ಟಾಲ್ ಮಾಡಲಾಗಿದೆ. ಒಂದು ಬಾರಿ ಬೆಂಗಳೂರಿಗೆ ಭೇಟಿ ನೀಡಿ ಇಲ್ಲಿಗೆ ಅಳವಡಿಕೊಳ್ಳಲು ಹೇಳಲಾಗಿದೆ ಎಂದು ತಿಳಿಸಿದರು. ಬಸ್ ನಿಲ್ದಾಣದಲ್ಲಿ ಶೌಚಾಲಯಗಳು ಪ್ರತಿನಿತ್ಯ ಸ್ವಚ್ಛತೆ ಸರಿಯಾಗಿ ಇರುವುದಿಲ್ಲ. ಇಲ್ಲಿನ ಸುತ್ತಮುತ್ತಲ ಜಾಗಗಳನ್ನು ಸರಿಯಾಗಿ ಸುಚಿತವಾಗಿ ಇಟ್ಟಿಕೊಂಡಿರುವುದಿಲ್ಲ. ಇಲ್ಲಿರುವ ಬೇಡವಾದ ಗಿಡಗಳನ್ನು ನೀಟಾಗಿ ಮಾಡಿರುವುದಿಲ್ಲ. ಗಡಿಯಾರಗಳು ಸರಿಯಾಗಿ ವ್ಯವಸ್ಥಿತವಾಗಿಲ್ಲ. ಡಿಜಿಟಲ್ ಟಿವಿಯಲ್ಲೆ ಗಡಿಯಾರ ಪ್ರದರ್ಶಿಸಬಹುದು, ಕೆಲ ಹಳ್ಳಿಗಳಿಗೆ ಸರಿಯಾಗಿ ಬಸ್ ಸಂಚಾರ ಇರುವುದಿಲ್ಲ. ಶೌಚಾಲಯ ಟೆಂಡರ್ ಕೊಡಲಾಗಿದ್ದು, ಆದರೇ ೫ ರೂ ಪಡೆಯುವ ಕಡೆ ೧೦ ರೂ ವಸೂಲಿ ಮಾಡಲಾಗುತ್ತಿದೆ.ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿರುವ ಅಂಗಡಿಗಳಲ್ಲಿ ವಸ್ತುಗಳ ಬೆಲೆ ಎಂ.ಆರ್.ಪಿ.ಗಳಿಗಿಂತ ಹೆಚ್ಚಿನ ಬೆಲೆ ಪಡೆಯಲಾಗುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಇದಕ್ಕೆ ಇಲ್ಲಿನ ಸಾರಿಗೆ ಡಿಸಿ ಸರಿಯಾಗಿ ವ್ಯವಸ್ಥೆ ಮಾಡುತ್ತೇವೆ, ಯಾವುದೇ ಅಕ್ರಮ ಆಗದಾಗೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದು, ನಿಲ್ದಾಣದ ಸಿಸಿಟಿವಿ ದಿನದ ೨೪ ಗಂಟೆ ಮಾನಿಟರ್ ವೀಕ್ಷಣೆ ಮಾಡವ ಸಿಬ್ಬಂದಿ ಇದ್ದರೇ ಕಳ್ಳತನ ಆಗುವುದು, ಎಲ್ಲಾ ಅಕ್ರಮಗಳು ಹಾಗೂ ಸ್ವಚ್ಛತೆ ಎಲ್ಲಾವು ಹೊರ ಬರುತ್ತದೆ ಎಂದರು. ಈ ಬಗ್ಗೆ ಕಡಿಮೆ ಕಾಳಜಿ ಇದ್ದು, ಈ ಬಗ್ಗೆ ಕೂಡ ಒಂದು ಸುಮುಟಾ ಕೇಸು ದಾಖಲಿಸಲಾಗುವುದು.
ಇನ್ನು ವಿವಿಧ ಇಲಾಖೆಗಳಲ್ಲಿ ಭ್ರಷ್ಠಾಚಾರ ತಾಂಡವವಾಡುತ್ತಿದ್ದು, ಈ ಬಗ್ಗೆ ಕಂಡು ಬಂದರೇ ವಿಡಿಯೋ ಮಾಡಿ ನಮಗೆ ಕಳುಹಿಸಿಕೊಟ್ಟರೇ ಸಾಕು ಅವರ ಮೇಲೆ ಸುಮುಟೋ ಖೇಸು ದಾಖಲಿಸುವುದಾಗಿ ಸಲಹೆ ನೀಡಿದರು. ಇನ್ನು ಈ ಭ್ರಷ್ಠಾಚಾರ ಹೆಚ್ಚಾಗಲು ಲಂಚ ಕೊಡುವುವರು ಕೂಡ ಕಾರಣರಾಗಿದ್ದಾರೆ ಎಂದು ದೂರಿದರು.
ಇದೆ ವೇಳೆ ಕರ್ನಾಟಕ ಲೋಕಾಯುಕ್ತದ ವಿಚಾರಣೆಗಳು ಅಪರ ನಿಬಂಧಕರಾದ ಪೃಥ್ವಿರಾಜ್ ವೆರ್ಣೇಕರ್, ಕರ್ನಾಟಕ ಲೋಕಾಯುಕ್ತದ ಕಾನೂನು ಅಭಿಪ್ರಾಯ ೦೨ ಸಹಾಯಕ ನಿಬಂಧಕರು ಹಾಗೂ ನಿವೃತ್ತಜಿಲ್ಲಾ ನ್ಯಾಯಾಧೀಶರಾದ ಬಿ. ಶುಭವೀರ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಬಿ.ಕೆ. ದಾಕ್ಷಾಯಿಣಿ, ಸಿವಿಲ್ ನ್ಯಾಯಾಧೀಶರು ಹಾಗೂ ಉಪಯೋಕಾಯುಕ್ತ ರವರ ಆಪ್ತ ಕಾರ್ಯದರ್ಶಿ ಕಿರಣ್ ಪಿ.ಎಂ ಪಾಟೀಲ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್. ಪೂರ್ಣಿಮಾ, ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲ, ಕರ್ನಾಟಕ ಲೋಕಾಯುಕ್ತದ ಹಾಸನ ವಿಭಾಗದ ಪೊಲೀಸ್ ಅಧಿಕ್ಷಕರಾದ ಪಿ.ವಿ. ಸ್ನೇಹ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ. ತಮ್ಮಯ್ಯ, ಸಿ.ಕೆ. ಹರೀಶ್ ಇತರರು ಉಪಸ್ಥಿತರಿದ್ದರು.