Home ಇನ್ನಷ್ಟು ಕೋರ್ಟು - ಕಾನೂನು ಯುಎಪಿಎ ಕಾಯ್ದೆಯಡಿಯೂ ಜಾಮೀನು ನಿಂದಿತನ ಹಕ್ಕು: ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು

ಯುಎಪಿಎ ಕಾಯ್ದೆಯಡಿಯೂ ಜಾಮೀನು ನಿಂದಿತನ ಹಕ್ಕು: ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು

0

ಭಯೋತ್ಪಾದನಾ ನಿರೋಧಕ ಕಾಯ್ದೆ (UAPA) ಅಥವಾ ಇತರ ಯಾವುದೇ ಗಂಭೀರ ಸ್ವರೂಪದ ಭಯೋತ್ಪಾದನೆ ಪ್ರಕರಣಗಳಲ್ಲಾದರೂ ‘ಜಾಮೀನು ಎನ್ನುವುದು ನಿಯಮ’ (Bail is the rule) ಎಂಬ ಸಾಂವಿಧಾನಿಕ ತತ್ವವು ಕೇವಲ ಬಾಯಿಮಾತಿನ ಘೋಷಣೆಯಲ್ಲ, ಬದಲಿಗೆ ಅದು ನಿಂದಿತನ ಸಾಂವಿಧಾನಿಕ ಮೂಲಭೂತ ಹಕ್ಕಾಗಿದೆ ಎಂದು ಸುಪ್ರೀಂಕೋರ್ಟ್ ಅತ್ಯಂತ ಮಹತ್ವದ ತೀರ್ಪು ನೀಡಿದೆ.

ನಾರ್ಕೋ ಟೆರರಿಸಂ ಪ್ರಕರಣದಲ್ಲಿ ಸಿಲುಕಿ, ಕಳೆದ ಐದು ವರ್ಷಗಳಿಂದ ವಿಚಾರಣಾ ಧೀನ ಖೈದಿಯಾಗಿ ಜೈಲಿನಲ್ಲಿ ಕಳೆಯುತ್ತಿದ್ದ ಜಮ್ಮು ಮತ್ತು ಕಾಶ್ಮೀರದ ವ್ಯಕ್ತಿಯೊಬ್ಬರಿಗೆ ಅತ್ಯುನ್ನತ ನ್ಯಾಯಾಲಯವು ಜಾಮೀನು ಮಂಜೂರು ಮಾಡಿ ದೊಡ್ಡ ರಿಲೀಫ್ ನೀಡಿದೆ. ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರನ್ನೊಳಗೊಂಡ ದ್ವಿ ಸದಸ್ಯ ಪೀಠವು ಈ ಸಂದರ್ಭದಲ್ಲಿ ವ್ಯಕ್ತಿಗತ ಸ್ವಾತಂತ್ರ್ಯದ ಪರವಾಗಿ ಪ್ರಮುಖ ಒತ್ತು ನೀಡಿದೆ. ಯುಎಪಿಎ ಪ್ರಕರಣಗಳಲ್ಲಿ ವ್ಯಕ್ತಿಗತ ಸ್ವಾತಂತ್ರ್ಯದ ಹಕ್ಕನ್ನು ನಿರಂತರವಾಗಿ ದುರ್ಬಲಗೊಳಿಸುತ್ತಿರುವ ಹಿಂದಿನ ಕೆಲವು ತೀರ್ಪುಗಳ ನಡೆಗೆ ಪೀಠವು ತೀವ್ರ ಕಳವಳ ವ್ಯಕ್ತಪಡಿಸಿದೆ.

೨೦೨೧ ರ ‘ಕೆ.ಎ. ನಜೀಬ್’ ಪ್ರಕರಣದಲ್ಲಿ ಮೂವರು ನ್ಯಾಯಾಧೀಶರ ಪೀಠವು ರೂಪಿಸಿರುವ ಸಾಂವಿಧಾನಿಕ ನಿಯಮಗಳನ್ನು ಸುಪ್ರೀಂಕೋರ್ಟ್ ಸೇರಿದಂತೆ ದೇಶದ ಎಲ್ಲಾ ಕೆಳಹಂತದ ನ್ಯಾಯಾಲಯಗಳೂ ಕಡ್ಡಾಯವಾಗಿ ಪಾಲಿಸಬೇಕು ಎಂದು ಪೀಠವು ಒತ್ತಿಹೇಳಿದೆ. “ಕಾನೂನು ಎಷ್ಟು ಕಠಿಣವಾಗಿರುತ್ತದೆಯೋ, ಅದರ ವಿಚಾರಣೆಯೂ ಅಷ್ಟೇ ವೇಗವಾಗಿ ನಡೆಯಬೇಕು. ವಿಚಾರಣೆಯಲ್ಲಿ ಆಗುವ ವಿಳಂಬವನ್ನೇ ಒಂದು ಶಿಕ್ಷೆಯನ್ನಾಗಿ ಪರಿವರ್ತಿಸಲು ಮತ್ತು ನಿರಂತರ ಬಂಧನದಲ್ಲಿಡಲು ಯುಎಪಿಎ ಕಾಯ್ದೆಯ ಕಠಿಣ ನಿಯಮಗಳನ್ನು ತನಿಖಾ ಸಂಸ್ಥೆಗಳು ಅಥವಾ ಸರ್ಕಾರ ದುರ್ಬಲಗೊಳಿಸಬಾರದು” ಎಂದು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಖಡಕ್ ಆಗಿ ಹೇಳಿದ್ದಾರೆ.

ದೆಹಲಿ ದಂಗೆಯ ಸಂಚಿನ ಪ್ರಕರಣದಲ್ಲಿ ಆರು ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದರೂ ಜೆಎನ್‌ಯು ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಹಾಗೂ ಶರ್ಜೀಲ್ ಇಮಾಮ್ ಅವರಿಗೆ ಜಾಮೀನು ನಿರಾಕರಿಸಿದ್ದ ಇತ್ತೀಚಿನ ‘ಗುಲ್ಫಿಶಾ ಫಾತಿಮಾ ವರ್ಸಸ್ ಸ್ಟೇಟ್ ಆಫ್ ಡೆಹ್ರಿ’ ತೀರ್ಪು ಸೇರಿದಂತೆ ಮುನುಸೂಚಿತ ನಿರ್ಧಾರಗಳನ್ನು ಪೀಠವು ಈ ವೇಳೆ ಟೀಕಿಸಿದೆ.

ಈ ಪ್ರಕರಣವು ಯುಎಪಿಎ ಕಾಯ್ದೆಯ ಕಠಿಣ ಜಾಮೀನು ನಿಯಮವಾದ ಸೆಕ್ಷನ್ 43ಡಿ (5) ಮತ್ತು ಸಂವಿಧಾನದ ಆರ್ಟಿಕಲ್ 21 ರ ಅಡಿಯಲ್ಲಿ ಲಭ್ಯವಿರುವ ‘ಶೀಘ್ರ ವಿಚಾರಣೆಯ ಹಕ್ಕು’ ಹಾಗೂ ‘ವ್ಯಕ್ತಿಗತ ಸ್ವಾತಂತ್ರ್ಯ’ದ ನಡುವಿನ ಸಂಬಂಧವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಜಾಮೀನು ನಿರಾಕರಿಸಲು ತನಿಖಾ ಸಂಸ್ಥೆಗಳು ಹೊರಿಸುವ ಪ್ರಾಥಮಿಕ ಆರೋಪಗಳನ್ನು ನ್ಯಾಯಾಲಯಗಳು ಕುರುಡಾಗಿ ನಂಬುತ್ತಾ ಹೋದರೆ, ಅದು ವಿಚಾರಣೆಗೆ ಮುನ್ನವೇ ನೀಡುವ ಶಿಕ್ಷೆಯಾಗಿ ಬದಲಾಗುತ್ತದೆ ಎಂದು ಪೀಠವು ಎಚ್ಚರಿಸಿದೆ.

ಕಳೆದ ವರ್ಷದ ಆಗಸ್ಟ್‌ನಲ್ಲಿ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸವಾಲು ಮಾಡಿ ಸಲ್ಲಿಕೆಯಾಗಿದ್ದ ವಿಶೇಷ ಅನುಮತಿ ಅರ್ಜಿಯ (SLP) ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ಐತಿಹಾಸಿಕ ತೀರ್ಪು ಪ್ರಕಟಿಸಿದೆ.

You cannot copy content of this page

Exit mobile version