ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸೂರಜ್ ರೇವಣ್ಣನನ್ನು 8 ದಿನಗಳ ಕಾಲ CID ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ. ಆರೋಪಿಯ ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈ ಬಗ್ಗೆ ಆದೇಶಿಸಿದೆ.
ಜುಲೈ 1ರವರೆಗೆ ಸೂರಜ್ ರೇವಣ್ಣ ಸಿಐಡಿ ಕಸ್ಟಡಿಯಲ್ಲಿ ವಿಚಾರಣೆಗೆ ಒಳಗಾಗಲಿದ್ದು, ಸೂರಜ್ ವಿರುದ್ಧ ಕೇಳಿ ಬಂದಿರುವ ಈ ಗಂಭೀರ ಆರೋಪ ಪ್ರಕರಣದ ತನಿಖೆ ಮತ್ತಷ್ಟ ಚುರುಕುಗೊಳ್ಳಲಿದೆ.
ತಮ್ಮ ಜೆಡಿಎಸ್ ಪಕ್ಷದ ಕಾರ್ಯಕರ್ತನ ಮೇಲೆಯೇ ಸೂರಜ್ ರೇವಣ್ಣ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಕಳೆದ ಶನಿವಾರ ಪ್ರಕರಣ ದಾಖಲಾಗಿತ್ತು. ಪ್ರಕರಣ ಕ್ಷಿಪ್ರಗತಿಯಲ್ಲಿ ತಗೆದುಕೊಂಡ ಪೊಲೀಸ್ ಇಲಾಖೆ ತಕ್ಷಣವೇ ಅವರನ್ನು ಬಂಧಿಸಲು ಯಶಸ್ವಿಯಾಗಿತ್ತು.
‘ಅಸ್ವಾಭಾವಿಕ ಅಪರಾಧಗಳು’ ಸೇರಿದಂತೆ ಸಂತ್ರಸ್ತನಿಗೆ ಬೆದರಿಕೆ, ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಸೂರಜ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.