Home Uncategorized ‌ಹರಿಯಾಣದಿಂದ ದೆಹಲಿಗೆ ನೀರು ಸಿಗುವವರೆಗೂ ಉಪವಾಸ: 4ನೇ ದಿನಕ್ಕೆ ಕಾಲಿಟ್ಟ ಅತಿಶಿ ಉಪವಾಸ ಸತ್ಯಾಗ್ರಹ

‌ಹರಿಯಾಣದಿಂದ ದೆಹಲಿಗೆ ನೀರು ಸಿಗುವವರೆಗೂ ಉಪವಾಸ: 4ನೇ ದಿನಕ್ಕೆ ಕಾಲಿಟ್ಟ ಅತಿಶಿ ಉಪವಾಸ ಸತ್ಯಾಗ್ರಹ

0

ನವದೆಹಲಿ: ನನ್ನ ಆರೋಗ್ಯ ಹಾಳಾಗಿ ಸತ್ತರೂ ಪರವಾಗಿಲ್ಲ. ಹರಿಯಾಣ ಸರ್ಕಾರವು ದೆಹಲಿಯ ಪಾಲಿನ ನೀರನ್ನು ಬಿಡುಗಡೆ ಮಾಡುವವರೆಗೂ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸುವುದಾಗಿ ಜಲ ಸಚಿವೆ ಅತಿಶಿ ಘೋಷಿಸಿದ್ದಾರೆ.

ದೆಹಲಿಗೆ ಸಮಪ್ರಮಾಣದ ನೀರನ್ನು ಹರಿಯಾಣ ಸರ್ಕಾರ ನೀಡಬೇಕು ಎಂದು ಆಗ್ರಹಿಸಿ ಅತಿಶಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಸೋಮವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.

ನನ್ನ ತೂಕವೂ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ನನ್ನ ರಕ್ತದೊತ್ತಡ ಮತ್ತು ಸಕ್ಕರೆಯ ಮಟ್ಟವು ಕುಸಿಯುತ್ತಿದೆ. ದೀರ್ಘಾವಧಿಯಲ್ಲಿ ಹಾನಿಕಾರಕ ಪರಿಣಾಮಗಳನ್ನು ಉಂಟು ಮಾಡುವ ಕೀಟೋನ್ ಮಟ್ಟವು ತುಂಬಾ ಹೆಚ್ಚಾಗುತ್ತಿದೆ. ನನ್ನ ದೇಹವು ಎಷ್ಟೇ ನರಳಿದರೂ ಹರಿಯಾಣ ಸರಕಾರ ನೀರು ಬಿಡುವವರೆಗೂ ನಾನು ಉಪವಾಸವನ್ನು ಮುಂದುವರಿಸುತ್ತೇನೆ’ ಎಂದು ಅತಿಶಿ ಸೊಮವಾರ ಹೇಳಿದರು.

ಕಳೆದ ಮೂರು ವಾರಗಳಿಂದ ಹರಿಯಾಣವು ಯಮುನಾ ನೀರಿನಲ್ಲಿ ದೆಹಲಿಯ ಪಾಲನ್ನು ದಿನಕ್ಕೆ 100 ಮಿಲಿಯನ್ ಗ್ಯಾಲನ್‌ಗಳಷ್ಟು (MGD) ಕಡಿಮೆ ಮಾಡಿದೆ. ಇದು ದೆಹಲಿಯಲ್ಲಿ 28 ಲಕ್ಷ ಜನರ ಮೇಲೆ ಪರಿಣಾಮ ಬೀರುತ್ತದೆ. ನೀರಿಲ್ಲದೇ ದೆಹಲಿಯ ಜನ ಎಲ್ಲಿಗೆ ಹೋಗಬೇಕು ಎಂದು ಅವರು ಪ್ರಶ್ನಿಸಿದರು.

ಈ ಕುರಿತು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಭಾನುವಾರ ಎಎಪಿ ನಿಯೋಗದೊಂದಿಗೆ ಸಭೆ ನಡೆಸಿದರು. ಸಭೆಯ ನಂತರ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರು ದೆಹಲಿಗೆ ಹೆಚ್ಚುವರಿ ನೀರನ್ನು ನೀಡಬಹುದೇ ಎಂದು ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

You cannot copy content of this page

Exit mobile version