Home ರಾಜಕೀಯ ಐದು ತಿಂಗಳು ಜೈಲುವಾಸ ಮುಗಿಸಿರುವ ಸೂರೇನ್‌ ಈಗ ಜಾರ್ಖಂಡ್ ಸಿಎಂ: ಇಂದು ಪ್ರಮಾಣ ವಚನ ಸ್ವೀಕಾರ

ಐದು ತಿಂಗಳು ಜೈಲುವಾಸ ಮುಗಿಸಿರುವ ಸೂರೇನ್‌ ಈಗ ಜಾರ್ಖಂಡ್ ಸಿಎಂ: ಇಂದು ಪ್ರಮಾಣ ವಚನ ಸ್ವೀಕಾರ

0

ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿಯಾಗಿ ಹೇಮಂತ್ ಸೊರೇನ್ ಇಂದು ಸಂಜೆ 5 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿದ್ದ ಹೇಮಂತ್ ಸೊರೇನ್ ಅವರು ಐದು ತಿಂಗಳ ಬಳಿಕ ಜೂನ್ 28ರಂದು ಜೈಲಿನಿಂದ ಬಿಡುಗಡೆಯಾಗಿದ್ದರು, ಜನವರಿ 31ರಂದು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು.ಇಂದು ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಮುಖ್ಯಮಂತ್ರಿ ಸ್ಥಾನಕ್ಕೆ ಚಾಂಪೈ ಸೊರೇನ್ ಬುಧವಾರ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ರಾಜ್ಯದಲ್ಲಿ ಸರ್ಕಾರ ರಚಿಸುವಂತೆ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಅವರು ಹೇಮಂತ್ ಸೊರೇನ್‌ ಅವರಿಗೆ ಆಹ್ವಾನ ನೀಡಿದ್ದರು ಎನ್ನಲಾಗಿದೆ.

ಮಿತ್ರಪಕ್ಷಗಳ ಶಾಸಕರ ನಡುವೆ ಭಿನ್ನಾಭಿಪ್ರಾಯ ಬಂದಿದ್ದರಿಂದ ಹೇಮಂತ್ ಸೊರೇನ್ ಅವರೇ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂಬ ಒತ್ತಾಯಗಳು ಕೇಳಿ ಬಂದಿದ್ದವು. ಇದರಿಂದ ಚಾಂಪೈ ಸೊರೇನ್ ಬುಧವಾರ ಸಂಜೆಯೇ ರಾಜೀನಾಮೆ ಸಲ್ಲಿಸಿದ್ದಾರೆ. ಮಿತ್ರ ಪಕ್ಷಗಳ ಮುಖಂಡರು ಮತ್ತೆ ಸೂರೇನ್‌ ಅವರೇ ಸಿಎಂ ಆಗಬೇಕು ಎಂದು ಬಯಸಿದ್ದರಿಂದ ಚಾಂಪೇನ್‌ ರಾಜಿನಾಮೆ ನೀಡಿದ್ದಾರೆ.

You cannot copy content of this page

Exit mobile version