ಸ್ವಾತಂತ್ರ್ಯ ಹೋರಾಟಗಾರ ಶ್ರೀ ಮಾಣಿಕ್ಯಲಾಲ್ ವರ್ಮಾರವರ ಪುತ್ರಿ ಶ್ರೀಮತಿ. ಸ್ನೇಹಲತಾ ವರ್ಮಾಅವರು ತಮ್ಮ ಅಜ್ಜಿಯೊಂದಿಗೆ, ತಂದೆಯವರ ನೇತೃತ್ವದ ಬಿಜೋಲಿಯಾ ರೈತ ಚಳವಳಿಯಲ್ಲಿ ಭಾಗವಹಿಸಿದ್ದರು. ತಮ್ಮ ತಂದೆಯ ದಾರಿಯಲ್ಲಿಯೇ ಸಾಗಿದ ಸ್ನೇಹಲತಾರವರು, ಇದೇ ಕಾರಣಕ್ಕಾಗಿ ಎಷ್ಟೋ ಬಾರಿ ದೌರ್ಜನ್ಯವನ್ನು ಎದುರಿಸಬೇಕಾಯಿತು. ಆಕೆಯ ಈ ಪ್ರಯತ್ನಕ್ಕೆ, ಪತಿ ಶ್ರೀ ಹರೀಶ್ ಚಂದ್ರ ಪ್ರವಾಸಿಯವರ ಸಂಪೂರ್ಣ ಸಹಕಾರವಿತ್ತು. ಉದಯಪುರದಲ್ಲಿ ನಡೆದ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಕ್ಕಾಗಿ ಆಕೆಯನ್ನು ಬಂಧಿಸಲಾಯಿತು. ಅವರ ತಾಯಿ ‘ಮಹಿಳಾ ಸಂಘಟನೆ’ಯನ್ನು ಸ್ಥಾಪಿಸಿದರು. ಮುಂದೆ, ಸ್ವಾತಂತ್ರ್ಯ ಚಳುವಳಿಯಲ್ಲಿ ಮಹಿಳೆಯರನ್ನು ತೊಡಗಿಸಿಕೊಳ್ಳಲು ಸ್ನೇಹಲತಾ ವರ್ಮಾರವರು ಈ ಸಂಘಟನೆಯನ್ನು ಹೋರಾಟದ ವೇದಿಕೆಯನ್ನಾಗಿ ಮಾಡಿಕೊಂಡರು. ಮಹಿಳೆಯರ ಅಭಿವೃದ್ಧಿಗಾಗಿ ಹಲವಾರು ಕಾರ್ಯಗಳನ್ನು ನಿರ್ವಹಿಸಿದರು. ಸ್ವಾತಂತ್ರ್ಯದ ಅಗತ್ಯದ ಬಗ್ಗೆ ಮತ್ತು ಮೇವಾರದ ಅಭಿವೃದ್ಧಿಯ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸಿದರು.