ವಿಕ್ಟೋರಿಯಾ (ಆಸ್ಟ್ರೇಲಿಯಾ) ವಿಶ್ವಕಪ್ ಗ್ರೂಪ್ ಸ್ಟೇಜ್ ನಲ್ಲಿ ಪಂದ್ಯದಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡ ಭಾರೀ ಆಘಾತ ಎದುರಿಸಿದ್ದು, ನಮೀಬಿಯಾ ಮೇಲಿನ ಪಂದ್ಯದಲ್ಲಿ 55 ರನ್ ಗಳಿಂದ ಹೀನಾಯವಾಗಿ ಸೋತಿದೆ.
ಮೊದಲ ಬ್ಯಾಟ್ ಮಾಡಿದ ನಮೀಬಿಯಾ ನಿಗದಿತ 20 ಓವರ್ ಗಳಲ್ಲಿ ಸವಾಲಿನ 167ರನ್ ಗಳಿಸಿತು. ಇದಕ್ಕೆ ಪ್ರತ್ಯುತ್ತರವಾಗಿ ಶ್ರೀಲಂಕಾ ತಂಡ ಕೇವಲ 108 ರನ್ ಗಳಿಗೆ ಆಲ್ ಔಟ್ ಆಗುವುದರೊಂದಿಗೆ ನೀರಸ ಪ್ರದರ್ಶನ ತೋರಿತು.
ದಾಸುನ್ ಶನುಕ 29 ರನ್, ಭಾನುಕ ರಾಜಪಕ್ಸ 20 ರನ್ ಗಳಿಸಿದರು. ಶ್ರೀಲಂಕಾದ ಏಳು ಬ್ಯಾಟ್ಸ್‌ಮನ್ ಗಳು ಎರಡಂಕಿ ಸ್ಕೋರ್ ಗಳಿಸಲು ಸಾಧ್ಯವಾಗಲಿಲ್ಲ. ನಮೀಬಿಯಾದ ಡೇವಿಡ್ ವೀಸ್, ಬರ್ನಾರ್ಡ್ಸ್, ಬೆನ್ ಶಿಕಂಗೋ, ಜಾನ್ ಫ್ರೈಲಿಂಕ್ ತಲಾ ಎರಡು ವಿಕೆಟ್ ಗಳನ್ನು ಕಿತ್ತು ಶ್ರೀಲಂಕಾದ ಬ್ಯಾಟ್ಸ್‌ಮನ್ ಗಳು ಚೇತರಿಸಿಕೊಳ್ಳಲು ಅವಕಾಶವೇ ನೀಡಲಿಲ್ಲ.
19ನೇ ಓವರ್‌ನ ಕೊನೆಯ ಎಸೆತದಲ್ಲಿ ದುಶ್ಮಂತ ಚಮೀರಾ ಡೇವಿಡ್ ವೀಸ್ ಅವರ ಬೌಲಿಂಗ್‌ನಲ್ಲಿ ಜೆರ್ಹಾರ್ಡ್ ಎರಾಸ್ಮಸ್ ಅವರಿಗೆ ಡೀಪ್ ಮಿಡ್ ವಿಕೆಟ್ ನಲ್ಲಿ ಕ್ಯಾಚ್ ನೀಡುವುದರೊಂದಿಗೆ ಶ್ರೀಲಂಕಾ ಸರ್ವಪತನ ಕಂಡಿತು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ನಮೀಬಿಯಾ ಜಾನ್ ಫ್ರೈಲಿಂಕ್ ಅವರ 28 ಎಸೆತಗಳಲ್ಲಿ ಗಳಿಸಿದ 44 ರನ್‌ಗಳ ಸಹಾಯದೊಂದಿಗೆ 163 ರನ್ ಗಳಿಸಿತು. ಇನ್ನಿಂಗ್ಸ್‌ನ ಕೊನೆಯಲ್ಲಿ ಜೆ.ಜೆ.ಸ್ಮಿತ್ ಹದಿನಾರು ಎಸೆತಗಳಲ್ಲಿ 31 ರನ್ ಗಳಿಸಿದ ಜೆ.ಜೆ.ಸ್ಮಿತ್ ನಮೀಬಿಯಾ ಸ್ಕೋರ್ ಹೆಚ್ಚಿಸುವಲ್ಲಿ ಯಶಸ್ವಿಯಾದರು. ಆಲ್ ರೌಂಡ್ ಆಟ ಪ್ರದರ್ಶಿಸಿದ ಜಾನ್ ಪ್ರೈಲಿಂಕ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.
ವಿಶ್ವಕಪ್ ಪಂದ್ಯಾವಳಿಯ ಮೊದಲ ಪಂದ್ಯದಲ್ಲೇ ಅಚ್ಚರಿಯ ಫಲಿತಾಂಶ ಬಂದಿರುವುದು ವಿಶೇಷವಾಗಿದೆ.
ಸ್ಕೋರ್ ಕಾರ್ಡ್
ನಮೀಬಿಯಾ : 163/7 . 20ಓವರ್
ಮಿಚೆಲ್ ವ್ಯಾನ್ ಲಿಂಗೆನ್ : 3 (6), ಡಿವಾನ್ ಲಾ ಕುಕ್ : 9 (9), ಲೋಫ್ಟಿ ಈಟನ್ : 20(12), ಬಾರ್ಡ್ : 26(24), ಎರಾಸ್ಮುಸ್ (c) : 20(24), ಜಾನ್ ಫ್ರೆಂಕ್ಲಿನ್ : 44(28), ವೀಸ್ :0(1), ಸ್ಮಿತ್ (ನಾಟ್ ಔಟ್) : 31(16), ಇತರೆ : 10
ಬೌಲಿಂಗ್ :
ಎಂ. ತೀಕ್ಷಣ : 4-0-23-1, ಚಮೀರಾ : 4-0-39-1, ಪ್ರಮೋದ್ ಮಧುಶಣ್ : 4-0-37-2, ಸಿ.ಕರುಣಾರತ್ನೆ :4-0-36-1, ಡಬ್ಲೂ . ಹಸರಂಗಾ : 4-0-27-1
ಶ್ರೀಲಂಕಾ : 108/10 (19)
ಪಥುಮ್ ನಿಸಾಂಕ : 9(10), ಕುಸಾಲ್ ಮೆಂಡಿಸ್ : 6(6), ಧನಂಜಯ ಡಿ ಸಿಲ್ವಾ : 12(11), ಧನುಶ್ಕ ಗುಣತಿಲಕ : 0(1), ಭನುಕ ರಾಜಪಕ್ಷ : 20(21), ದನುಸ್ ಶನಕ : 29(23), ವಹಿಂದು, ಹರಸಂಗ : 4(8), ಚಮಿಕ ಕರುಣಾರತ್ನೆ : 5(8), ಪ್ರಮೋದ್ ಮಧುಶನ್ : 0(0), ದುಶ್ಮಂತಾ ಚಮೀರಾ : 8(15), ಮಹೀಶ್ ತೀಕ್ಷಣ (ನಾಟ್ ಔಟ್): 11(11), ಇತರೆ : 4
ಬೌಲಿಂಗ್
ಎರಾಸ್ಮುಸ್ :1-0-8-0, ಡೇವಿಡ್ ವೀಸ್ : 4-0-16-2, ಬಿ. ಸ್ಕಾಲ್ಟ್ಸ್ : 4-0-18-2, ಬಿ.ಶಿಕಾಂಗೊ : 3-1-22-2, ಸ್ಮಿತ್ : 3-0-16-1, ಫ್ರೆಂಕ್ಲಿನ್ :4-0-26-2