Home ದೇಶ ಟಿವಿಕೆ ಥ್ರಿಲ್ಲರ್; ಕೇವಲ ಒಂದು ಮತದ ಅಂತರದಲ್ಲಿ ಸೋತ ಡಿಎಂಕೆ ನಾಯಕ

ಟಿವಿಕೆ ಥ್ರಿಲ್ಲರ್; ಕೇವಲ ಒಂದು ಮತದ ಅಂತರದಲ್ಲಿ ಸೋತ ಡಿಎಂಕೆ ನಾಯಕ

0

ತಿರುಪ್ಪತ್ತೂರು: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ಭರ್ಜರಿ ಯಶಸ್ಸು ಸಾಧಿಸಿದ್ದು, 108 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿ ಹೆಚ್ಚು ಸ್ಥಾನಗಳನ್ನು ಪಡೆದ ಪಕ್ಷವಾಗಿ ಹೊರಹೊಮ್ಮಿದೆ. ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ನಂತರದ ಸ್ಥಾನಗಳಲ್ಲಿವೆ. ವಿಜಯ್ ಅಲೆಯಲ್ಲಿ ಡಿಎಂಕೆ ನಾಯಕರು ತತ್ತರಿಸಿದ್ದು, ರಾಜ್ಯದ ಸಹಕಾರ ಇಲಾಖೆಯ ಮಾಜಿ ಸಚಿವ ಕೆ.ಆರ್. ಪೆರಿಯಕರುಪ್ಪನ್ ಅವರು ಅನಿರೀಕ್ಷಿತವಾಗಿ ಕೇವಲ ಒಂದು ಮತದ ಅಂತರದಿಂದ ಸೋಲನುಭವಿಸಿದ್ದಾರೆ.

ತಿರುಪ್ಪತ್ತೂರು ವಿಧಾನಸಭಾ ಕ್ಷೇತ್ರದಿಂದ ತಮಿಳಗ ವೆಟ್ರಿ ಕಳಗಂ ಪಕ್ಷದ ಪರವಾಗಿ ಶ್ರೀನಿವಾಸ ಸೇತುಪತಿ ಸ್ಪರ್ಧಿಸಿದ್ದರು. ಪ್ರಕಟವಾಗಿರುವ ಫಲಿತಾಂಶದ ಪ್ರಕಾರ, ಟಿವಿಕೆ ನಾಯಕ ಶ್ರೀನಿವಾಸ ಸೇತುಪತಿ 83,375 ಮತಗಳನ್ನು ಪಡೆದರೆ, ಎರಡನೇ ಸ್ಥಾನದಲ್ಲಿರುವ ಪೆರಿಯಕರುಪ್ಪನ್ ಅವರು 83,374 ಮತಗಳನ್ನು ಪಡೆದಿದ್ದಾರೆ. ಅಂತಿಮ ಸುತ್ತಿನವರೆಗೂ ಅತ್ಯಂತ ರೋಚಕವಾಗಿ ಸಾಗಿದ ಈ ಸ್ಪರ್ಧೆಯಲ್ಲಿ, ಕೊನೆಯ ಸುತ್ತಿನ ಮುನ್ನ ಡಿಎಂಕೆ ನಾಯಕ ಪೆರಿಯಕರುಪ್ಪನ್ ಅವರು 30 ಮತಗಳ ಮುನ್ನಡೆಯಲ್ಲಿದ್ದರು. ಆದರೆ ಅಂತಿಮ ಸುತ್ತಿನಲ್ಲಿ ಟಿವಿಕೆ ಅಭ್ಯರ್ಥಿ ಶ್ರೀನಿವಾಸ ಸೇತುಪತಿ ಅವರು ಚೇತರಿಸಿಕೊಂಡು ಮಾಜಿ ಸಚಿವರಿಗಿಂತ ಒಂದು ಮತ ಹೆಚ್ಚು ಪಡೆಯುವ ಮೂಲಕ ರೋಮಾಂಚಕಾರಿ ಜಯ ದಾಖಲಿಸಿದ್ದಾರೆ.

ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಬಿಜೆಪಿ ನಾಯಕ ಕೆ.ಸಿ. ತಿರುಮರನ್ 29,054 ಮತಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

You cannot copy content of this page

Exit mobile version