ಬೆಂಗಳೂರು : ಆನ್ಲೈನ್ ವಹಿವಾಟು ನಡೆಸೋ ಬೇಕರಿ, ಕಾಂಡಿಮೆಂಟ್ಸ್, ಕಾಫಿ-ಟೀ ಅಂಗಡಿಗಳ ಮೇಲೆ ವಾಣಿಜ್ಯ ಇಲಾಖೆ ಅಧಿಕಾರಿಗಳು ಕಣ್ಣಿಟ್ಟಿದ್ದು, ತೆರಿಗೆ ಶಾಕ್ ನೀಡಿದ್ದಾರೆ. ಇದೇ ವಿಚಾರ ದೊಡ್ಡ ಸಂಘರ್ಷಕ್ಕೂ ಕಾರಣವಾಗಿದೆ.
ಕಳೆದ 4 ವರ್ಷದ ವಹಿವಾಟನ್ನ ಗಮಿನಿಸಿರೋ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು, ಜಿಎಸ್‌ಟಿ ಟ್ಯಾಕ್ಸ್ ಕಟ್ಟಬೇಕು ಎಂದು ಮಾಲೀಕರಿಗೆ ನೋಟಿಸ್ ಕೊಟ್ಟು ಶಾಕ್ ಕೊಟ್ಟ ಬಳಿಕ ಇದೀಗ ಸೇವೆಯನ್ನೇ ಬಂದ್ ಮಾಡೋಕೆ ವ್ಯಾಪಾರಸ್ಥರು ಮುಂದಾಗಿದ್ದಾರೆ.
ಜುಲೈ 21 ರೊಳಗೆ GST ಪಾವತಿ ಮಾಡದೇ ಇದ್ದರೆ ಬ್ಯಾಂಕ್ ಖಾತೆ ಮುಟ್ಟುಗೋಲು ಹಾಕುವ ಎಚ್ಚರಿಕೆಯನ್ನು ತೆರಿಗೆ ಇಲಾಖೆ ನೀಡಿದೆ. ಈ ತೆರಿಗೆಯನ್ನು ಮನ್ನಾ ಮಾಡುವಂತೆ ಸರ್ಕಾರ ಹಾಗೂ ತೆರಿಗೆ ಇಲಾಖೆಗೆ ಈಗಾಗಲೇ ವರ್ತಕರು ಮನವಿ ಸಲ್ಲಿಕೆ ಮಾಡಿದ್ದು, ಹತ್ತು ದಿನಗಳ ಗಡುವು ನೀಡಿದ್ದಾರೆ.
ವಾಣಿಜ್ಯ ಇಲಾಖೆ ಕ್ರಮದ ವಿರುದ್ಧ ಸಮರ ಸಾರಿರುವ ವರ್ತಕರು ಇದೀಗ ದಿಟ್ಟ ನಿರ್ಧಾರ ಕೈಗೊಂಡು ಪ್ರತ್ಯುತ್ತರ ನೀಡೋಕೆ ಮುಂದಾಗಿದ್ದಾರೆ. ಹಾಲು, ಹಾಲಿನ ಉತ್ಪನ್ನ ಮಾರಾಟವನ್ನು ಮೂರು ದಿನ ಬಂದ್ ಮಾಡೋಕೆ ತೀರ್ಮಾನ ಮಾಡಿದ್ದಾರೆ. ಜುಲೈ 23, 24, 25 ರಂದು ಹಾಲು ಹಾಗೂ ಹಾಲಿನ ಉತ್ಪನ್ನ ಮಾರಾಟ ಬಂದ್ ಆಗಲಿದೆ ಎನ್ನಲಾಗಿದೆ.ಜುಲೈ 25 ರಂದು ರಾಜ್ಯಾದ್ಯಾಂತ ಕಾಂಡಿಮೆಂಟ್ಸ್, ಬೇಕರಿ, ಚಹಾ, ಬೀಡ ಅಂಗಡಿ ಬಂದ್ ಆಗಲಿದೆ. ಸಿಗರೇಟ್ ಮಾರಾಟವೂ ಬಂದ್ ಆಗಲಿದ್ದು,ತರಕಾರಿ ಅಂಗಡಿಯೂ ಬಂದ್ ಮಾಡೋಕೆ ವರ್ತಕರು ಚಿಂತಿಸಿದ್ದಾರೆ.
ಈಗಾಗಲೇ UPI ಸಂಸ್ಥೆಯ ವತಿಯಿಂದ ವರ್ತಕರ ಮಾಹಿತಿ ಸಂಗ್ರಹಣೆ ಮಾಡಲಾಗಿದ್ದು, ಅದರ ಆಧಾರದ ಮೇಲೆ ವಾಣಿಜ್ಯ ಇಲಾಖೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಈ ಎಲ್ಲಾ ಬೆಳವಣಿಗೆಯಿಂದ 3 ದಿನ ಸೇವೆಯನ್ನೇ ಬಂದ್ ಮಾಡೋಕು ತೀರ್ಮಾನ ಮಾಡಿದೆ.