ಹಾಸನ: ನಕಲಿ ದಾಖಲೆ ಸೃಷ್ಟಿಸಿ ಕೆರೆ ಒತ್ತುವರಿ ಆರೋಪಿಸಿ ಹೊಳೆನರಸೀಪುರ ತಾಲ್ಲೂಕಿನ ಶ್ರವಣೂರು ಗ್ರಾಮಸ್ಥರು ಹಾಸನ ಡಿಸಿ ಕಛೇರಿ ಎದುರು ಪ್ರತಿಭಟನೆ ನಡೆಸಿದರು.
ಗ್ರಾಮದ ಕೆರೆಯನ್ನು ಬಂಟರತೊಳಲು ಗ್ರಾಮದ ಮಂಜೇಗೌಡ ಎಂಬುವವರಿಂದ ಒತ್ತುವರಿ ಮಾಡಿದ್ದು, ನಕಲಿ ದಾಖಲೆಗಳನ್ನ ಸೃಷ್ಟಿ ಮಾಡಿ ಕೆರೆ ಭೂಮಿ ಲಪಟಾಯಿಸಲು ಸಂಚು ಮಾಡಿದ್ದಾರೆಂದು ಆರೋಪಿಸಿದರು.
2018 ರಲ್ಲಿ ಎಸಿ ಕೋರ್ಟ್ ನಲ್ಲಿ ಮಂಜೇಗೌಡರ ಅರ್ಜಿ ವಜಾ ಆಗಿದ್ದು, ಆದರೆ ಮತ್ತೆ ನಕಲಿ ದಾಖಲೆ ಸೃಷ್ಟಿ ಮಾಡಿ ಡಿಸಿ ಕೋರ್ಟ್ ಮೂಲಕ ಭೂಮಿ ಲಪಟಾಯಿಸಲು ಯತ್ನ ಮಾಡಲಾಗಿದೆ. ಒಟ್ಟು 2 ಎಕರೆ ಭೂಮಿಗೆ ನಕಲಿ ದಾಖಲೆ ಸೃಷ್ಟಿ ಬಗ್ಗೆ ಗ್ರಾಮಸ್ಥರ ಆರೋಪಿಸಿದ್ದು, ತಹಸಿಲ್ದಾರ್, ವಿಎ, ಆರ್ ಐ ಸ್ಥಳ ಮಹಜರ್ ನಲ್ಲಿ ವ್ಯತಿರಿಕ್ತ ಹೇಳಿಕೆ ಇದ್ದರೂ ಸರ್ಕಾರಿ ಭೂಮಿ ಖಾಸಗಿ ವ್ಯಕ್ತಿ ಪಾಲಾಗಿದೆ, ಕೆರೆ ಭೂಮಿ ಉಳಿಸಿ ಎಂದು ಗ್ರಾಮಸ್ಥರು ಹೋರಾಟಕ್ಕಿಳಿದಿದ್ದಾರೆ.
ಕೂಡಲೇ ಡಿಸಿ ಕೋರ್ಟ್ ಆದೇಶ ರದ್ದು ಮಾಡುವಂತೆ ಒತ್ತಾಯಿಸಿದ್ದು, ಕಳೆದ ವರ್ಷ ಏಕಾಏಕಿ ಕೆರೆ ಜಾಗ ಉಳುಮೆ ಮಾಡಲು ಬಂದಾಗ ಅಕ್ರಮ ಬಯಲಾಗಿದೆ. ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಿರುವಂತೆ ಸರ್ಕಾರಿ ದಾಖಲೆ ತಿದ್ದಿದ್ದಾರೆ, ಅಧಿಕಾರಿಗಳ ಸ್ಥಳ ಪರಿಶೀಲನೆ ವೇಳೆ ಕೆರೆ ಭೂಮಿಯಲ್ಲಿ ಯಾವುದೇ ಕೃಷಿ ಮಾಡದಿರೋದು ಖಾತ್ರಿಯಾಗಿದೆ. ಎಲ್ಲಾ ಸ್ಥಳ ಮಹಜರ್ ನಲ್ಲಿ ಕೆರೆ ಭೂಮಿ ಎಂಬ ಬಗ್ಗೆ ವರದಿ ಇದೆ, ಇದ್ದರೂ ನಕಲಿ ದಾಖಲೆ ಸೃಷ್ಟಿಸಿ ಕೆರೆ ಭೂಮಿ ಉಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.