ದುಬೈ: ದುಬೈ ಏರ್ ಶೋ ವೇಳೆ ಭಾರತೀಯ ವಾಯುಪಡೆಯ ತೇಜಸ್ ಯುದ್ಧ ವಿಮಾನ ಪತನಗೊಂಡಿದ್ದು, ಪೈಲಟ್ ಸಾವನ್ನಪ್ಪಿರುವ ಘಟನೆ ನಡೆದಿದೆ. ಶುಕ್ರವಾರ (ನವೆಂಬರ್ 21) ಸ್ಥಳೀಯ ಸಮಯ ಮಧ್ಯಾಹ್ನ 2:10ರ ಸುಮಾರಿಗೆ ಸಂಭವಿಸಿದ ಈ ದುರ್ಘಟನೆಯಿಂದ ಸ್ಥಳದಲ್ಲಿ ಆತಂಕದ ವಾತಾವರಣ ಉಂಟಾಯಿತು.
ದೊಡ್ಡ ಜನಸಮೂಹದ ಮುಂದೆ ವೈಮಾನಿಕ ಪ್ರದರ್ಶನ ನೀಡುತ್ತಿದ್ದ ಸಂದರ್ಭದಲ್ಲಿ ವಿಮಾನ ನಿಯಂತ್ರಣ ತಪ್ಪಿ ನೆಲಕ್ಕುರುಳಿದಂತಿದೆ.
ಅಪಘಾತದ ಬಗ್ಗೆ ಭಾರತೀಯ ವಾಯುಪಡೆಯ ವಕ್ತಾರರು ಪ್ರಕಟಣೆ ನೀಡಿದ್ದು, “ದುಬೈ ಏರ್ ಶೋ ವೇಳೆ ತೇಜಸ್ ಯುದ್ಧವಿಮಾನ ಪತನಗೊಂಡಿದೆ. ಪೈಲಟ್ ಮಾರಣಾಂತಿಕ ಗಾಯಗಳಿಗೆ ಒಳಗಾಗಿದ್ದಾರೆ. ಜೀವಹಾನಿಗೆ ವಾಯುಪಡೆ ತೀವ್ರವಾಗಿ ವಿಷಾದ ವ್ಯಕ್ತಪಡಿಸುತ್ತಿದ್ದು, ಮೃತರ ಕುಟುಂಬದೊಂದಿಗೆ ನಿಂತಿದೆ” ಎಂದು ತಿಳಿಸಿದ್ದಾರೆ.
ಅಪಘಾತದ ನಿಖರ ಕಾರಣ ಪತ್ತೆಹಚ್ಚುವ ಸಲುವಾಗಿ ವಿಚಾರಣಾ ಸಮಿತಿಯನ್ನು ರಚಿಸಲಾಗಿದೆ.
