Home ಬ್ರೇಕಿಂಗ್ ಸುದ್ದಿ ಗುರಿ ಸಾಧನೆಗೆ ಪುಸ್ತಕ ಓದುವ ಹವ್ಯಾಸ ಅಗತ್ಯ ಎಂದು ಶಾಸಕ  – ಸಿ . ಎನ್...

ಗುರಿ ಸಾಧನೆಗೆ ಪುಸ್ತಕ ಓದುವ ಹವ್ಯಾಸ ಅಗತ್ಯ ಎಂದು ಶಾಸಕ  – ಸಿ . ಎನ್ ಬಾಲಕೃಷ್ಣ

0

ಹಾಸನ : ಅವರು ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ನಡೆದ, ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದಲ್ಲಿ ಸಾಹಿತಿ ಜಯಂತಿ ಚಂದ್ರಶೇಖರ್ ಅವರ, ಸಕ್ಕರೆ ಬಟ್ಟಿಲು ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿ, ಮಾನಸಿಕ ಸಮತೋಲನಕ್ಕೆ ಓದಿನಿಂದ ಮಾತ್ರ ಸಾಧ್ಯವಾಗುತ್ತದೆ, ಪಟ್ಟಣದ ಸಾರ್ವಜನಿಕ ಗ್ರಂಥಾಲಯ ಸೊಸಜ್ಜಿತವಾಗಿದ್ದು ಅದರ ಪ್ರಯೋಜನ ಪಡೆಯಬೇಕು, ನೂರಾರು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದು ಉದ್ಯೋಗ ಪಡೆದಿದ್ದಾರೆ, ದೇವಾಲಯದಂತೆ ಗ್ರಂಥಾಲಯವು ಪ್ರತಿಯೊಬ್ಬ ಮನುಷ್ಯನಿಗೂ ಅಗತ್ಯವಿದೆ, ಪುಸ್ತಕವನ್ನೇ ಸ್ನೇಹಿತರನ್ನಾಗಿ ಮಾಡಿಕೊಳ್ಳಬೇಕು, ಆ ಮೂಲಕ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು, ತಾಲೂಕಿನ ಗ್ರಾಮ ಪಂಚಾಯಿತಿ ಗ್ರಂಥಾಲಯಗಳು ಡಿಜಿಟಲ್ ವ್ಯವಸ್ಥೆ ಹೊಂದಿದೆ, ಎಂದರು.ರಾಜಕುಮಾರ್ ಅಭಿಮಾನಿಗಳ ಸಂಘದ ಗೌರವಾಧ್ಯಕ್ಷ ಹಾಗೂ, ಸಮಾಜ ಸೇವಕ ಪುಟ್ಟಣ್ಣ ಗೋಕಾಕ್, ಮಾತನಾಡಿ ಜಾತಿ ಧರ್ಮ ಭೇದಭಾವವಿಲ್ಲದ್ದು ಗ್ರಂಥಾಲಯವಾಗಿದೆ, ಓದಿಗೆ ಜ್ಞಾನಕ್ಕೆ ವಯಸ್ಸಿನ ನಿರ್ಬಂಧ ಇಲ್ಲವಾಗಿದೆ ಎಂದರು.

ಡಿವೈಎಸ್ಪಿ ಎನ್ ಕುಮಾರ್, ಅತಿಥಿ ಸ್ಥಾನದಿಂದ ಮಾತನಾಡಿ  ವಿದ್ಯಾರ್ಥಿಗಳು ಮೊಬೈಲ್ ಹಾಗೂ ಟಿವಿ ಸೀರಿಯಲ್ ಗೆ ಮಾರುಹೋಗಿದ್ದು, ಇದರಿಂದ ಜ್ಞಾಪಕ ಶಕ್ತಿ ಕುಂಠಿತವಾಗುತ್ತಿದೆ, ಎಂದು ವೈದ್ಯಕೀಯ ವಿಜ್ಞಾನಿಗಳು ಹೇಳಿದ್ದಾರೆ, ಮಕ್ಕಳು ಸಮಾಜದ ಆಸ್ತಿಯಾಗಬೇಕು ಜ್ಞಾನವಂತರಾಗಬೇಕು, ಈ ನಿಟ್ಟಿನಲ್ಲಿ ಗ್ರಂಥಾಲಯಗಳ ಸದ್ಬಳಕೆಯಾಗಲಿ ಎಂದರು. ಸಾಹಿತಿ ಜಯಂತಿ ಚಂದ್ರಶೇಖರ್, ಸಾರ್ವಜನಿಕ ಗ್ರಂಥಾಲಯದ ಅಧಿಕಾರಿ ದೇವರಾಜ್, ಕನ್ನಡ ವಾಸು, ವಿಜಯ್ ಕುಮಾರ್, ರೇವಣ್ಣ, ನಂದನ್ ಪುಟ್ಟಣ್ಣ  ಮುಂತಾದವರಿದ್ದರು. ಸಪ್ತಾಹದ ಅಂಗವಾಗಿ ವಿವಿಧ ಶಾಲೆಗಳಲ್ಲಿ ನಡೆದ, ಸ್ಪರ್ಧಾ ವಿಜೇತರಿಗೆ ಈ ಸಂದರ್ಭದಲ್ಲಿ ಬಹುಮಾನ ನೀಡಲಾಯಿತು.

You cannot copy content of this page

Exit mobile version