ನವದೆಹಲಿ : ಗೂಗಲ್ ಕ್ರೋಮ್ (Google chrome) ಬಳಕೆದಾರರಿಗೆ ಹೆಚ್ಚಿನ ಅಪಾಯಗಳಿದೆ ಎಂದು ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (CERT-In) ಎಚ್ಚರಿಸಿದೆ. ಕೆಲಸ, ಬ್ರೌಸಿಂಗ್ (Browsing), ಅಥವಾ ಬ್ಯಾಂಕಿಂಗ್‌ಗಾಗಿ Chrome ಬಳಸುವಾಗ ಜಾಗರೂಕರಾಗಿರಿ ಎಂದು ತಿಳಿಸಲಾಗಿದೆ.
ಹೌದು, CIVN-2025-0330 ಎಂಬ ಟ್ಯಾಗ್ ನಲ್ಲಿ, CERT-In ಕ್ರೋಮ್’ನಲ್ಲಿ ಎರಡು ಪ್ರಮುಖ ಸೆಕ್ಯೂರಿಟಿ ನ್ಯೂನತೆ ಕಂಡುಬಂದಿದೆ ಎನ್ನಲಾಗಿದೆ.CVE-2025-13223 ಮತ್ತು CVE-2025-13224 ಅನ್ನು ಸೈಬರ್ ಖದೀಮರು ರಿಮೋಟ್ ರೀತಿ ಬಳಸಿಕೊಂಡು ಸಿಸ್ಟಮ್’ನ್ನ ರಾಜಿ ಮಾಡಿಕೊಳ್ಳಲು ಅವುಗಳನ್ನು ಬಳಸಬಹುದು. ಆ ಮೂಲಕ ಬಳಕೆದಾರರ ಸಿಸ್ಟಮ್ ಹ್ಯಾಕ್ ಮಾಡಬಹುದು ಎಂದು ಎಚ್ಚರಿಸಿದೆ. ಈ ಬಗ್ಗೆ ಎಚ್ಚರಿಸಿರುವ ಗೂಗಲ್, ಅನೇಕ ಬಳಕೆದಾರರು ತಮ್ಮ ಬ್ರೌಸರ್’ಗಳನ್ನು ಅಪ್ಡೇಟ್ ಮಾಡುವ ಮೊದಲು ಹ್ಯಾಕರ್’ಗಳು ಈ ದೋಷದ ಲಾಭ ಪಡೆಯಲು ಮುಂದಾಗಿದ್ದಾರೆ. ಈಗಾಗಲೇ ಇದಕ್ಕೆ ಹಲವು ಬಳಕೆದಾರರು ಸಿಲುಕಿರಬಹುದು ಎಂದು ಹೇಳಿದೆ.
