Home ದೇಶ ವಯನಾಡ್ ದುರಂತವನ್ನು ಸಂಸದ ತೇಜಸ್ವಿ ಸೂರ್ಯ ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಸರಿಯಲ್ಲ: ಕೆಸಿ ವೇಣುಗೋಪಾಲ್

ವಯನಾಡ್ ದುರಂತವನ್ನು ಸಂಸದ ತೇಜಸ್ವಿ ಸೂರ್ಯ ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಸರಿಯಲ್ಲ: ಕೆಸಿ ವೇಣುಗೋಪಾಲ್

0

ಯಾನಾಡು ದುರಂತ ದೇಶವನ್ನೇ ಬೆಚ್ಚಿ ಬೀಳಿಸಿದ್ದು, ಈ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಕಾಂಗ್ರೆಸ್ ಸಂಸದ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ. ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಯನಾಡ್ ಘಟನೆಯ ಬಗ್ಗೆ ಮಾತನಾಡಿದ ರೀತಿ ತಪ್ಪು ಎಂದು ಹೇಳಿದ್ದಾರೆ.

ಆಡಳಿತ ಪಕ್ಷದ ಸದಸ್ಯರ ಮಾತು ಬೇಸರ ತಂದಿದೆ ಎಂದರು. ಇದು ಇಡೀ ದೇಶ ಮತ್ತು ಕೇರಳ ಕಂಡ ಅತ್ಯಂತ ದುರಂತ ಘಟನೆಯಾಗಿದ್ದು, ತೇಜಸ್ವಿ ಸೂರ್ಯ ಅವರನ್ನು ವಜಾಗೊಳಿಸಬೇಕು ಎಂದು ಗೃಹ ಸಚಿವ ಅಮಿತ್ ಶಾ ಅವರನ್ನು ಆಗ್ರಹಿಸಿದ್ದಾರೆ.

ಈ ಘಟನೆಯ ಬಗ್ಗೆ ನಾವು ಎಚ್ಚೆತ್ತುಕೊಳ್ಳಬೇಕು, ನಾವು ಕ್ರಮ ಕೈಗೊಂಡು ಸರಿಯಾದ ಫಲಿತಾಂಶವನ್ನು ಪಡೆಯಬೇಕು ಎಂದು ಹೇಳಿದರು. ಕಳೆದುಹೋದ ಜೀವಗಳನ್ನು ಮರಳಿ ತರಲು ಸಾಧ್ಯವಿಲ್ಲ, ಆದರೆ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎನ್ನುವುದನ್ನು ದೇಶಕ್ಕೆ ತೋರಿಸುವ ಸಮಯ ಇದಾಗಿದೆ ಎಂದು ವೇಣುಗೋಪಾಲ್ ಹೇಳಿದ್ದಾರೆ. ‌

ತೇಜಸ್ವಿ ಸೂರ್ಯ ಹೇಳಿದ್ದೇನು?

ಲೋಕಸಭೆಯಲ್ಲಿ ಮಾತನಾಡುತ್ತಾ ತೇಜಸ್ವಿ ಸೂರ್ಯ, ರಾಹುಲ್ ಗಾಂಧಿಯವರು ವಯನಾಡ್ ಸಂಸದರಾಗಿದ್ದ 1,800 ದಿನಗಳ ಅವಧಿಯಲ್ಲಿ ಅವರು ಒಮ್ಮೆಯೂ ಭೂಕುಸಿತ ಮತ್ತು ಪ್ರವಾಹದ ಒತ್ತುವರಿ ಸಮಸ್ಯೆಗಳನ್ನು ವಿಧಾನಸಭೆ ಅಥವಾ ಸಂಸತ್ತಿನಲ್ಲಿ ಪ್ರಸ್ತಾಪಿಸಲಿಲ್ಲ ಎಂದು ಆರೋಪಿಸಿದರು.

ವಯನಾಡಿನ ಭೂಕುಸಿತ ಪೀಡಿತ ಪ್ರದೇಶಗಳಿಂದ 4,000 ಕುಟುಂಬಗಳನ್ನು ಸ್ಥಳಾಂತರಿಸಲು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ 2020ರಲ್ಲಿ ಶಿಫಾರಸ್ಸು ಮಾಡಿದ್ದನ್ನು ಅವರ ಒತ್ತಿ ಹೇಳಿದರು.

“ಈ ಕುರಿತು ಇಂದಿನವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ, ಮತ್ತು ವಯನಾಡ್ ಪ್ರತಿನಿಧಿಸುವ ಸಂಸದರು ಈ ನಿರ್ಣಾಯಕ ವಿಷಯದ ಬಗ್ಗೆ ಮೌನವಾಗಿದ್ದಾರೆ” ಎಂದು ಅವರು ಹೇಳಿದರು. ವಿವಿಧ ಧಾರ್ಮಿಕ ಸಂಘಟನೆಗಳ ಒತ್ತಡದಿಂದಾಗಿ ಅಕ್ರಮ ಒತ್ತುವರಿಗಳನ್ನು ತೆಗೆಯಲು ಸಾಧ್ಯವಾಗಿಲ್ಲ ಎಂದು ವಿಧಾನಸಭೆಯಲ್ಲಿ ಒಪ್ಪಿಕೊಂಡಿರುವ ಕೇರಳದ ಅರಣ್ಯ ಸಚಿವರನ್ನು ಅವರು ಮತ್ತಷ್ಟು ಟೀಕಿಸಿದರು.

ವೋಟ್‌ ಬ್ಯಾಂಕ್‌ ಕಾರಣಕ್ಕಾಗಿ ಕಾರಣದಿಂದಾಗಿ ಈ ಅಕ್ರಮ ಅತಿಕ್ರಮಣಗಳನ್ನು ಕೇರಳ ಸರ್ಕಾರ ಸಹಿಸಿಕೊಂಡು ಸುಮ್ಮನಿತ್ತು ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಎಡಪಕ್ಷಗಳ ಸದಸ್ಯರೂ ತೇಜಸ್ವಿ ಸೂರ್ಯ ದುರಂತದ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸಾವಿನ ಸರಮಾಲೆ

ಇಲ್ಲಿಯವರೆಗೆ ಬಂದಿರುವ ಮಾಹಿತಿಯ ಪ್ರಕಾರ ಭೂಕುಸಿತ ಘಟನೆಯಲ್ಲಿ 163ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 143 ಮೃತದೇಹಗಳ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದೆ. ಅಧಿಕಾರಿಗಳು 32 ಮೃತ ದೇಹಗಳನ್ನು ಸಂತ್ರಸ್ತರ ಕುಟುಂಬಗಳಿಗೆ ಹಸ್ತಾಂತರಿಸಿದ್ದಾರೆ. ಸುಮಾರು 78 ಮೃತ ದೇಹಗಳನ್ನು ಮೆಪ್ಪಾಡಿ ಸಾಮಾಜಿಕ ಆರೋಗ್ಯ ಕೇಂದ್ರದಲ್ಲಿ ಇಡಲಾಗಿದೆ. ಇನ್ನು 32 ಮಂದಿಯ ಮೃತದೇಹಗಳನ್ನು ನಿಲಂಬೂರ್ ಜಿಲ್ಲಾಸ್ಪತ್ರೆಯಲ್ಲಿ ಇರಿಸಲಾಗಿದೆ. ಈ ಘಟನೆಯಲ್ಲಿ 91 ಮಂದಿ ನಾಪತ್ತೆಯಾಗಿದ್ದು, 191 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಪತ್ತು ನಿರ್ವಹಣಾ ತಂಡಗಳು ಮತ್ತು ಯೋಧರು ವಯನಾಡಿನಲ್ಲಿ ಪರಿಹಾರ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ.

You cannot copy content of this page

Exit mobile version