Monday, April 29, 2024

ಸತ್ಯ | ನ್ಯಾಯ |ಧರ್ಮ

ದಲಿತ ಜೋಡಿಗೆ ಮದುವೆಯಾಗಲು ಅನುಮತಿ ನಿರಾಕರಿಸಿದ ದೇವಾಲಯ: ಕ್ರಮ ಕೈಗೊಳ್ಳುವಂತೆ ದೂರು

ಚಿಕ್ಕಬಳ್ಳಾಪುರ: ಕರ್ನಾಟಕದ ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನದ ಮದುವೆ ಮಂಟಪದ ಅಧಿಕಾರಿಗಳು, ದಲಿತ ಕುಟುಂಬಕ್ಕೆ ದೇವಸ್ಥಾನದಲ್ಲಿ ಮದುವೆಯಾಗಲು ಅನುಮತಿ ನಿರಾಕರಿಸಿರುವ ಘಟನೆ ಚಿಕ್ಕಬಳ್ಳಾಪುರ ನಗರದ ಗುಡಿಬಂಡೆ ಪೇಟೆಯಲ್ಲಿ ನಡೆದಿದೆ.

ದಲಿತ ಸಮುದಾಯಕ್ಕೆ ಸೇರಿದ ಬ್ರಾಹ್ಮಣರ ಹಳ್ಳಿಯ ನಿವಾಸಿ ಆವುಲುಕೊಂಡಪ್ಪ ಎಂಬುವರು, ತಮ್ಮ ಮದುವೆಯನ್ನು ದೇವಸ್ಥಾನದಲ್ಲಿ ಮಾಡಿಕೊಳ್ಳಬೇಕು ಎಂದು ನಿರ್ಧಾರ ಮಾಡಿ, ದೇವಸ್ಥಾನದ ಆಡಳಿತ ಮಂಡಳಿಯನ್ನು ಸಂಪರ್ಕಿಸಿದ್ದರು. ಈ ವೇಳೆ ದೇವಸ್ಥಾನದ ಆಡಳಿತ ಮಂಡಳಿಯವರು, ಈಗಾಗಲೇ ದೇವಸ್ಥಾನದ ಕಾರ್ಯದರ್ಶಿ ಮಾಚವಲಹಳ್ಳಿ ವೆಂಕಟರಾಯಪ್ಪ ಅವರಿಗೆ ಸಮುದಾಯ ಭವನವು ಬುಕ್ ಆಗಿದ್ದು, ಲಭ್ಯವಿಲ್ಲ ಎಂದು ತಿಳಿಸಿದ್ದಾರೆ.

ನಂತರ, ಮದುವೆ ಮಂಟಪವನ್ನು ಹೇಳಿದ ದಿನಾಂಕದಂದು ಬುಕ್ ಮಾಡದಿರುವುದು ಮತ್ತು ದಂಪತಿಗಳು ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಉದ್ದೇಶಪೂರ್ವಕವಾಗಿ ದೇವಸ್ಥಾನದ ಸಮುದಾಯ ಭವನವನ್ನು ಬಾಡಿಗೆಗೆ ನೀಡದಿರುವುದು ಕಂಡುಬಂದಿದೆ.

ಈ ಹಿನ್ನಲೆಯಲ್ಲಿ, ದಂಪತಿಗಳು ಬೀಗ ಹಾಕಿದ ದೇವಸ್ಥಾನದಲ್ಲೇ ವಿವಾಹವಾಗಿದ್ದಾರೆ. ತಾನು ಮತ್ತು ಪತ್ನಿ ದಲಿತ ಸಮುದಾಯಕ್ಕೆ ಸೇರಿದವರೆಂಬ ಕಾರಣಕ್ಕೆ ಮದುವೆ ಮಂಟಪವನ್ನು ಬಾಡಿಗೆಗೆ ನೀಡಿಲ್ಲ ಎಂದು ಅವುಲುಕೊಂಡಪ್ಪ ಆರೋಪಿಸಿ, ಗುಡಿಬಂಡೆ ತಹಸೀಲ್ದಾರ್ ಹಾಗೂ ಸಮಾಜ ಕಲ್ಯಾಣಾಧಿಕಾರಿಗಳಿಗೂ ದೂರು ಸಲ್ಲಿಸಿದ್ದಾರೆ.

ಈ ಬಗ್ಗೆ ದಲಿತ ಸಂಘಟನೆಗಳು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ, ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು