Home ರಾಜ್ಯ ಹಾಸನ ಥಾರ್ ಜೀಪ್ ಮರಕ್ಕೆ ಡಿಕ್ಕಿ ನಜ್ಜುಗುಜ್ಜಾದ ಕಾರು ಓರ್ವ ಸ್ಥಳದಲ್ಲೆ ಸಾವು

ಥಾರ್ ಜೀಪ್ ಮರಕ್ಕೆ ಡಿಕ್ಕಿ ನಜ್ಜುಗುಜ್ಜಾದ ಕಾರು ಓರ್ವ ಸ್ಥಳದಲ್ಲೆ ಸಾವು

ಹಾಸನ: ಥಾರ್ ಜೀಪ್ ಮರಕ್ಕೆ ಡಿಕ್ಕಿ: ಸ್ಥಳದಲ್ಲೇ ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಹಾಸನ:ತಾಲ್ಲೂಕಿನ ಶಂಕರನಹಳ್ಳಿ-ಮಲ್ಲಿಗೆವಾಳು ಗ್ರಾಮದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಥಾರ್ ಜೀಪ್ ಮರಕ್ಕೆ ಡಿಕ್ಕಿಯಾಗಿ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ.

ಜೀಪ್‌ನಲ್ಲಿದ್ದ ನಾಲ್ವರಲ್ಲಿ ನಿಶ್ಚಿತ್ (28) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರು ಅರಕಲಗೂಡು ತಾಲ್ಲೂಕಿನ ಕೊಂಗಳ್ಳಿ ಗ್ರಾಮದ ಶಿಕ್ಷಕ ಚಂದ್ರ ಎಂಬವರ ಪುತ್ರ ಎಂದು ಗುರುತಿಸಲಾಗಿದೆ.  ಹರ್ಷ, ಕೀರ್ತಿ, ಹಾಗೂ ರಾಧಿಕಾ ಗಾಯಾಳುಗಳಾಗಿದ್ದು, ಅವರನ್ನು ತಕ್ಷಣ ಹಾಸನದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಅತಿ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಡಿಕ್ಕಿ ರಭಸಕ್ಕೆ ಥಾರ್ ಜೀಪ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಗೊರೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

You cannot copy content of this page

Exit mobile version