Home ಬೆಂಗಳೂರು ಜೆಡಿಎಸ್‌ 120 ಸ್ಥಾನ ಗೆಲ್ಲುವ ದಿನ ಬರುತ್ತದೆ‌ ಕಾದು ನೋಡಿ – ಹೆಚ್‌ ಡಿ ಕೆ

ಜೆಡಿಎಸ್‌ 120 ಸ್ಥಾನ ಗೆಲ್ಲುವ ದಿನ ಬರುತ್ತದೆ‌ ಕಾದು ನೋಡಿ – ಹೆಚ್‌ ಡಿ ಕೆ

ಬೆಂಗಳೂರು:  ಜೆಡಿಎಸ್‌ 120 ಸ್ಥಾನ ಗೆಲ್ಲುವ ದಿನವೂ ಬರುತ್ತದೆ ಎಂದು ಹೇಳುವ ಮೂಲಕ  ಮಾಜಿ ಸಚಿವ ಎನ್.ಚಲುವರಾಯಸ್ವಾಮಿ  ಅವರು ನೀಡಿರುವ “ಕುಮಾರಸ್ವಾಮಿ 120 ಸ್ಥಾನ ಗೆದ್ದು ತೋರಿಸಲಿ” ಎಂದು ನೀಡಿದ್ದ ಸವಾಲಿಗೆ  ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, “20 ವರ್ಷಗಳಿಂದ ನನ್ನ ವಿರುದ್ಧ ಟೀಕೆ ಮಾಡುತ್ತಲೇ ಇದ್ದಾರೆ. ನನ್ನ ಮೇಲೆ ವಿಷ ಕಾರುತ್ತಿದ್ದಾರೆ. 120 ಸ್ಥಾನ ಗೆದ್ದು ತೋರಿಸುವ ದಿನ ಬರುತ್ತದೆ. ಅಲ್ಲಿವರೆಗೆ ನಾನು ಸಾಯಲ್ಲ” ಎಂದು ಹೇಳಿದರು. ಪ್ರಾದೇಶಿಕ ಪಕ್ಷವನ್ನು ಉಳಿಸಿಕೊಳ್ಳುವುದು ಸುಲಭದ ಕೆಲಸವಲ್ಲ ಎಂದು ಹೇಳಿದ ಅವರು, “ಜೆಡಿಎಸ್‌ 18 ಸ್ಥಾನಗಳನ್ನು ಗೆದ್ದಿದ್ದರೂ ಪಕ್ಷ ಇನ್ನೂ ಗಟ್ಟಿಯಾಗಿ ಉಳಿದಿದೆ. ಕಾಂಗ್ರೆಸ್‌ 100 ವರ್ಷಗಳ ಇತಿಹಾಸವಿರುವ ಪಕ್ಷ. ಆದರೆ ಪಶ್ಚಿಮ ಬಂಗಾಳ, ತಮಿಳುನಾಡು, ಪಂಜಾಬ್ ಹಾಗೂ ಬಿಹಾರದಲ್ಲಿ ಅದರ ಸ್ಥಿತಿ ಏನಾಗಿದೆ ಎಂಬುದನ್ನು ನೋಡಿಕೊಳ್ಳಬೇಕು” ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಮುಂದಿನ ದಿನಗಳಲ್ಲಿ ರಾಜ್ಯದ ಜನರು ಜೆಡಿಎಸ್‌ಗೆ ಹೆಚ್ಚಿನ ಬೆಂಬಲ ನೀಡಲಿದ್ದು, 120 ಸ್ಥಾನಗಳನ್ನು ಗೆಲ್ಲುವ ದಿನವೂ ಬರಲಿದೆ ಎಂಬ ವಿಶ್ವಾಸವನ್ನು ಕುಮಾರಸ್ವಾಮಿ ವ್ಯಕ್ತಪಡಿಸಿದರು.

You cannot copy content of this page

Exit mobile version