ಪಿಓಪಿ ಗಣೇಶ ಮೂರ್ತಿ ವ್ಯಾಪಾರ ನಿಲ್ಲಿಸದಿದ್ರೆ ನಾವು!
ಹಾಸನ : ಮಣ್ಣಿನಿಂದ ಮಾಡಿದ ಪರಿಸರ ಸ್ನೇಹಿ ಗಣೇಶ ಮೂರ್ತಿಗೆ ಅಷ್ಟೊಂದು ಬೇಡಿಕೆ ಇಲ್ಲ. ಆದರೇ ಶೈನಿಂಗ್ ಇರುವ ಗಣಪತಿ ಮೂರ್ತಿ ವ್ಯಾಪಾರಕ್ಕೆ ಜನರು ಮುಗಿ ಬಿದ್ದಿದ್ದು, ಕೂಡಲೇ ಪಿಓಪಿ ಗಣಪತಿ ಮೂರ್ತಿ ಮಾರಾಟ ಮಾಡುವುದ ನಿಲ್ಲಿಸದಿದ್ದರೇ ನಾವು ಕೂಡ ಪಿಓಪಿ ಗಣೇಶ ಮೂರ್ತಿ ತಂದು ಮಾರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗಣೇಶ ಮೂರ್ತಿ ವ್ಯಾಪಾರಸ್ತ ಮನೋಜ್ ಮಾತನಾಡಿ, ಪ್ರತಿವರ್ಷ ಗಣೇಶನ ಮೂರ್ತಿ ವ್ಯಾಪಾರವನ್ನು ಹಾಸನ ನಗರದ ಮಹಾವೀರ ವೃತ್ತ ಸೇರಿದಂತೆ ವಿವಿಧ ಭಾಗಗಳಲ್ಲಿ ವ್ಯಾಪಾರ ಮಾಡಲಾಗುತ್ತಿದ್ದು, ಪರಿಸರ ಗಣಪತಿ ಎಂದು ಮಣ್ಣಿನಲ್ಲಿ ಮಾಡಿದರೇ ಖರೀದಿ ಮಾಡಲು ಅಷ್ಟೊಂದು ಗ್ರಾಹಕರೇ ಬರುತ್ತಿಲ್ಲ. ಎಲ್ಲಾರು ಶೈನಿಂಗ್ ಇರುವ ಪಿಓಪಿ ಗಣಪತಿಯತ್ತ ಹೋಗುತ್ತಿದ್ದಾರೆ. ಇನ್ನು ಪೇಪರ್ ಗಣೇಶ ಎಂಬುದು ಬಂದಿದ್ದು, ಆದರೇ ಅದು ಪೇಪರ್ ಗಣಪತಿಯಲ್ಲ ಕೆಮಿಕಲ್ ಮಿಶ್ರಿತವಾಗಿದ್ದು, ಬೇಕಾದೆರೇ ಪರೀಕ್ಷೆ ಮಾಡಲು ಲ್ಯಾಬ್ ಗೆ ಕಳುಹಿಸಿಕೊಡಿ ಎಂದು ಒತ್ತಾಯಿಸಿದರು. ಈ ಸಮಸ್ಯೆಯಿಂದಲೇ ಪೇಪರ್ ಗಣೇಶ ಎಂದು 10 15ಅಡಿ ಗಣೇಶನ ಖರೀದಿ ಮಾಡಲು ಜನರು ಮುಗಿ ಬಿದ್ದಿದ್ದಾರೆ. ಇದನ್ನು ಪರೀಕ್ಷೆ ಮಾಡಲು ಯಾರು ಸುಳಿಯುತ್ತಿಲ್ಲ. ನಾವು ಪರಿಸರ ಸ್ನೇಹಿ ಮಣ್ಣಿನ ಗಣಪತಿ ಮಾಡಿ ವ್ಯಾಪಾರ ಮಾಡಿದರೇ ಅನೇಕ ಬಾರಿ ಬಂದು ಪರೀಕ್ಷೆ ಮಾಡುತ್ತಿದ್ದಾರೆ. ಪೇಪರ್ ಅಲ್ಲ. ಹಾಸನದಲ್ಲಿ ಇಡುವ ಗಣಪತಿ ಬಹುತೇಕ ಪಿಓಪಿ ಗಣಪತಿಯೇ ಇದ್ದರೂ ಇದುವರೆಗೂ ಯಾರು ಕ್ರಮಕೈಗೊಂಡಿರುವುದಿಲ್ಲ ಎಂದುರು.. ಈ ಗಣಪತಿ ವಾಪಸ್ ಕೊಂಡೂಯ್ಯಲು ಹುಡುಗರಿಗೆ ಬಾಡಿಗೆ ಕೊಡಬೇಕು. ಮಳಿಗೆ ಬಾಡಿಗೆ ಕಟ್ಟಲು ಸಾಧ್ಯವಾಗದೇ ಇರುವ ಗಣಪತಿಯನ್ನು ಸ್ಥಳದಲ್ಲಿಯೇ ಬಿಟ್ಟು ಹೋಗುವ ಪರಿಸ್ಥಿತಿ ಬಂದಿದೆ. ಪರಿಸರ ಸ್ನೇಹಿ ಗಣೇಶನಿಗೆ ಯಾರು ಬೆಲೆ ಕೊಡುತ್ತಿಲ್ಲ. ಕೇಳುವವರೆ ಯಾರು ಇಲ್ಲ. ಕಳೆದ 25ವರ್ಷಗಳಿಂದಲೂ ಈ ಗಣಪತಿ ನಿರ್ಮಿಸಿ ವ್ಯಾಪಾರ ಮಾಡುವ ನಾವು ಈ ವರ್ಷ ಅತೀ ನಷ್ಟದಲ್ಲಿ ಸಿಲುಕಿದ್ದೇವೆ ಎಂದು ತಮ್ಮ ಅಳಲು ತೋಡಿಕೊಂಡರು.