Home ಬ್ರೇಕಿಂಗ್ ಸುದ್ದಿ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ ಹಿತನ್‌ಗೌಡ

ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ ಹಿತನ್‌ಗೌಡ

ಹಾಸನ : ನನ್ನ ಮಗ ಹಿತನ್‌ಗೌಡ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು, ಗ್ವಾಲಿಯರ್‌ನಲ್ಲಿ ನಡೆಯುವ ರಾಷ್ಟ್ರಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದ್ದಾನೆ ಎಂದು ತಾಯಿ ವೀಣಾ ಸಂತೋಷ ಹಂಚಿಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಕುವೆಂಪು ನಗರ ನಿವಾಸಿ ರವಿ-ವೀಣಾ ದಂಪತಿ ಪುತ್ರ ಹಿತನ್‌ಗೌಡ ಶಾಟ್‌ಪುಟ್, ಜಾವೆಲಿನ್ ಹಾಗೂ ಡಿಸ್ಕಸ್ ಥ್ರೋ ಸ್ಪರ್ಧೆಗಳಲ್ಲಿ ತಲಾ ಚಿನ್ನದ ಪದಕ ಗಳಿಸಿ ರಾಜ್ಯ ಮಟ್ಟದಲ್ಲಿ ಮಿಂಚಿದ್ದಾರೆ. ಇದರಿಂದಾಗಿ ಮುಂದಿನ ತಿಂಗಳು ಗ್ವಾಲಿಯರ್‌ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಪ್ಯಾರಾ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದಾರೆ. ಪ್ರಸ್ತುತ ಆಕ್ಸ್‌ಫರ್ಡ್ ಶಾಲೆಯ ೮ನೇ ತರಗತಿಯಲ್ಲಿ ಓದುತ್ತಿರುವ ಹಿತನ್‌ಗೌಡನ ಸಾಧನೆಗೆ ಪೋಷಕರು ಆನಂದ ವ್ಯಕ್ತಪಡಿಸಿದರು. “ಮಗನಿಗೆ ಕಾಲು ಊನವಾಗಿರುವುದರಿಂದ ಮುಂದೆ ಏನಾಗಬಹುದು ಎಂಬ ಭಯವಿತ್ತು. ಆದರೆ ಅವನು ತನ್ನ ಪರಿಶ್ರಮದಿಂದಲೇ ಆ ಭಯವನ್ನು ಮರೆಸಿದ್ದಾನೆ. ಅವನ ಸಾಧನೆ ನಮ್ಮ ಕುಟುಂಬಕ್ಕೆ ಅಪಾರ ಸಂತೋಷ ತಂದಿದೆ” ಎಂದು ತಾಯಿ ವೀಣಾ ಸಂತೋಷ ಹೇಳಿದರು.

You cannot copy content of this page

Exit mobile version