ಬೆಂಗಳೂರು: ರಾಜ್ಯ ಕಾಂಗ್ರೆಸ್ ಪಕ್ಷದ ನಾಯಕರುಗಳು ಬೆಂಗಳೂರು ನಗರದ ಹಲವುಕಡೆ ಪೇ ಸಿಎಂ(paycm) ಅಭಿಯಾನ ಶುರುಮಾಡಿರುವ ಹಿನ್ನಲೆ ಕಾಂಗ್ರೆಸ್ ಕೀಳು ಮಟ್ಟದ ರಾಜಕಾರಣ ನೆಡೆಸಿ ಆ ಮೂಲಕ ಅಧಿಕಾರಕ್ಕೇರುವ ಭ್ರಮೆಯಲ್ಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ ಪಕ್ಷದ ಕುರಿತು ವ್ಯಂಗ್ಯವಾಡಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಪರ ಕಾಳಜಿ ಇಲ್ಲದ ಕಾಂಗ್ರೆಸ್ ಕೀಳು ಮಟ್ಟದ ರಾಜಕಾರಣ ನಡೆಸಿ ಆ ಮೂಲಕ ಅಧಿಕಾರಕ್ಕೇರುವ ಭ್ರಮೆಯಲ್ಲಿದ್ದಾರೆ. ಕರ್ನಾಟಕದ ಜನತೆ ಇಂತಹ ಡರ್ಟಿ ಪಾಲಿಟಿಕ್ಸ್‌ಗೆ(ಕೊಳಕು ರಾಜಕೀಯ) ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಬೊಮ್ಮಾಯಿ ಅವರು ಹೇಳಿದರು.