ಹಾಸನ: ನೈಸರ್ಗಿಕವಾಗಿ ನಮ್ಮ ಕಣ್ಣ ಮುಂದೆ ಇರುವಂತಹ ನೀರಿನ ಮೂಲವನ್ನು ನಾಶ ಮಾಡುವ ಮೊದಲು ನಾವು ಯೋಚಿಸುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಶರಾದ ಹೇಮಾವತಿ ತಿಳಿಸಿದರು.
ನಗರದ ಸಮೀಪ ಬೈಪಸ್ ರಸ್ತೆಯಲ್ಲಿರುವ ರಾಜೀವ್ ಆಯುರ್ವೇದ ಕಾಲೇಜು ಸಭಾಂಗಣದಲ್ಲಿ ಹಸಿರುಭೂಮಿ ಪ್ರತಿಷ್ಠಾನ, ಭಾರತ ಜ್ಞಾನವಿಜ್ಞಾನ ಸಮಿತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಜಲ ದಿನಾಚರಣೆಯನ್ನು ಗಿಡ ನೆಟ್ಟು ನೀರು ಎರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಆಹಾರವಿಲ್ಲದೇ ಬದುಕಬಹುದು ಆದರೇ ನೀರಿಲ್ಲದೇ ಬದುಕುವುದು ತಂಬನೇ ಕಷ್ಟ. ಇದನ್ನ ಮನಸ್ಸಿನಲ್ಲಿಟ್ಟುಕೊಂಡರೇ ಇಂತಹ ಗಿಡ ನೆಡುವ ಅವಶ್ಯಕತೆ ಇರುವುದಿಲ್ಲ. ಏಕೆ ನಾವು ಇನ್ನು ಎಚ್ಚೆತ್ತುಕೊಂಡಿಲ್ಲ ಎಂಬುದು ನನ್ನ ಪ್ರಶ್ನೆಯಾಗಿದೆ. ಉತ್ತಮ ಪರಿಸರಕ್ಕಾಗಿ ಪ್ರತಿಯೊಬ್ಬರ ತುಂಬ ಶ್ರಮ ಬೇಕು. ಎಲ್ಲಾರು ತಮ್ಮ ತಮ್ಮ ಕರ್ತವ್ಯವನ್ನು ಅರಿತುಕೊಳ್ಳಬೇಕು ಎಂದರು. ಬಾಯಾರಿಕೆ ಆದಾಗ ನೀರಿನ ಬಾಟಲಿ ತೆಗೆದುಕೊಂಡು ಖಾಲಿಯಾದ ಮೇಲೆ ಎಲ್ಲೊ ಎಸೆದು ಹೋಗುತ್ತೇವೆ. ಇದರಿಂದ ನೈಸರ್ಗಿಕವಾಗಿ ಇದ್ದಂತಹ ಮೂಲಗಳನ್ನು ನಾಶ ಮಾಡುವುದಕ್ಕೆ ನಾವೆ ಕಾರಣರಾಗುತ್ತೇವೆ ಎಂದು ಬೇಸರವ್ಯಕ್ತಪಡಿಸಿದರು. ನೈಸರ್ಗಿಕವಾಗಿ ಇರುವಂತಹ ನೀರಿನ ಮೂಲವನ್ನು ನಾಶ ಮಾಡುವ ಮೊದಲು ನಾವು ಯೋಚಿಸುವ ಶಕ್ತಿ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಮಾನವ ಮತ್ತು ನೈಸರ್ಗಿಕ ನಡುವೆ ಸಂಬಂಧ ಏನಿದೆ ಹಾಳಾಗುವುದಕ್ಕೆ ನಾವು ಕಾರಣಕರ್ತರಾಗಬಾರದು. ಮನುಷ್ಯನ ಅತಿಯಾದ ಆಸೆಗಳು, ಪಡೆಯಬೇಕೆನ್ನುವ ಹುಚ್ಚು ಹಂಬಲ ಈ ರೀತಿ ಪ್ರಕೃತಿಯತ್ತಿರ ತಂದು ನಿಲ್ಲಿಸಿದೆ. ನೈಸರ್ಗಿಕ ಸಂಪತ್ತನ್ನು ಮುಂದಿನ ಪೀಳಿಗೆಗೆ ಅವಶ್ಯಕತೆ ಇದ್ದು, ನೈಸರ್ಗಿಕವಾಗಿ ದೊರಕುವ ವಸ್ತುಗಳನ್ನು ನಾವು ನಮ್ಮ ಸ್ವಾರ್ಥಕ್ಕೆ ನಾಶ ಮಾಡಬಾರದು ಎಂದು ಸಲಹೆ ನೀಡಿದರು. ಈಗಾಗಲೇ ನೀರಿನ ಅಹಕಾರ ಪ್ರಾರಂಭವಾಗಿದೆ. ನೀತಿನ ಮೂಲವನ್ನು ನಾವು ಉಳಿಸಿದರೇ ಮಾತ್ರ ಸಮಾಜ ಆರೋಗ್ಯವಾಗಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜೀವ್ ಆಯುರ್ವೇದ ಕಾಲೇಜು ಪ್ರಾಂಶುಪಾಲ ಮತ್ತು ಆಡಳಿತಾಧಿಕಾರಿ ಡಾ. ನಿತಿನ್, ವಿಜ್ಞಾನ ಬರಹಗಾರ ಕೆ.ಎಸ್. ರವಿಕುಮಾರ್, ಹಸಿರುಭೂಮಿ ಪ್ರತಿಷ್ಠಾನದ ಸಂಸ್ಥಾಪಕರಾದ ಆರ್.ಪಿ. ವೆಂಕಟೇಶ್ ಮೂರ್ತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಿ.ಕೆ. ದಾಕ್ಷಾಯಿಣಿ, ಹಸಿರುಭೂಮಿ ಪ್ರತಿಷ್ಠಾನದ ಅಧ್ಯಕ್ಷ ಸಿ.ಬಿ. ವೆಂಕಟೇಗೌಡ, ಭಾರತ ಜ್ಞಾನ ವಿಜ್ಞಾನ ಸಮಿತಿ ಅಧ್ಯಕ್ಷ ಡಾ. ಮಂಜುನಾಥ್, ವಕೀಲರಾದ ಗಿರಿಜಾಂಬಿಕ, ಅಪ್ಪಾಜಿಗೌಡ, ತಿರುಪತಿಹಳ್ಳಿ ಶಿವಶಂಕರಪ್ಪ ಇತರರು ಉಪಸ್ಥಿತರಿದ್ದರು.