ಹರಿಯಾಣ: ಕರ್ನಾಲ್ ಜಿಲ್ಲೆಯ ಹೆಮ್ಡಾ ಗ್ರಾಮದ ನ್ಯಾಯ ಬೆಲೆ ಅಂಗಡಿಯೊಂದರಲ್ಲಿ ಜನರು 20 ರೂಪಾಯಿ ಮೌಲ್ಯದ ತ್ರಿವರ್ಣ ಧ್ವಜಗಳನ್ನು ಖರೀದಿಸಲು ಒತ್ತಾಯಿಸಿದ್ದು, ಖರೀದಿಮಾಡದೇ ಇರುವವರಿಗೆ ಪಡಿತರ ಸಿಗುವುದಿಲ್ಲ ಎಂದು ಬೆದರಿಕೆ ನೀಡಿರುವ ಘಟನೆ ಬೆಳಕಿಗೆ ಬಂದಿದೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಜಿಲ್ಲಾ ಕಮಿಷನರ್ ಅನೀಶ್ ಯಾದವ್, ತಿರಂಗವನ್ನು ಖರೀದಿಸಲು ಇಚ್ಛಿಸುವ ಜನರಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ 20 ರೂ.ಗೆ ಧ್ವಜಗಳನ್ನು ನೀಡಲಾಗುತ್ತಿದೆ. ಆದರೆ ನ್ಯಾಯಬೆಲೆಯ ನಿರ್ವಾಹಕರೊಬ್ಬರು ಸಾರ್ವಜನಿಕರಿಗೆ ಬಲವಂತವಾಗಿ ಧ್ವಜಗಳನ್ನು ಖರೀದಿಸುವಂತೆ ಒತ್ತಾಯ ಮಾಡಿದ್ದು, ಖರೀದಿಮಾಡದೆ ಇರುವವರಿಗೆ ಪಡಿತರ ಸಿಗುವುದಿಲ್ಲ ಎಂದು ಬೆದರಿಕೆ ನೀಡಿರುವ ಘಟನೆ ತಿಳಿದು ಬಂದಿದೆ, ಈ ಹಿನ್ನಲೆಯಲ್ಲಿ ನಿರ್ವಾಹಕರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗಿದ್ದು, ನಿರ್ವಾಹಕರ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದರು.