ಹಾಸನ: ರೈತರ ಕುಲಕ್ಕೆ ಮಾರ್ಗದರ್ಶನ ನೀಡಿದ ಹಾಗೂ ದೇಶಕ್ಕಾಗಿ ತ್ಯಾಗ ಮಾಡಿದ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಎಂದರೇ ರೈತರಿಗೆ ಒಂದು ರೀತಿಯ ದೊಡ್ಡ ಹಬ್ಬವಾಗಿದೆ ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಬಾಬು ತಿಳಿಸಿದರು. ನಗರದ ಕುಂಬಾರ ಬೀದಿ ಬಳಿ ಚಿಕ್ನಾಳ್ ಟಿಪ್ಪು ವೃತ್ತದಲ್ಲಿ ಸೋಮವಾರದಂದು ಕರ್ನಾಟಕ ರಾಜ್ಯ ರೈತ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ಹಜರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ಬಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ನಾಡಲ್ಲಿ ಅನೇಕ ಹಬ್ಬ ಬಂದರೇ ಈ ಟಿಪ್ಪು ಜಯಂತಿ ಎಂದರೇ ರೈತರಿಗೆ ಒಂದು ರೀತಿ ದೊಡ್ಡ ಹಬ್ಬವಾಗಿದೆ. ಟಿಪ್ಪು ಅವರು ನಮ್ಮ ದೇಶಕ್ಕಾಗಿ ತ್ಯಾಗ ಮಾಡಿದ್ದು, ರೈತರ ಕುಲಕ್ಕೆ ಇವತ್ತು ರೇಷ್ಮೆಯನ್ನು ತಂದುಕೊಟ್ಟು ರೈತರಿಗೆ ಮಾರ್ಗದರ್ಶನ ಕೊಟ್ಟಿದ್ದಾರೆ. ರಂಜಾನ್, ಬಕ್ರಿದ್, ಯುಗಾದಿ, ಕ್ರಿಸ್ಮಸ್ ಯಾವುದೇ ಹಬ್ಬಕ್ಕಿಂತಲು ನಮಗೆ ಟಿಪ್ಪಿ ಜಯಂತಿಯನ್ನು ಇನ್ನು ಮುಂದೆ ಎಲ್ಲಾ ಕಡೆ ರೈತ ಸಂಘದಿಂದ ಮಾಡಬೇಕೆಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು ನಿರ್ದೇಶನ ನೀಡಿದ್ದಾರೆ ಎಂದರು.ಎಲ್ಲಾ ಜಿಲ್ಲೆಯಲ್ಲೂ ಈ ಟಿಪ್ಪು ಸುಲ್ತನ್ ಜಯಂತಿಯನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ಕರ್ನಾಟಕದಲ್ಲಿ ನಾವು ಯಾರು ಟಿಪ್ಪು ಜಯಂತಿಯನ್ನು ಕೇಳಿರಲಿಲ್ಲ. 2013ಕ್ಕೆ ಟಿಪ್ಪು ಜಯಂತಿ ಪ್ರಾರಂಭಿಸಿದರು. ಸರ್ಕಾರವೂ ಟಿಪ್ಪು ಜಯಂತಿಯನ್ನು ಘೋಷಣೆ ಮಾಡಲು ಆಗಿರುವುದಿಲ್ಲ. ಭೂಸ್ವಾಧೀನ ಕಾಯಿದೆಯನ್ನು ಜಾರಿ ಮಾಡಿರುವುದನ್ನು ಇನ್ನು ತೆಗೆಯಲು ಸಾಧ್ಯವಾಗಿರುವುದಿಲ್ಲ. ನೀವು ಜಯಂತಿಗೆ ರಜೆ ಕೊಟ್ಟರೆಷ್ಟು ಆದರೇ ನಮ್ಮ ಮನಸ್ಸಿನಲ್ಲಿ ಟಿಪ್ಪು ಇದ್ದಾರೆ. ನಮಗೆ ಟಿಪ್ಪು ಸುಲ್ತಾನರ ಬಗ್ಗೆ ಯಾವುದೇ ಜಯಂತಿ ಬಂದರೂ ಒಂದು ಗಂಟೆಗಳ ಕಾಲ ಹೆಚ್ಚಿನ ಸಮಯ ಕೆಲಸ ಮಾಡುವಂತೆ ಹೇಳಿರುವಂತರು. ರೈತರು ಯಾವುದೇ ಕೆಲಸ ಮಾಡಿದರೂ ಸೇವೆ ಮಾಡಿ ಎಂದು ಹೇಳಿದ್ದಾರೆ. ನಾವು ಇನ್ನು ಮುಂದೆ ರಕ್ಷಣಾ ವೇದಿಕೆ ಸೇರಿದಂತೆ ಎಲ್ಲಾ ಸಂಘಟನೆ ಸೇರಿ ಆಚರಿಸ
