Home ರಾಜಕೀಯ ಉಲ್ಭಣಗೊಂಡ ತೃಣಮೂಲ ಕಾಂಗ್ರೆಸ್‌ ಒಳಗಿನ ತಲ್ಲಣ: ಪ್ರಧಾನ ಕಚೇರಿ ವಶಪಡಿಸಿಕೊಂಡ ಬಂಡಾಯ ಬಣ

ಉಲ್ಭಣಗೊಂಡ ತೃಣಮೂಲ ಕಾಂಗ್ರೆಸ್‌ ಒಳಗಿನ ತಲ್ಲಣ: ಪ್ರಧಾನ ಕಚೇರಿ ವಶಪಡಿಸಿಕೊಂಡ ಬಂಡಾಯ ಬಣ

0

ಕೋಲ್ಕತಾ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದಲ್ಲಿನ ಆಂತರಿಕ ಕಲಹ ಮತ್ತಷ್ಟು ತೀವ್ರಗೊಂಡಿದೆ. ವಿರೋಧ ಪಕ್ಷದ ನಾಯಕ ರಿತಬ್ರತ ಬ್ಯಾನರ್ಜಿ ನೇತೃತ್ವದ ಬಂಡಾಯ ಬಣವು ಶುಕ್ರವಾರ ಕೋಲ್ಕತಾದಲ್ಲಿರುವ ಪಕ್ಷದ ಪ್ರಧಾನ ಕಚೇರಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.

ಪಕ್ಷದ ಹೆಸರು ಮತ್ತು ಗುರುತನ್ನು ತಮಗೇ ಹಂಚಿಕೆ ಮಾಡಬೇಕು ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ ಮರುದಿನವೇ ಈ ಬೆಳವಣಿಗೆ ನಡೆದಿದೆ. ಈ ಕಚೇರಿಯು 2022 ರಿಂದ ಪಕ್ಷದ ಪ್ರಮುಖ ಚಟುವಟಿಕೆಗಳ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ.

ಶುಕ್ರವಾರ ಹಿರಿಯ ನಾಯಕರಾದ ಫಿರ್ಹಾದ್ ಹಕೀಮ್, ಜಾವೇದ್ ಖಾನ್, ಸಂದೀಪನ್ ಸಹಾ ಮತ್ತು ಅಖ್ರುಜ್ಜಮಾನ್ ಅವರೊಂದಿಗೆ ರಿತಬ್ರತ ಬ್ಯಾನರ್ಜಿ ಈ ಕಚೇರಿಗೆ ಭೇಟಿ ನೀಡಿದ್ದರು. ಕಟ್ಟಡದ ಮಾಲೀಕರೊಂದಿಗೆ ಅಗತ್ಯ ಒಪ್ಪಂದಗಳನ್ನು ಪೂರ್ಣಗೊಳಿಸಿದ್ದೇವೆ ಮತ್ತು ಇನ್ಮುಂದೆ ತಾವು ಇಲ್ಲಿಂದಲೇ ಚಟುವಟಿಕೆಗಳನ್ನು ಮುಂದುವರಿಸುವುದಾಗಿ ಬಂಡಾಯ ನಾಯಕರು ಸ್ಪಷ್ಟಪಡಿಸಿದ್ದಾರೆ. ಆದರೆ, ಈ ಕ್ರಮವನ್ನು ಮಮತಾ ಬ್ಯಾನರ್ಜಿ ಬಣದ ನಾಯಕರಾದ ಮದನ್ ಮಿತ್ರಾ ಮತ್ತು ಕುನಾಲ್ ಘೋಷ್ ಖಂಡಿಸಿದ್ದಾರೆ.

You cannot copy content of this page

Exit mobile version