Home ರಾಜ್ಯ ಹಾಸನ ಸೀಮೆಎಣ್ಣೆ ಎರಚಿ ಬೆಂಕಿ ಹಚ್ಚಿ ಕೊಲೆ: ಮಗನಿಗೆ ನ್ಯಾಯ ಕೊಡಿಸುವಂತೆ ತಾಯಿ ನಿಂಗಮ್ಮ ಒತ್ತಾಯ

ಸೀಮೆಎಣ್ಣೆ ಎರಚಿ ಬೆಂಕಿ ಹಚ್ಚಿ ಕೊಲೆ: ಮಗನಿಗೆ ನ್ಯಾಯ ಕೊಡಿಸುವಂತೆ ತಾಯಿ ನಿಂಗಮ್ಮ ಒತ್ತಾಯ

ಹಾಸನ: ತನ್ನ ಮಗನ ಮೇಲೆ ಸೀಮೆಎಣ್ಣೆ ಎರಚಿ ಬೆಂಕಿ ಹಚ್ಚಿ ಕೊಲೆ ಮಾಡಿರುವ ಬಗ್ಗೆ ಮೊಮ್ಮಗ ಹೇಳಿರುವ ವಿಡಿಯೋ ಇದ್ದು, ಗ್ರಾಮಸ್ಥರು ಮಾತನಾಡಿರುವ ವಿಡಿಯೋ ಇದ್ದು, ನನ್ನ ಮಗನ ಸಾವಿಗೆ ಕಾರಣರಾದವರನ್ನು ಬಂಧಿಸಿ ನ್ಯಾಯ ಕೊಡಿಸುವಂತೆ ಅರಕಲಗೂಡು ತಾಲೂಕಿನ ಕ್ಯಾತನಹಳ್ಳಿ ತಾಯಿ ನಿಂಗಮ್ಮ ಹಾಗೂ ಗ್ರಾಮದ ಸಂಬಂಧಿಕ ಅಭಿಷೇಕ್ ಒತ್ತಾಯಿಸಿದರು.

        ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತಾಡಿದ ಅವರು, ತನ್ನ ಸೊಸೆ ಲಕ್ಷ್ಮಿ ಎಂಬುವವರು ಅನೈತಿಕ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ಅದನ್ನು ನನ್ನ ಮಗನಾದ ಮಂಜು ಅವರು ಪ್ರಶ್ನೆ ಮಾಡಿದ ಹಿನ್ನಲೆಯಲ್ಲಿ ಇದೆ ವಿಚಾರಕ್ಕೆ ಜಗಳ ನಡೆದಿತ್ತು. ನಂತರ ನನ್ನ ಸೊಸೆ ತನ್ನ ಮಗನ ಮೇಲೆ ಇಂಧನ ಎರಚಿ ಬೆಂಕಿ ಹಚ್ಚಿದ್ದಾಳೆ. ಅಕ್ಟೋಬರ್ ೧ ರಂದು ಈ ಘಟನೆ ನಡೆದಿದ್ದು, ಬಳಿಕ ನಗರದ ಸರ್ಕಾರಿ ಆಸ್ಪತ್ರೆಗೆ ಮಂಜು ಅವರನ್ನು ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅ.೩ ರಂದು ಮೃತಪಟ್ಟಿದ್ದಾರೆ ಎಂದರು. ಈ ಎಲ್ಲಾ ಘಟನೆಗೆ ಪ್ರತ್ಯೇಕ್ಷ ಸಾಕ್ಷಿಯಾಗಿ ತನ್ನ ಮಗನ ೮ ವರ್ಷದ ಮಗು ಈ ಘಟನೆಯ ಎಲ್ಲಾ ವಿಚಾರಗಳನ್ನು ವಿವರಿಸಿರುವ ಸಾಕ್ಷಿ ಹೇಳಿರುವ ವೀಡಿಯೋ ಜೊತೆಗೆ ಮಗ ಸಾವನ್ನಪ್ಪುವ ಮುನ್ನ ಪತ್ನಿ ಮಾಡಿರುವ ಕೃತ್ಯದ ಬಗ್ಗೆ ನಮ್ಮ ಬಳಿಯೂ ಹೇಳಿಕೊಂಡಿದ್ದಾನೆ. ಆದ್ದರಿಂದ ನನ್ನ ಮಗನಿಗೆ ಲಕ್ಷ್ಮಿಯು ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿರುವ ಬಗ್ಗೆ ಮೊಮ್ಮಗ ಕೀರ್ತನ್ ಗೌಡ ಹೇಳಿರುವ ವೀಡಿಯೋ ಸಹ ಇದೆ. ಅದೇ ರೀತಿ ಊರಿನ ಗ್ರಾಮಸ್ಥರು ಮಾತನಾಡಿರುವ ಆಡಿಯೋ ರೆಕಾರ್ಡ್ ಇದೆ. ನನ್ನ ಮಗನ ಸಾವು ಕೊಲೆಯಾಗಿದೆ. ಆದ್ದರಿಂದ ನನ್ನ ಮಗನ ಸಾವಿಗೆ ಕಾರಣರಾದವರನ್ನು ಬಂಧಿಸಿ ನನ್ನ ಮಗನ ಸಾವಿಗೆ ನ್ಯಾಯ ದೊರಕಿಸಿಕೊಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ಈ ವರೆಗೆ ಆರೋಪಿ ಸೊಸೆಯನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ದೂರಿದರು. ಜೊತೆಗೆ ಈ ಹಿಂದೆ ಎಸ್ಪಿ ಅವರನ್ನು ಭೇಟಿ ಮಾಡಿ ಘಟನೆ ಬಗ್ಗೆ ಮಾಹಿತಿ ನೀಡಲಾಗಿದೆ ಆದಾಗ್ಯೂ ಈ ವರೆಗೆ ಆರೋಪಿಯನ್ನು ಬಂಧಿಸಿಲ್ಲ. ಕೂಡಲೇ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪತ್ರಿಕಾಗೋಷ್ಟಿಯಲ್ಲಿ ಸಹೋದರಿಯರಾದ ಪಾರ್ವತಿ ರೇಣುಕಾ, ಸಾಕಮ್ಮ, ಹಾಗೂ ಸಂಬಂಧಿಕರಾದ ಕುಮಾರ್ ಇತರರು ಉಪಸ್ಥಿತರಿದ್ದರು.

You cannot copy content of this page

Exit mobile version