ಬೆಂಗಳೂರು: ಹೆಜ್ಜೆ ತಂಡದಿಂದ ನಾಳೆ( ಮಾರ್ಚ್ ೦6) ಸಂಜೆ 7ಕ್ಕೆ ರಂದು ಕಲಾಗ್ರಾಮ ಮಲ್ಲತಹಳ್ಳಿಯಲ್ಲಿ ತಾಯ್ತನದ ಅರಿವನ್ನು ಮೂಡಿಸುವ ʼಸುಣ್ಣದ ಸುತ್ತುʼ ನಾಟಕ ಪ್ರದರ್ಶನ ನಡೆಯಲಿದೆ.
ಈ ನಾಟಕವು ಕೇವಲ ತಾಯಿಯ ತ್ಯಾಗ ಮತ್ತು ಪ್ರೀತಿಯನ್ನಷ್ಟೇ ಅಲ್ಲದೆ, ನ್ಯಾಯ, ಅಧಿಕಾರ ಮತ್ತು ನಿಜವಾದ ಒಡೆತನದ ಅರ್ಥವನ್ನು ತಿಳಿಸುವ ಪ್ರಯತ್ನ ಮಾಡುತ್ತದೆ.ನಾಟಕದ ಮೂಲ ಕಥೆಯು ಜರ್ಮನ್ನಿನ ಚಿತ್ರಕಥೆಗಾರ ಬರ್ಟೋಲ್ಟ್ ಬ್ರೆಕ್ಟ್ ಅವರದ್ದಾಗಿದ್ದು, ಹೆಚ್, ಎಸ್, ವೆಂಕಟೇಶ್ ಮೂರ್ತಿ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಎಂದು ನಾಟಕದ ನಿರ್ದೇಶಕರಾದ ಹೇಮಂತ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಸಕ್ತರು (BOOK MY SHOW) ನಲ್ಲಿ ಆನಲೈನ್ ಟಿಕೇಟ್ ಅನ್ನು ಮುಂಗಡವಾಗಿ ಖರೀದಿಸಬಹುದು. ಜೊತೆಗೆ ಪ್ರದರ್ಶನ ನಡೆಯುವ ದಿನವೇ ಕಲಾಗ್ರಾಮದಲ್ಲಿ ಟಿಕೇಟ್ ಖರೀದಿ ಮಾಡಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.