ಬೆಂಗಳೂರು: ಯಡಿಯೂರಪ್ಪ ಲಿಂಗಾಯತ ಸಮುದಾಯಕ್ಕೆ ಸೇರಿದವರಲ್ಲ, ಅವರು ರಾಜ್ಯದ ಸಣ್ಣ ಒಬಿಸಿ ಸಮುದಾಯವಾದ ಬಳೆಗಾರ ಶೆಟ್ಟರ ಸಮುದಾಯಕ್ಕೆ ಸೇರಿದವರು ಎಂದು ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಮಂಗಳವಾರ ಹೇಳಿದ್ದಾರೆ.
“ಯಡಿಯೂರಪ್ಪ ಅವರ ಜಾತಿಯ ಬಗ್ಗೆ ಸತ್ಯ ತಿಳಿದುಕೊಳ್ಳಲು ಯಾರಾದರೂ ಬಯಸಿದಲ್ಲಿ ಅವರ ಹುಟ್ಟೂರಾದ ಮಂಡ್ಯ ಜಿಲ್ಲೆಯ ಬೂಕನಕೆರೆಗೆ ಭೇಟಿ ನೀಡಬೇಕು, ಅಲ್ಲಿ ಅವರ ಕುಟುಂಬವನ್ನು ಬಳೆಗಾರ ಶೆಟ್ಟರು ಎಂದು ಪರಿಗಣಿಸಲಾಗುತ್ತದೆ” ಎಂದು ಯತ್ನಾಳ್ ಸುದ್ದಿಗಾರರಿಗೆ ತಿಳಿಸಿದರು.
ಯಡಿಯೂರಪ್ಪ ಅವರು ಲಿಂಗಾಯತ ಸಮುದಾಯದ ಹೆಸರಿನಲ್ಲಿ ಬಿಜೆಪಿಯನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
“ವೀರೇಂದ್ರ ಪಾಟೀಲ್ ಮತ್ತು ಜೆ.ಎಚ್. ಪಟೇಲ್ ನಂತರ, ತಪ್ಪು ತಿಳುವಳಿಕೆಯಿಂದ ಯಡಿಯೂರಪ್ಪನವರನ್ನು ವೀರಶೈವ-ಲಿಂಗಾಯತ ಸಮುದಾಯವು ಅಪ್ಪಿಕೊಂಡಿತು. ತಮ್ಮ ಇಡೀ ರಾಜಕೀಯ ಜೀವನದ ಉದ್ದಕ್ಕೂ ಲಿಂಗಾಯತರಿಗೆ ಸಿಗಬೇಕಿದ್ದ ರಾಜಕೀಯ ಸ್ಥಾನಮಾನಗಳನ್ನು ಕಿತ್ತುಕೊಂಡಿದ್ದಾರೆ” ಎಂದು ಅವರು ಆರೋಪಿಸಿದರು.