ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಬಾಲ ನಟ ಕಬೀರ್ ಪಹ್ವಾ ಬಗ್ಗೆ ತಿಳಿದುಕೊಳ್ಳಬೇಕಾದ ಒಂದಷ್ಟು ವಿಷಯಗಳಿವೆ, ಬನ್ನಿ ಇವರ ಬಗ್ಗೆ ತಿಳಿಯೋಣ.. ಆಝಾದ್ ಕಂಡಿಗ ಅವರ ಬರಹದಲ್ಲಿ
ರಾಕಿಂಗ್ ಸ್ಟಾರ್ ಯಶ್, ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಮೂಡಿ ಬಂದ ಪ್ಯಾನ್ ಇಂಡಿಯಾ ಸಿನಿಮಾ “ಟಾಕ್ಸಿಕ್” ಬಗ್ಗೆ ಪರ ವಿರೋಧಗಳ ಭರಾಟೆಯ ನಡುವೆ ಪ್ರೇಕ್ಷಕರ ಮನಗೆದ್ದು ಸಿನಿಮಾ ಲೋಕದಲ್ಲಿ ಮನೆ ಮಾತಾಗಿರುವ ಬಾಲ ನಟ ಕಬೀರ್ ಪಹ್ವಾ ಬಗ್ಗೆ ತಿಳಿದುಕೊಳ್ಳಬೇಕಾದ ಒಂದಷ್ಟು ವಿಷಯಗಳಿವೆ, ಬನ್ನಿ ಇವರ ಬಗ್ಗೆ ತಿಳಿಯೋಣ.
ಬೇಡಿಕೆಯ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಳ್ಳುವ ಪುಟ್ಟ ಪ್ರತಿಭೆಗಳ ಸಾಲಿನಲ್ಲಿ ಸದ್ಯ ಅತಿ ಹೆಚ್ಚು ಚರ್ಚೆಗೊಳಗಾಗುತ್ತಿರುವ ಹೆಸರು ಕಬೀರ್ ಪಹ್ವಾ. ಗೀತು ಮೋಹನ್‌ದಾಸ್ ನಿರ್ದೇಶನದಲ್ಲಿ, ರಾಕಿಂಗ್ ಸ್ಟಾರ್ ಯಶ್ ನಾಯಕತ್ವದಲ್ಲಿ ಮೂಡಿಬಂದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾದಲ್ಲಿ ಬಾಲ ನಟನಾಗಿ ಕಬೀರ್ ಕಾಣಿಸಿಕೊಳ್ಳುತ್ತಿರುವುದು ಇಡೀ ದೇಶದ ಸಿನಿಪ್ರಿಯರ ಕಣ್ಣು ಈ ಪುಟಾಣಿಯತ್ತ ನೆಟ್ಟಿದೆ.
ಹತ್ತರ ಹರೆಯದ ದೆಹಲಿ ಮೂಲದ ಕಬೀರ್ ಪಹ್ವಾ ಅವರ ನಟನಾ ಪಯಣವು ಅತ್ಯಂತ ರೋಚಕವಾಗಿದೆ. ದೊಡ್ಡವರಂತೆ ಗಂಭೀರವಾಗಿ ಯೋಚಿಸುವ ಕಣ್ಣುಗಳು, ಕ್ಯಾಮೆರಾ ಎದುರು ಯಾವುದೇ ಮುಜುಗರವಿಲ್ಲದೆ ಪ್ರದರ್ಶಿಸುವ ಸ್ವಾಭಾವಿಕ ಹಾವಭಾವಗಳು ಇವರನ್ನು ಇತರ ಬಾಲ ಕಲಾವಿದರಗಿಂತ ಭೇದಿಸಿ ತೋರಿಸುತ್ತವೆ.
ಈ ಹುಡುಗ ಭವಿಷ್ಯದ ಇರ್ಫಾನ್ ಖಾನ್ ಆಗೋದ್ರಲ್ಲಿ ಎರಡು ಮಾತಿಲ್ಲ ಅನ್ನುತ್ತಿದೆ ಇಂಡಿಯಾ ಸಿನಿಮಾ ಇಂಡಸ್ಟ್ರಿ.
ಕಬೀರ್ ಆರಂಭದಲ್ಲಿ ಸಣ್ಣಪುಟ್ಟ ಮಾಡಲಿಂಗ್ ಹಾಗೂ ಜಾಹೀರಾತುಗಳ ಮೂಲಕ ಗ್ಲಾಮರ್ ಲೋಕಕ್ಕೆ ಕಾಲಿಟ್ಟ ಈ ಬಾಲಕ, ನಂತರದ ದಿನಗಳಲ್ಲಿ ವಿಭಿನ್ನ ಹಾಗೂ ಚಾಲೆಂಜಿಗ್ ಪಾತ್ರಗಳ ಮೂಲಕ ಚಿತ್ರರಂಗದ ದಿಗ್ಗಜರ ಗಮನ ಸೆಳೆದರು.
ಕಬೀರ್ ಪಹ್ವಾ ಅವರ ನಟನಾ ಪ್ರತಿಭೆಗೆ ಮೊದಲ ದೊಡ್ಡ ಮೈಲಿಗಲ್ಲು ಸಿಕ್ಕಿದ್ದು ‘ಓಪಿಯಮ್’ ಚಿತ್ರದ ಮೂಲಕ. ಅಮನ್ ಸಚ್‌ದೇವ್ ನಿರ್ದೇಶನದ ಈ ಕಲಾತ್ಮಕ ಆಂಥಾಲಜಿ ಚಿತ್ರದಲ್ಲಿ ಕಬೀರ್ ನಿರ್ವಹಿಸಿದ ಪಾತ್ರ ಅತ್ಯಂತ ಪ್ರಭಾವಶಾಲಿಯಾಗಿತ್ತು. ಈ ಸಿನಿಮಾ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದು, ಪ್ರತಿಷ್ಠಿತ ‘ಟೋಕಿಯೋ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್’ ಹಾಗೂ ಭಾರತದ ಹೆಸರಾಂತ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಾಗ ಕಬೀರ್ ಅವರ ಮುಖಪುಟದ ಅಭಿನಯ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.
ಕಬೀರ್ ಅವರ ವೃತ್ತಿಜೀವನದಲ್ಲಿ ದೊಡ್ಡ ತಿರುವು ನೀಡಿದ ಚಿತ್ರ 2023ರಲ್ಲಿ ಬಿಡುಗಡೆಯಾದ ‘ಶಾಸ್ತ್ರಿ ವಿರುದ್ ಶಾಸ್ತ್ರಿ’. ಬಾಲಿವುಡ್‌ನ ಹಿರಿಯ ದಿಗ್ಗಜ ನಟ ಪರೇಶ್ ರಾವಲ್ ಮತ್ತು ನೀನಾ ಕುಲಕರ್ಣಿ ಅವರಂತಹ ಅನುಭವಿ ಕಲಾವಿದರ ಜೊತೆ ತೆರೆ ಹಂಚಿಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ, ಚಿತ್ರದಲ್ಲಿ ಯಮನ್ ಅಲಿಯಾಸ್ ‘ಮೊಮೋಜಿ’ ಎಂಬ ಸಂಕೀರ್ಣ ಭಾವನೆಗಳ ಪಾತ್ರಕ್ಕೆ ಕಬೀರ್ ಜೀವ ತುಂಬಿದ ರೀತಿ ಅದ್ಭುತವಾಗಿತ್ತು.
ಪೋಷಕರು ಮತ್ತು ಅಜ್ಜ-ಅಜ್ಜಿಯರ ನಡುವಿನ ಕಾನೂನು ಹೋರಾಟದ ನಡುವೆ ಸಿಲುಕುವ ಮಗುವಿನ ಮಾನಸಿಕ ತುಮುಲಗಳನ್ನು ಕಬೀರ್ ಬಹಳ ಪರಿಣಾಮಕಾರಿಯಾಗಿ ತೆರೆಮೇಲೆ ತಂದರು. ಈ ಚಿತ್ರ ಇವರಿಗೆ ವಿಮರ್ಶಕರ ಮೆಚ್ಚುಗೆಯನ್ನು ತಂದುಕೊಟ್ಟಿತು.
ಸದ್ಯ ಇಡೀ ಭಾರತೀಯ ಚಿತ್ರರಂಗ ಕಾಯುತ್ತಿದ್ದ ‘ಟಾಕ್ಸಿಕ್’ ಚಿತ್ರದಲ್ಲಿ ಕಬೀರ್ ಪಹ್ವಾ ನಟಿಸುತ್ತಿರುವುದು ಇವರ ವೃತ್ತಿಜೀವನದ ಬಿಗ್ ಬ್ರೇಕ್ ಎಂದೇ ಹೇಳಬಹುದು. ಚಿತ್ರದಲ್ಲಿ ಯಶ್ (ರಾಯಾ) ಅವರ ಮಗನ ಬಾಲ್ಯದ ಹಂತದಲ್ಲಿ ಟಿಕೇಟ್ ಆಗಿ ಕಬೀರ್ ಕಾಣಿಸಿಕೊಂಡಿದ್ದಾರೆ. ಯಶ್ ಅವರ ಗಲಾಟೆ ತುಂಬಿದ, ಕತ್ತಲೆಯ ಲೋಕದ ಎಪಾಸಿಕ್ ದೃಶ್ಯಗಳಲ್ಲಿ ಈ ಬಾಲಕನ ಮುಖದ ಗಂಭೀರ ಕಳೆ ಮತ್ತು ನಿಗೂಢ ಹಾವಭಾವಗಳು ಟೀಸರ್‌ನಲ್ಲೇ ರೋಮಾಂಚನ ಮೂಡಿಸಿವೆ.
ಪ್ಯಾನ್ ಇಂಡಿಯಾ ಮಟ್ಟದ ದೊಡ್ಡ ಬ್ಯಾನರ್ ಸಿನಿಮಾವೊಂದರಲ್ಲಿ ಈ ಮಟ್ಟದ ಪ್ರಮುಖ ಪಾತ್ರ ಸಿಕ್ಕಿರುವುದು ಕಬೀರ್ ಪ್ರತಿಭೆಗೆ ಸಿಕ್ಕ ದೊಡ್ಡ ಗೌರವ.
ಸಿನಿಮಾಗಳಷ್ಟೇ ಅಲ್ಲದೆ, ಒಟಿಟಿ ಪ್ಲಾಟ್‌ಫಾರ್ಮ್‌ಗಳ ವೆಬ್ ಸೀರೀಸ್‌ಗಳಲ್ಲೂ ಬ್ಯುಸಿಯಾಗಿರುವ ಕಬೀರ್ ಪಹ್ವಾ, ಕೇವಲ ವಯಸ್ಸಿನಲ್ಲಿ ಚಿಕ್ಕವರಾದರೂ ನಟನೆಯಲ್ಲಿ ಪರಿಪಕ್ವತೆಯನ್ನು ಸಾಧಿಸಿದ್ದಾರೆ. ನಿರ್ದೇಶಕರ ಕಲಾವಿದ ಎಂದೇ ಕರೆಸಿಕೊಳ್ಳುವ ಈ ಮುದ್ದು ಬಾಲಕ, ಮುಂದಿನ ದಿನಗಳಲ್ಲಿ ಭಾರತೀಯ ಚಿತ್ರರಂಗದ ಸ್ಟಾರ್ ನಟರ ಸಾಲಿನಲ್ಲಿ ಬೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ.
ಬಾಲಿವುಡ್ ಹಿರಿಯ ನಟ ದಿ. ಇರ್ಫಾನ್ ಖಾನ್ ನಂತೆ ತೆರೆಯ ಮೇಲೆ ತನ್ನ ಕಣ್ಣುಗಳ ಮೂಲಕವೇ ನಟಿಸುವ ಈ ಪುಟ್ಟ ಪ್ರತಿಭೆಯು ಭವಿಷ್ಯದ ಉತ್ತಮ ನಟನಾಗಲಿದ್ದಾರೆ ಎಂಬುವುದು ಸಿನಿ ಪ್ರಿಯರ ಅಭಿಪ್ರಾಯ.
~ ಆಝಾದ್ ಕಂಡಿಗ
