Home ಸಿನಿಮಾ ಕೇವಲ ಅಹಿಂಸಾ ಮಾರ್ಗದಿಂದ ಸ್ವಾತಂತ್ರ್ಯ ಸಿಕ್ಕಿಲ್ಲ: ಸಾವರ್ಕರ್ ಸಮರ್ಥನೆ ಮಾಡಿದ ನಟ ರಣದೀಪ್ ಹೂಡಾ

ಕೇವಲ ಅಹಿಂಸಾ ಮಾರ್ಗದಿಂದ ಸ್ವಾತಂತ್ರ್ಯ ಸಿಕ್ಕಿಲ್ಲ: ಸಾವರ್ಕರ್ ಸಮರ್ಥನೆ ಮಾಡಿದ ನಟ ರಣದೀಪ್ ಹೂಡಾ

0

ಮುಂಬೈ: ಭಾರತದ ಸ್ವಾತಂತ್ರ್ಯ ಸಂಗ್ರಾಮವು ಕೇವಲ ಅಹಿಂಸಾ ಮಾರ್ಗದಿಂದ ಮಾತ್ರವೇ ಲಭಿಸಿಲ್ಲ, ಅದರಲ್ಲಿ ಸಶಸ್ತ್ರ ಕ್ರಾಂತಿಯ ಕೊಡುಗೆಯೂ ಅಪಾರವಾಗಿದೆ ಎಂದು ಬಾಲಿವುಡ್ ನಟ ಹಾಗೂ ನಿರ್ದೇಶಕ ರಣದೀಪ್ ಹೂಡಾ ಅಭಿಪ್ರಾಯಪಟ್ಟಿದ್ದಾರೆ.

ತಾವು ನಿರ್ದೇಶಿಸಿ, ಮುಖ್ಯ ಭೂಮಿಕೆಯಲ್ಲಿ ನಟಿಸಿದ ‘ಸ್ವಾತಂತ್ರ್ಯ ವೀರ ಸಾವರ್ಕರ್’ ಚಿತ್ರಕ್ಕಾಗಿ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿ ಪಡೆದುಕೊಂಡಿರುವ ಹೂಡಾ, ಗುಜರಾತ್‌ನ ಏಕತಾನಗರದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದರು.

“ಭಾರತಕ್ಕೆ ಸ್ವಾತಂತ್ರ್ಯ ಬಂದಿದ್ದು ಕೇವಲ ಅಹಿಂಸೆಯಿಂದ ಮಾತ್ರ ಎಂದು ಬಹುತೇಕರು ಭಾವಿಸಿದ್ದಾರೆ; ಆದರೆ ಅದು ಪೂರ್ಣ ಸತ್ಯವಲ್ಲ, ದೇಶಕ್ಕಾಗಿ ದೊಡ್ಡ ಮಟ್ಟದ ಸಶಸ್ತ್ರ ಕ್ರಾಂತಿಯೂ ನಡೆದಿದೆ” ಎಂದು ಅವರು ಹೇಳಿದರು. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಂದ ಹಿಡಿದು ವಿನಾಯಕ ದಾಮೋದರ್ ಸಾವರ್ಕರ್ ವರೆಗೆ ಅನೇಕ ಮಹನೀಯರು ದೇಶದ ಮುಕ್ತಿಗಾಗಿ ಕ್ರಾಂತಿಯ ಹಾದಿಯನ್ನು ಆಯ್ಕೆ ಮಾಡಿಕೊಂಡಿದ್ದರು.

ಈ ಐತಿಹಾಸಿಕ ವಾಸ್ತವವನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದಲೇ ಈ ಚಿತ್ರವನ್ನು ನಿರ್ಮಿಸಲಾಗಿದೆ ಎಂದ ಅವರು, ಸಶಸ್ತ್ರ ಹೋರಾಟದ ಪರಂಪರೆಯಲ್ಲಿ ಸಾವರ್ಕರ್ ಪ್ರಮುಖ ಪಾತ್ರ ವಹಿಸಿದ್ದರು ಎಂದು ತಾವು ಬಲವಾಗಿ ನಂಬಿರುವುದಾಗಿ ತಿಳಿಸಿದರು. ‘ಸ್ವಾತಂತ್ರ್ಯ ವೀರ ಸಾವರ್ಕರ್’ ರಣದೀಪ್ ಹೂಡಾ ನಿರ್ದೇಶನದ ಮೊದಲ ಚಿತ್ರವಾಗಿದೆ.

You cannot copy content of this page

Exit mobile version