Home ದೇಶ ಸ್ಕೂಟರ್‌ಗೆ ಟ್ರ್ಯಾಕ್ಟರ್ ಡಿಕ್ಕಿ: ಮರಾಠಿ ಕಿರುತೆರೆ ನಟಿ ಸಾವು

ಸ್ಕೂಟರ್‌ಗೆ ಟ್ರ್ಯಾಕ್ಟರ್ ಡಿಕ್ಕಿ: ಮರಾಠಿ ಕಿರುತೆರೆ ನಟಿ ಸಾವು

0

ಕೊಲ್ಹಾಪುರ: 32 ವರ್ಷದ ಮರಾಠಿ ಕಿರುತೆರೆ ನಟಿಯೊಬ್ಬಳು ತನ್ನ ಮೋಟಾರ್ ಸೈಕಲ್‌ಗೆ ಕಾಂಕ್ರೀಟ್ ಮಿಕ್ಸರ್ ಟ್ರಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿರುವ ಘಟನೆ ಕೊಲ್ಹಾಪುರ ಜಿಲ್ಲೆಯಲ್ಲಿ ನಡೆದಿದೆ.

‘ತುಜ್ಯಹತ್ ಜೀವ ರಂಗಲ’ ಎಂಬ  ಧಾರಾವಾಹಿಯಲ್ಲಿ ಕಾಣಿಸಿಕೊಂಡ ನಟಿ ಕಲ್ಯಾಣಿ ಕುರಲೆ-ಜಾಧವ್ (32), ಶನಿವಾರ ಸಂಜೆ ಮನೆಗೆ ತೆರಳುತ್ತಿದ್ದಾಗ ಸಾಂಗ್ಲಿ-ಕೊಲ್ಹಾಪುರ ಹೆದ್ದಾರಿಯ ಹಲೊಂಡಿ ಒಳಪ್ರದೇಶದ ಬಳಿ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ʼಅಫಘಾತದ ಬಳಿಕ ಆಕೆಯನ್ನು ಹತ್ತಿರದ ಆಸ್ಪತ್ರೆಗೆ  ಕರೆದೊಯ್ಯಲಾಗಿದ್ದು, ಚಿಕಿತ್ಸೆಗೂ ಮುನ್ನವೇ ಆಕೆಯು ಸಾವನ್ನಪ್ಪಿರುವುದು ತಿಳಿದುಬಂದಿದೆ.

ಈ ಹಿನ್ನಲೆಯಲ್ಲಿ ಟ್ರಾಕ್ಟರ್ ಚಾಲಕನ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಮೋಟಾರು ವಾಹನ ಕಾಯ್ದೆ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಕೊಲ್ಹಾಪುರ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

You cannot copy content of this page

Exit mobile version