ವಲಸೆಯನ್ನು ನಿಗ್ರಹಿಸುವ ಕಾರ್ಯವನ್ನು ಗಂಭೀರವಾಗಿ ತೆಗೆದುಕೊಂಡಿರುವ ಅಮೇರಿಕಾ ಈಗ ಸುಮಾರು 41 ರಾಷ್ಟ್ರಗಳ ಪ್ರಯಾಣಿಕರಿಗೆ ಅಮೇರಿಕಾ ಪ್ರವೇಶ ನಿಷೇಧಿಸುವ ಸಾಧ್ಯತೆ ಇದೆ ಎಂದು ಪ್ರಖ್ಯಾತ ನಿಯತಕಾಲಿಕೆ ‘ರಾಯಿಟರ್ಸ್’ ವರದಿ ಮಾಡಿದೆ. ಅದರಲ್ಲಿ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನ ದೇಶಕ್ಕೂ ಈ ನಿಷೇಧದ ಬಿಸಿ ತಟ್ಟಲಿದೆ.
ಸ್ಪಷ್ಟವಾಗಿ ಮುಸ್ಲಿಂ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಜ ಈ ಹೊಸ ನಿಯಮದಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಭೂತಾನ್ ಸೇರಿದಂತೆ 41 ದೇಶಗಳು ಯುನೈಟೆಡ್ ಸ್ಟೇಟ್ಸ್ ಗೆ ಪ್ರಯಾಣಿಸುವುದನ್ನು ನಿಷೇಧಿಸುವ ಸಾಧ್ಯತೆಯಿದೆ ಎಂದು ರಾಯಿಟರ್ಸ್ಗೆ ಲಭ್ಯವಾದ ಟ್ರಂಪ್ ಸರ್ಕಾರದ ಕರಡು ತಿಳಿಸಿದೆ.
ಏಳು ಬಹುಸಂಖ್ಯಾತ ಮುಸ್ಲಿಂ ರಾಷ್ಟ್ರಗಳ ಪ್ರಯಾಣಿಕರನ್ನು ನಿಷೇಧಿಸಿದ ಟ್ರಂಪ್ ಅವರ ಮೊದಲ ಅಧಿಕಾರಾವಧಿಯಲ್ಲಿ ವಿಧಿಸಲಾದ ನಿರ್ಬಂಧಗಳಿಗಿಂತ ಈ ನಿರ್ಬಂಧಗಳು ವಿಶಾಲವಾಗಿರುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭದ್ರತಾ ಅಧಿಕಾರಿಗಳ ಶಿಫಾರಸುಗಳ ಕರಡು ಪಟ್ಟಿಯಲ್ಲಿ ಪಾಕಿಸ್ತಾನವನ್ನು 26 ದೇಶಗಳ ಗುಂಪಿನೊಂದಿಗೆ ಸೇರಿಸಲಾಗಿದ್ದು, ಶೆಹಬಾಜ್ ಷರೀಫ್ ನೇತೃತ್ವದ ಸರ್ಕಾರವು “60 ದಿನಗಳಲ್ಲಿ ನ್ಯೂನತೆಗಳನ್ನು” ಪರಿಹರಿಸಲು ಪ್ರಯತ್ನಿಸಲು ವಿಫಲವಾದರೆ ಯುಎಸ್ ವೀಸಾ ವಿತರಣೆಯನ್ನು ಭಾಗಶಃ ಸ್ಥಗಿತಗೊಳಿಸಬೇಕಾಗುತ್ತದೆ ಎಂದು ರಾಯಿಟರ್ಸ್ ಗೆ ಲಭ್ಯವಾದ ಕರಡು ನಲ್ಲಿ ತಿಳಿಸಲಾಗಿದೆ.
ಈ ಕರಡು ಪ್ರತಿ ಬಗ್ಗೆ ಈ ಹಿಂದೆ ಪ್ರತಿಕ್ರಿಯಿಸಿದ ಪಾಕಿಸ್ತಾನ ವಿದೇಶಾಂಗ ಸಚಿವಾಲಯವು ಪ್ರಯಾಣ ನಿಷೇಧದ ವರದಿಗಳನ್ನು “ಊಹಾಪೋಹ” ಎಂದು ತಳ್ಳಿಹಾಕಿತು. ಇಂತಹ ನಿರ್ಬಂಧಗಳ ಬಗ್ಗೆ ಪಾಕಿಸ್ತಾನಕ್ಕೆ ಯಾವುದೇ ಅಧಿಕೃತ ಸೂಚನೆ ಬಂದಿಲ್ಲ ಎಂದು ವಿದೇಶಾಂಗ ಕಚೇರಿ ವಕ್ತಾರ ಶಫ್ಕತ್ ಅಲಿ ಖಾನ್ ಒತ್ತಿ ಹೇಳಿದರು. “ಈಗಿನಂತೆ, ಇದೆಲ್ಲವೂ ಊಹಾಪೋಹವಾಗಿದೆ ಮತ್ತು ಆದ್ದರಿಂದ ಪ್ರತಿಕ್ರಿಯೆಯ ಅಗತ್ಯವಿಲ್ಲ” ಎಂದು ಖಾನ್ ಹೇಳಿದರು.