ಹಾಸನ : ಮಾ.ದ.ಕ ವಸ್ತು ಎಂ.ಡಿ.ಎಂ.ಎ ಮಾ.ರಾ.ಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ನಗರದ ಪೆನ್ಷನ್ ಮೊಹಲ್ಲ ಪೊಲೀಸರು ಬಂಧಿಸಿದ್ದು. ಅಡ್ಲಿಮನೆ ರಸ್ತೆಯಿಂದ ರಾಜಕುಮಾರ ನಗರದ ಕಡೆಗೆ ಹೋಗುವ ರಸ್ತೆಯಲ್ಲಿರುವ ಚಿಕ್ಕಟ್ಟೆ ಕೆರೆಯ ಬದಿಯಲ್ಲಿ ಸಾರ್ವಜನಿಕರ ವಿಶ್ರಾಂತಿಗಾಗಿ ನಿರ್ಮಿಸಿರುವ ತೆರೆದ ಶೆಡ್ಡಿನಲ್ಲಿ ಆಜ಼ಾದ್ದ್ ಮೊಹಲ್ಲಾದ ವಾಸಿ ಇರ್ಫಾನ್ ಪಾಷ ಎಂಬಾತ ಮತ್ತೊಬ್ಬನೊಂದಿಗೆ ಇದ್ದು, ಇಬ್ಬರೂ ಅ.ಮ.ಲು ಬರಿಸುವ ಮಾ.ದ.ಕ ವಸ್ತುವನ್ನು ತಮ್ಮ ಬಳಿ ಇಟ್ಟುಕೊಂಡು ಅಕ್ರಮವಾಗಿ ಮಾ.ರಾ.ಟ ಮಾಡಲು ಸಂಚು ಮಾಡಿದ್ದಾರೆ ಎಂದು ದೂರವಾಣಿ ಮೂಲಕ ಬಂದ ಖಚಿತ ಮಾಹಿತಿ ಆಧರಿಸಿ ಪೆನ್ಷನ್ ಮೊಹಲ್ಲಾ ಠಾಣೆ ಇನ್ಸ್ಪೆಕ್ಟರ್ ಸ್ವಾಮೀನಾಥ್ ಮತ್ತವರ ತಂಡ ಪೂರ್ವ ತಯಾರಿ ಸಹಿತ ಕಾರ್ಯಾಚರಣೆ ನಡೆಸಿತು., ಸ್ಥಳಕ್ಕೆ ಹೋಗಿ ನೋಡಿದಾಗ ಒಬ್ಬ ಅಪರಿಚಿತ ವ್ಯಕ್ತಿಯಿಂದ ಎಂ.ಡಿ.ಎಂ.ಎ. ಮಾದಕ ವಸ್ತುವನ್ನು ಖರೀದಿ ಮಾಡಿ ಬಂದು ಹಂಚಿ ಕೊಳ್ಳಲು ಮಾತುಕತೆ ನಡೆಸುತ್ತಿದ್ದ, ಪೆನ್ಷನ್ ಮೊಹಲ್ಲಾದ ಇರ್ಫಾನ್ ಪಾಷ ಅಲಿಯಾಸ್ ಚೀಪು ಮತ್ತು ವಿಜಯನಗರ ಬಡಾವಣೆಯ ಇಮ್ರಾನ್ ಎಂಬುವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 28 ಸಾವಿರ ಬೆಲೆ ಬಾಳುವ 6 ಗ್ರಾಂ 98 ಮಿಲಿ ತೂಕದ ಎಂ.ಡಿ.ಎಂ.ಎ ಮಾ.ದ.ಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರ ಬಳಿಯಿದ್ದ ಗ್ರೇ ಬಣ್ಣದ ಒಪ್ಪೋ ಮೊಬೈಲ್ ಅಮಾನತ್ತುಪಡಿಸಿಕೊಂಡು ಹೆಚ್ಚಿನ ತನಿಖೆ ಹಾಗೂ ಪೆಡ್ಲರ್ ಗಿಡಿಯಲು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.