Home ದೇಶ ಭಾರತದ ಇಬ್ಬರು ಪತ್ರಕರ್ತರಿಗೆ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ಗೌರವ

ಭಾರತದ ಇಬ್ಬರು ಪತ್ರಕರ್ತರಿಗೆ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ಗೌರವ

0

ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅತ್ಯಂತ ಪ್ರತಿಷ್ಠಿತವೆಂದು ಪರಿಗಣಿಸಲಾಗುವ ‘ಪುಲಿಟ್ಜರ್’ ಪ್ರಶಸ್ತಿಯು ಈ ಬಾರಿ ಇಬ್ಬರು ಭಾರತೀಯ ಪತ್ರಕರ್ತರನ್ನು ವರಿಸಿದೆ. ಡಿಜಿಟಲ್ ಕಣ್ಗಾವಲು ವ್ಯವಸ್ಥೆಗಳು ಮತ್ತು ಸೈಬರ್ ವಂಚನೆಗಳ ಹಿಂದಿನ ವ್ಯವಹಾರಗಳನ್ನು ಆಳವಾಗಿ ಅಧ್ಯಯನ ಮಾಡಿ ಜಗತ್ತಿನ ಮುಂದೆ ತೆರೆದಿಟ್ಟಿದ್ದಕ್ಕಾಗಿ ಆರ್.ಕೆ. ಆನಂದ್ ಮತ್ತು ಸುಪರ್ಣಾ ಶರ್ಮಾ ಅವರಿಗೆ ಈ ಗೌರವವನ್ನು ನೀಡಲಾಗುತ್ತಿದೆ ಎಂದು ‘ಕೊಲಂಬಿಯಾ ವಿಶ್ವವಿದ್ಯಾಲಯ’ ಪ್ರಕಟಣೆಯಲ್ಲಿ ತಿಳಿಸಿದೆ.

ಇಲಸ್ಟ್ರೇಟೆಡ್ ರಿಪೋರ್ಟಿಂಗ್ ಮತ್ತು ಕಾಮೆಂಟರಿ ವಿಭಾಗದಲ್ಲಿ ಈ ಇಬ್ಬರು ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ. ಪ್ರಮುಖ ಮಾಧ್ಯಮ ಸಂಸ್ಥೆಯೊಂದರ ನಟಾಲೀ ಒಬಿಕೊ ಪಿಯರ್ಸನ್ ಅವರೊಂದಿಗೆ ಆನಂದ್ ಮತ್ತು ಶರ್ಮಾ ಅವರು ಜಂಟಿಯಾಗಿ ಈ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

ಇವರ ಈ ಸಂಶೋಧನಾತ್ಮಕ ಯೋಜನೆಯು ‘ಟ್ರಾಪ್ಡ್’ (Trapped) ಎಂಬ ಹೆಸರಿನಲ್ಲಿ ಪ್ರಕಟವಾಗಿತ್ತು. ಭಾರತದ ಪ್ರಸಿದ್ಧ ನ್ಯೂರಾಲಜಿಸ್ಟ್ ಒಬ್ಬರು ‘ಡಿಜಿಟಲ್ ಅರೆಸ್ಟ್’ ಹಗರಣಕ್ಕೆ ಹೇಗೆ ಬಲಿಯಾದರೆನ್ನುವುದನ್ನು ಈ ವರದಿಯು ಅತ್ಯಂತ ವಿವರವಾಗಿ ಚಿತ್ರಿಸಿದೆ.

ಪತ್ರಿಕೋದ್ಯಮ, ಸಾಹಿತ್ಯ ಮತ್ತು ಸಂಗೀತ ಕ್ಷೇತ್ರಗಳಲ್ಲಿನ ಸಾಧನೆಗಾಗಿ ಕೊಲಂಬಿಯಾ ವಿಶ್ವವಿದ್ಯಾಲಯವು ಪ್ರತಿವರ್ಷ ಪುಲಿಟ್ಜರ್ ಪ್ರಶಸ್ತಿಗಳನ್ನು ಘೋಷಿಸುತ್ತದೆ. ಸಂಶೋಧನಾತ್ಮಕ ವರದಿಗಾರಿಕೆ ಮತ್ತು ಸಾರ್ವಜನಿಕ ಸೇವಾ ಪತ್ರಿಕೋದ್ಯಮದಲ್ಲಿ ಅಸಾಧಾರಣ ಪ್ರತಿಭೆ ತೋರಿದವರಿಗೆ ನೀಡಲಾಗುವ ಈ ಪ್ರಶಸ್ತಿಯನ್ನು ಜಾಗತಿಕ ಮಟ್ಟದ ಅತ್ಯುನ್ನತ ಮಾನದಂಡವೆಂದು ಪರಿಗಣಿಸಲಾಗುತ್ತದೆ.

You cannot copy content of this page

Exit mobile version