Home ವಿದೇಶ ಗ್ರೆಟಾ ಥನ್‌ಬರ್ಗ್‌ ಗಡೀಪಾರು:‌ ಇಸ್ರೇಲ್ ದೇಶದ ಇಬ್ಬರು ಸಚಿವರಿಗೆ ಐದು ದೇಶಗಳಿಂದ ನಿರ್ಬಂಧ

ಗ್ರೆಟಾ ಥನ್‌ಬರ್ಗ್‌ ಗಡೀಪಾರು:‌ ಇಸ್ರೇಲ್ ದೇಶದ ಇಬ್ಬರು ಸಚಿವರಿಗೆ ಐದು ದೇಶಗಳಿಂದ ನಿರ್ಬಂಧ

0

ಜೆರುಸಲೆಮ್: ತನ್ನ ಸೇನೆಯಿಂದ ಬಂಧನಕ್ಕೆ ಒಳಗಾಗಿದ್ದ ಪರಿಸರ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್ ಅವರನ್ನು ಆಕೆಯ ತವರು ದೇಶವಾದ ಸ್ವೀಡನ್‌ಗೆ ಗಡೀಪಾರು ಮಾಡಿರುವುದಾಗಿ ಇಸ್ರೇಲ್ ಘೋಷಿಸಿದೆ.

ಗ್ರೆಟಾ ಮತ್ತು ತಂಡದವರು ಸೋಮವಾರದಂದು ಗಾಜಾ ಕಡೆಗೆ ಮಾನವೀಯ ನೆರವು ತಲುಪಿಸಲೆಂದು ಮೆಡೆಲೀನ್ ಹಡಗಿನಲ್ಲಿ ಪ್ರಯಾಣಿಸುತ್ತಿದ್ದ ಸಂಧರ್ಭದಲ್ಲಿ ಇಸ್ರೇಲ್‌ ಸೇನೆ ಅವರೆಲ್ಲರನ್ನು ತನ್ನ ವಶಕ್ಕೆ ಪಡೆದಿತ್ತು. ನಂತರ ಗ್ರೆಟಾ ಮತ್ತು ಇತರ ಮೂವರು ಇಸ್ರೇಲ್‌ ತೊರೆಯಲು ಒಪ್ಪಿಗೆ ನೀಡಿದ ಕಾರಣ ಅವರನ್ನು ಗಡೀಪಾರು ಮಾಡಲಾಗಿದೆ ಎಂದು ಇಸ್ರೇಲ್‌ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಗ್ರೆಟಾ ಮೊದಲು ಫ್ರಾನ್ಸ್‌ ತೆರಳಿದ್ದು, ಅಲ್ಲಿಂದ ಸ್ವೀಡನ್‌ ದೇಶಕ್ಕೆ ಹೋಗಿದ್ದಾರೆ.

ನಿರ್ಬಂಧಗಳನ್ನು ಉಲ್ಲಂಘಿಸಿ ತಮ್ಮ ಜಲಪ್ರದೇಶವನ್ನು ಪ್ರವೇಶಿಸಿದ್ದಕ್ಕಾಗಿ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಇಸ್ರೇಲ್‌ ಹೇಳಿದ್ದು, ಗಾಜಾಕ್ಕೆ ಹೋಗುವುದಾಗಿ ಹಟ ಹಿಡಿದ ಉಳಿದ ಕಾರ್ಯಕರ್ತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅದು ಹೇಳಿದೆ.

ಇಸ್ರೇಲ್‌ ಕಾರ್ಯಕರ್ತರ ಹಡಗನ್ನು ಅದೊಂದು ಸೆಲ್ಫಿ ಹಡಗು ಎಂದು ಕರೆದಿದ್ದು, ಅವರಿಗೆ ಸಹಾಯ ಮಾಡುವ ಉದ್ದೇಶ ಇದ್ದಿರಲಿಲ್ಲ ಎಂದು ಹೇಳಿದೆ.

ನಿರಾಯುಧ ಕಾರ್ಯಕರ್ತರನ್ನು ಬಂಧಿಸುವ ಮೂಲಕ ಇಸ್ರೇಲ್ ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿದೆ ಎಂದು ಅಮ್ನೆಸ್ಟಿ ಇಂಟರ್ನ್ಯಾಷನಲ್ ನಂತಹ ಸಂಸ್ಥೆಗಳು ಟೀಕಿಸಿವೆ.

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಬ್ರಿಟನ್, ಆಸ್ಟ್ರೇಲಿಯಾ, ಕೆನಡಾ, ನ್ಯೂಜಿಲೆಂಡ್ ಮತ್ತು ನಾರ್ವೆ ದೇಶಗಳು ಇಸ್ರೇಲಿ ಸಚಿವ ಇಟಮಾರ್ ಬೆಂಜಿವಿರ್ ಮತ್ತು ಬೆಜಲೆಲ್ ಸ್ಮೋಟ್ರಿಚ್ ವಿರುದ್ದ ನಿರ್ಬಂಧಗಳನ್ನು ಹೇರಿವೆ. ಅವರಿಬ್ಬರನ್ನು ತಮ್ಮ ದೇಶಗಳಿಗೆ ಪ್ರವೇಶಿಸಲು ಬಿಡುವುದಿಲ್ಲ ಎಂದು ಈ ದೇಶಗಳು ಹೇಳಿವೆ.

You cannot copy content of this page

Exit mobile version