ತಿರುಪತಿ: ತಿರುಮಲದಲ್ಲಿ ಈಗಾಗಲೇ ಎರಡ್ಮೂರು ಚಿರತೆ ಸೆರೆ ಸಿಕ್ಕಿದ್ದರೂ ಇತ್ತೀಚಿನ ದಿನಗಳಲ್ಲಿ ಕಾಡುಪ್ರಾಣಿಗಳ ಚಲನವಲನ ಭಯ ಹುಟ್ಟಿಸುತ್ತಿದೆ. ಅಲಿಪಿರಿ-ತಿರುಮಲ ವಾಕಿಂಗ್ ಪಾತ್ ನಲ್ಲಿ ಮತ್ತೊಮ್ಮೆ ಎರಡು ಚಿರತೆ ಮತ್ತು ಕರಡಿ ಕಾಣಿಸಿಕೊಂಡಿದೆ.
ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಅವುಗಳ ಚಲನವಲನ ದಾಖಲಾಗಿದೆ.
ಶುಕ್ರವಾರ ಮತ್ತು ಶನಿವಾರ ಮಧ್ಯರಾತ್ರಿ ವಾಕಿಂಗ್ ಪಾತ್‌ನ ಏಳನೇ ಮೈಲಿನಲ್ಲಿ ಇರಿಸಲಾಗಿದ್ದ ಕ್ಯಾಮೆರಾಗಳಲ್ಲಿ ಕರಡಿ ಮತ್ತು ಎರಡು ಚಿರತೆಗಳು ಕಾಣಿಸಿಕೊಂಡವು. ನರಸಿಂಹಸ್ವಾಮಿ ದೇವಸ್ಥಾನದ ಬಳಿ ಭಾನುವಾರ ಸಂಜೆ ಕರಡಿಯೊಂದು ಓಡಾಡುತ್ತಿರುವುದು ಕಂಡುಬಂದಿದೆ. ಕಾಲಕಾಲಕ್ಕೆ ಪ್ರಾಣಿಗಳ ಚಲನವಲನವನ್ನು ಪತ್ತೆ ಹಚ್ಚುತ್ತಿದ್ದು, ಆ ಮಟ್ಟಿಗೆ ಪಾದಯಾತ್ರೆಯಲ್ಲಿ ಭಕ್ತರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಟಿಟಿಡಿ ಅರಣ್ಯ ಇಲಾಖೆಯ ಡಿಎಫ್‌ಒ ಶ್ರೀನಿವಾಸುಲು ತಿಳಿಸಿದರು.