ಮೈತೊಳೆಯಲು ಕೆರೆಗೆ ಇಳಿದಿದ್ದ ಇಬ್ಬರು ನೀರಿನಲ್ಲಿ ಮುಳುಗಿ ದುರ್ಮರಣ

ಹಾಸನ:  ಜಿಲ್ಲೆಯ  ಅರಸೀಕೆರೆ ತಾಲೂಕಿನ ಜಾವಗಲ್‌ನಲ್ಲಿ ಕುರಿಯನ್ನು ಮೈತೊಳೆಯಲು ಕೆರೆಗೆ ಇಳಿದಿದ್ದ ಇಬ್ಬರು ಸಹೋದರರು ನೀರಿನಲ್ಲಿ ಮುಳುಗಿ ದುರ್ಮರಣ ಹೊಂದಿದ್ದಾರೆ.

ಇಮ್ರಾನ್ (15) ಹಾಗೂ ಯಾಸಿನ್ (13) ಮೃತಪಟ್ಟ ದುರ್ದೈವಿಗಳು. ಇಮ್ರಾನ್ ಹತ್ತನೇ ತರಗತಿ, ಯಾಸಿನ್ ಎಂಟನೇ ತರಗತಿಯಲ್ಲಿ ಓದುತ್ತಿದ್ದರು. ಶಾಲೆಗೆ ರಜೆ ಇದ್ದ ಕಾರಣ ಸಾಕಿದ್ದ ಕುರಿಯನ್ನು ಮೈತೊಳೆಯಲು ಜಾವಗಲ್ ದೊಡ್ಡ ಕೆರೆಗೆ ತೆರಳಿದ್ದ ವೇಳೆ, ಆಕಸ್ಮಿಕವಾಗಿ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಘಟನೆಯ ಬಳಿಕ ಕುರಿಗಾಹಿಗಳ ಸಹಾಯದಿಂದ ಸ್ಥಳೀಯರು ಮೃತದೇಹಗಳನ್ನು ಕೆರೆಯಿಂದ ಹೊರತೆಗೆದರು.

Related Articles

ಇತ್ತೀಚಿನ ಸುದ್ದಿಗಳು