Home ಬ್ರೇಕಿಂಗ್ ಸುದ್ದಿ ಬೇಲೂರು ಕಾರು ಬೈಕ್ ಡಿಕ್ಕಿ ಇಬ್ಬರು ಯುವಕರ ದುರ್ಮರಣ

ಬೇಲೂರು ಕಾರು ಬೈಕ್ ಡಿಕ್ಕಿ ಇಬ್ಬರು ಯುವಕರ ದುರ್ಮರಣ

ಬೇಲೂರು: ಟಿವಿಎಸ್ ಎಕ್ಸೆಲ್‌ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಬೇಲೂರು ತಾಲೂಕಿನ ತೊಳಲು ಗ್ರಾಮದ ಸಮೀಪದ ಮತ್ತಿಹಳ್ಳಿ ಬಳಿ ನಡೆದಿದೆ.

ಮೃತರನ್ನು ಮತ್ತಿಹಳ್ಳಿ ಗ್ರಾಮದ ಶರತ್ (21) ಹಾಗೂ ಅಶೋಕ (20) ಎಂದು ಗುರುತಿಸಲಾಗಿದೆ.
ಇಬ್ಬರು ಯುವಕರು ಟಿವಿಎಸ್ ಎಕ್ಸೆಲ್‌ನಲ್ಲಿ ಚೀಕನಹಳ್ಳಿ ಕಡೆಗೆ ತೆರಳುತ್ತಿದ್ದ ವೇಳೆ, ಚೀಕನಹಳ್ಳಿ ಕಡೆಯಿಂದ ಬೇಲೂರು ಕಡೆಗೆ ಬರುತ್ತಿದ್ದ KA-18 MA-8309 ಸಂಖ್ಯೆಯ ನೆಕ್ಸಾನ್ ಕಾರು ವೇಗವಾಗಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಅಪಘಾತದ ತೀವ್ರತೆಗೆ ಶರತ್ ಮತ್ತು ಅಶೋಕ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂಬಂಧ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
ಘಟನೆಯಿಂದ ಮತ್ತಿಹಳ್ಳಿ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

You cannot copy content of this page

Exit mobile version