Home ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ ಎರಡು ವರ್ಷದಲ್ಲಿ ಅಕ್ಟೋಬರ್‌ನಲ್ಲಿ ನಿರುದ್ಯೋಗ 10.09% ಎರಿಕೆ! – ಸಿಎಂಐಇ ವರದಿ

ಎರಡು ವರ್ಷದಲ್ಲಿ ಅಕ್ಟೋಬರ್‌ನಲ್ಲಿ ನಿರುದ್ಯೋಗ 10.09% ಎರಿಕೆ! – ಸಿಎಂಐಇ ವರದಿ

0

ಬೆಂಗಳೂರು,ನವೆಂಬರ್.‌03: ಅಕ್ಟೋಬರ್‌ನಲ್ಲಿ ಭಾರತದಲ್ಲಿ ನಿರುದ್ಯೋಗದ ಪ್ರಮಾಣ ಎರಡು ವರ್ಷಗಳಲ್ಲಿ ಗರಿಷ್ಠ 10.09% ಕ್ಕೆ ಏರಿಕೆಯಾಗಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (Centre for Monitoring Indian Economy – CMIE) ಡೇಟಾವನ್ನು ಉಲ್ಲೇಖಿಸಿ  ಬ್ಲೂಮ್‌ಬರ್ಗ್ ವರದಿ ಮಾಡಿದೆ.

ಆ ಅಂಕಿಅಂಶವು ಸೆಪ್ಟೆಂಬರ್‌ನಲ್ಲಿ ಇದ್ದ 7.09%  ನಿರುದ್ಯೋಗದ ಪ್ರಮಾಣ ಸುಮಾರು ಶೇಕಡಾ ಮೂರರಷ್ಟು ಹೆಚ್ಚಳವನ್ನು ತೋರಿಸಿದೆ.

ಬ್ಲೂಮ್‌ಬರ್ಗ್ ಪ್ರಕಾರ ಗ್ರಾಮೀಣ ನಿರುದ್ಯೋಗವು 6.2% ರಿಂದ 10.82% ಕ್ಕೆ ಏರಿಕೆಯಾಗಿದೆ. ನಗರ ಪ್ರದೇಶದಲ್ಲಿ ನಿರುದ್ಯೋಗ ಪ್ರಮಾಣ 8.44% ಕ್ಕೆ ಕೊಂಚ ಇಳಿಕೆಯಾಗಿದೆ.  ಸರ್ಕಾರ ನೀಡಿರುವ ಅಂಕಿಅಂಶಗಳ ಪ್ರಕಾರ 2022-2023 ರಲ್ಲಿ ನಿರುದ್ಯೋಗ ಪ್ರಮಾಣ 3.2% ರಷ್ಟಿತ್ತು.

ಆದರೆ ಆರ್ಥಿಕ ತಜ್ಞರು ಕಾರ್ಮಿಕ ಮಾರುಕಟ್ಟೆಯನ್ನು ಉತ್ತಮ ರೀತಿಯಲ್ಲಿ ಮೌಲ್ಯಮಾಪನ ಮಾಡಲು CMIE ಡೇಟಾದ ಮೇಲೆ ಅವಲಂಬಿತರಾಗಿದ್ದಾರೆ. ಏಕೆಂದರೆ ಅದರ ಅಂಕಿಅಂಶಗಳು ತಿಂಗಳ ಸಮೀಕ್ಷೆಗಳ ಮೇಲೆ ಆಧಾರಿತವಾಗಿದೆ. ಆದರೆ, ಇದು ಸರ್ಕಾರಿ ಅಂಕಿಅಂಶಗಳಿಗೆ ವಿರುದ್ಧವಾಗಿದ್ದು, ಇದು ದೇಶಾದ್ಯಂತ ಡೇಟಾವನ್ನು ಹೆಚ್ಚು ಬಾರಿ ಬಿಡುಗಡೆ ಮಾಡುವುದಿಲ್ಲ ಎಂದು ಬ್ಲೂಮ್‌ಬರ್ಗ್ ವರದಿ ಹೇಳಿದೆ.

ಈ ವರ್ಷ ಭಾರತದ ಆರ್ಥಿಕತೆಯು 6% ರಿಂದ 6.5% ರಷ್ಟು ಏರಿಕೆಯಾಗಿದ್ದು ಕಂಡುಬಂದಿದೆ.

ದೇಶದ ಜನಸಂಖ್ಯೆ ದಿನೇ ದಿನೇ ಬೆಳೆಯುತ್ತಿದ್ದು, ಏಪ್ರಿಲ್‌ನಲ್ಲಿ ಭಾರತವು ಚೀನಾವನ್ನು ವಿಶ್ವದ ಜನಸಂಖ್ಯೆಯಲ್ಲಿ ಹಿಂದಿಕ್ಕಿದೆ.  ಆದರೆ ಈ ಬೆಳವಣಿಗೆಯ ಹೊರತಾಗಿಯೂ, ಕಳೆದ ಐದು ವರ್ಷಗಳಿಂದ ಭಾರತದ ವರ್ಕ್‌ಫೋರ್ಸ್‌ ನಿಶ್ಚಲವಾಗಿದೆ ಎಂದು CMIE ಮುಖ್ಯ ಕಾರ್ಯನಿರ್ವಾಹಕ ಮಹೇಶ್ ವ್ಯಾಸ್ ಹೇಳಿಕೆ ದಿ ವೈರ್‌ನಲ್ಲಿ ವರದಿಯಾಗಿದೆ.

ಅಕ್ಟೋಬರ್‌ನಲ್ಲಿ ಸುಮಾರು 10 ಮಿಲಿಯನ್ ಭಾರತೀಯರು ಕೆಲಸ ಔದ್ಯೋಗಿಕ ಮಾರುಕಟ್ಟೆಗೆ ಬಂದಿದ್ದಾರೆ.

ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ (Centre for the Study of Developing Societies) ನಡೆಸಿದ ಸಮೀಕ್ಷೆಯ ಪ್ರಕಾರ ಈ ವರ್ಷದ ಆರಂಭದಲ್ಲಿ 15 ರಿಂದ 34 ವರ್ಷ ವಯಸ್ಸಿನ 36% ಭಾರತೀಯರು ನಿರುದ್ಯೋಗ ದೇಶದ ದೊಡ್ಡ ಸಮಸ್ಯೆ ಎಂದು ಭಾವಿಸಿದ್ದಾರೆ.  

2016 ರಲ್ಲಿ ನಡೆಸಿದ ಇದೇ ರೀತಿಯ ಸಮೀಕ್ಷೆಯ ಜೊತೆಗೆ ತುಲನೆ ಮಾಡಿದರೆ, ನಿರುದ್ಯೋಗವು ದೇಶದ ಅತಿದೊಡ್ಡ ಸಮಸ್ಯೆ ಎಂದು ಭಾವಿಸಿರುವ ಭಾರತೀಯರ ಪ್ರಮಾಣವು ಶೇಕಡಾ 18ಕ್ಕೆ ಏರಿಕೆಯಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಪದವೀಧರರು ಮತ್ತು ಅದಕ್ಕಿಂತ ಉನ್ನತ ಶಿಕ್ಷಣ ಪಡೆದ 40% ವಿದ್ಯಾವಂತರು ಈ ಸಮೀಕ್ಷೆಯಲ್ಲಿ ಪ್ರತಿಕ್ರಿಯೆ ನೀಡಿದ್ದು, ನಿರುದ್ಯೋಗವನ್ನು ದೊಡ್ಡ ಸವಾಲಾಗಿ ಗುರುತಿಸಿದ್ದಾರೆ. ಕೇವಲ 27% ಸಾಕ್ಷರರಲ್ಲದವರು ಪ್ರತಿಕ್ರಿಯೆ ನೀಡಿದ್ದಾರೆ.

You cannot copy content of this page

Exit mobile version