Home ವಿದೇಶ ಇನ್ನೂ 487 ಭಾರತೀಯರ ಗಡೀಪಾರಿಗೆ ಮುಂದಾದ ಅಮೇರಿಕಾ

ಇನ್ನೂ 487 ಭಾರತೀಯರ ಗಡೀಪಾರಿಗೆ ಮುಂದಾದ ಅಮೇರಿಕಾ

0

ಅಮೆರಿಕದಲ್ಲಿ ಅಕ್ರಮ ವಲಸಿಗರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತಿರುವ ಟ್ರಂಪ್ ಆಡಳಿತವು ಹೆಚ್ಚು ಆಕ್ರಮಣಕಾರಿಯಾಗುತ್ತಿದೆ.

ಈಗಾಗಲೇ 104 ಭಾರತೀಯರನ್ನು ಕೈಕೋಳ ಹಾಕಿ ಸೇನಾ ವಿಮಾನದಲ್ಲಿ ಅಮೃತಸರಕ್ಕೆ ಕಳುಹಿಸಿರುವ ಟ್ರಂಪ್ ಆಡಳಿತ, ಈಗ ಇನ್ನೂ ಕೆಲವು ಭಾರತೀಯರನ್ನು ವಾಪಸ್ ಕಳುಹಿಸಲು ಸಿದ್ಧತೆ ನಡೆಸಿದೆ.

ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರು, ಪ್ರಸ್ತುತ 487 ಭಾರತೀಯರು ಗಡೀಪಾರು ಎದುರಿಸುತ್ತಿದ್ದಾರೆ ಮತ್ತು ಅವರೆಲ್ಲರೂ ಅಂತಿಮ ಗಡೀಪಾರು ಪಟ್ಟಿಯಲ್ಲಿದ್ದಾರೆ ಎಂದು ಅಮೆರಿಕ ಸರ್ಕಾರ ಭಾರತಕ್ಕೆ ತಿಳಿಸಿದೆ ಎಂದು ಬಹಿರಂಗಪಡಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮೆರಿಕಕ್ಕೆ ಅಕ್ರಮವಾಗಿ ವಲಸೆ ಬಂದಿರುವ ಭಾರತೀಯರನ್ನು ಸುರಕ್ಷಿತವಾಗಿ ಮತ್ತು ಗೌರವಯುತವಾಗಿ ಭಾರತಕ್ಕೆ ಮರಳಿ ಕರೆತರಲು ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು.

12 ರಿಂದ ಮೋದಿ ಅಮೆರಿಕ ಭೇಟಿ

ಪ್ರಧಾನಿ ನರೇಂದ್ರ ಮೋದಿ ಅವರು ಈ ತಿಂಗಳ 12 ಮತ್ತು 13 ರಂದು ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ. ಎರಡನೇ ಅವಧಿಗೆ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮೋದಿ ಮತ್ತು ಟ್ರಂಪ್ ಅವರ ನಡುವಿನ ಮೊದಲ ಸಭೆ ಇದಾಗಿದೆ. ಭಾರತೀಯ ಆಮದಿನ ಮೇಲೆ ಸುಂಕ ವಿಧಿಸುವುದು, ಅಕ್ರಮ ವಲಸಿಗರನ್ನು ಭಾರತಕ್ಕೆ ಗಡೀಪಾರು ಮಾಡುವುದು ಸೇರಿದಂತೆ ಹಲವಾರು ದ್ವಿಪಕ್ಷೀಯ ವಿಷಯಗಳ ಕುರಿತು ಚರ್ಚಿಸಲಾಗುವುದು.

You cannot copy content of this page

Exit mobile version