Home ರಾಜ್ಯ ಧಾರವಾಡ ಧಾರವಾಡದಲ್ಲಿ “ಮನುಷ್ಯತ್ವದೆಡೆಗೆ ಸಮುದಾಯ ಜಾಥಾ 50” ಕಾರ್ಯಕ್ರಮ ಸಮಾರೋಪ ಸಮಾರಂಭ

ಧಾರವಾಡದಲ್ಲಿ “ಮನುಷ್ಯತ್ವದೆಡೆಗೆ ಸಮುದಾಯ ಜಾಥಾ 50” ಕಾರ್ಯಕ್ರಮ ಸಮಾರೋಪ ಸಮಾರಂಭ

ಧಾರವಾಡ : ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ಅಚ್ಚಳಿಯದ ಗುರುತುಮೂಡಿಸಿರುವ ಸಮುದಾಯ ಸಾಂಸ್ಕೃತಿಕ ಸಂಘಟನೆಯು ಸ್ಥಾಪನೆಯಾಗಿ ಐವತ್ತು ವರ್ಷ ಪೊರೈಸಿರುವ ಸಂದರ್ಭದಲ್ಲಿ “ಮನುಷ್ಯತ್ವದೆಡೆಗೆ ಸಮುದಾಯ ಜಾಥಾ 50” ಆಚರಣೆಯ ಭಾಗವಾಗಿ ಕಳೆದ ಒಂದುವರ್ಷದಿಂದ ರಾಜ್ಯದಾದ್ಯಂತ ಹಲವಾರು ಕಾರ್ಯಕ್ರಮಗಳು ನೆಡೆಯುತ್ತಿವೆ,ಕಳೆದ ವರ್ಷ ಆಗಸ್ಟ್ ನಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮೂರು ದಿನಗಳ ಸಾಂಸ್ಕೃತಿಕ ಉತ್ಸವದೊಂದಿಗೆ ಉದ್ಘಾಟನೆಗೊಂಡ ನಂತರ, ಸಮುದಾಯವು ಮೈಸೂರು, ರಾಯಚೂರು, ಕುಂದಾಪುರ, ಕೋಲಾರ, ಧಾರವಾಡ, ಶಿವಮೊಗ್ಗ, ಗುಲ್ಬರ್ಗ ಮುಂತಾದ ಕಡೆ ರಂಗೋತ್ಸವ, ವಿಚಾರ ಸಂಕಿರಣಗಳು, ಕಲಾ ಶಿಬಿರಗಳು, ಬೀದಿನಾಟಕ, ಮುಂತಾದ ಕಾರ್ಯಕ್ರಮಗಳನ್ನು ಸಂಘಟಿಸಿದೆ.

ವರ್ಷವಿಡೀ ನೆಡೆದ ಮನುಷ್ಯತ್ವದೆಡೆಗೆ ಸಮುದಾಯ ಜಾಥಾ 50 ಕಾರ್ಯಕ್ರಮದ ಸಮಾರೋಪ ಉತ್ಸವದ ಉದ್ಘಾಟನಾ ಕಾರ್ಯಕ್ರಮವು ಧಾರವಾಡದ ಚಿತ್ರಕಲಾ ಮಹಾವಿದ್ಯಾಲಯದ ಆವರಣದಲ್ಲಿ ನೆರವೇರಿತು. ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡದ ಪ್ರಧಾನ ಕಾರ್ಯದರ್ಶಿಗಳಾದ ಶಂಕರ ಹಲಗತ್ತಿಯವರು ಸಮಾರೋಪ ಸಮಾರಂಭದ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು ವ್ಯವಸ್ಥೆಯ ವಿರುದ್ಧ ಬೀದಿನಾಟಕ ಮಾಡಲು ಹೆದರಬೇಕಾದ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ, ಇಂತಹ ಸಂದರ್ಭದಲ್ಲಿ ಕಳೆದ ಐವತ್ತು ವರ್ಷದಿಂದ ಸಮುದಾಯ ನಿರಂತರವಾಗಿ ಸಾಂಸ್ಕೃತಿಕ ಪ್ರತಿರೋಧದ ದ್ವನಿಯಾಗಿ ಕೆಲಸ ಮಾಡುತ್ತಿರುವುದು ತುಂಬಾ ಮಹತ್ವದ್ದು ಎಂದರು. ಕುಂಚಶಿಲ್ಪಿ ಶ್ರೀ ಡಾ.ಹಾಲಭಾವಿ ಸ್ಮಾರಕ ಟ್ರಸ್ಟ್ ಧಾರವಾಡ ಅಧ್ಯಕ್ಷರಾದ ಶ್ರೀ ಬಿ. ಮಾರುತಿಯವರು ಮನುಷ್ಯತ್ವಡೆಗೆ ಸಮುದಾಯ ಜಾಥಾ ಕಲಾಶಿಬಿರದ ಉದ್ಘಾಟನೆ ಮಾಡಿದರು. ಇಪ್ಪತೈದಕ್ಕೂ ಹೆಚ್ಚು ಕಲಾವಿದರು ಈ ಶಿಬಿರದಲ್ಲಿ ಭಾಗವಹಿಸಿ ಕಲಾಕೃತಿಗಳನ್ನು ರಚಿಸಿದರು. ಶ್ರೀ ಬಸವರಾಜ ಕುರಿ, ಶ್ರೀಮತಿ ಶ್ಯಾಮಲಾ ಗುರುಪ್ರಸಾದ್, ಸಮುದಾಯ ರಾಜ್ಯ ಅಧ್ಯಕ್ಷರಾದ ಶ್ರೀ ಶಶಿಧರ್, ಗೌರವಾಧ್ಯಕ್ಷರಾದ ಜನಾರ್ಧನ್ ರವರು ಮುಖ್ಯ ಅತಿಥಿಗಳಾಗಿದ್ದರು. ವಾಸುದೇವ ಗಂಗೇರ ಸ್ವಾಗತಿಸಿದರು, ಜೋಸೆಫ್ ಮಲ್ಲಾಡಿ ವಂದನಾರ್ಪಣೆ ಮಾಡಿದರು ಡಾ ಪ್ರತಾಪ್ ಬಹುರೂಪಿ ಕಾರ್ಯಕ್ರಮ ಸಂಯೋಜನೆ ಮಾಡಿದರು.

You cannot copy content of this page

Exit mobile version